Site icon PowerTV

ಪಾಕ್‌ನಿಂದ ಶೆಲ್ ದಾಳಿ: ಸ್ಥಳಾಂತರಗೊಂಡ ಜನರೊಂದಿಗೆ ಕ್ರಿಕೆಟ್ ಆಡಿದ ಒಮರ್​ ಅಬ್ದುಲ್ಲಾ

ಆಪರೇಷನ್​ ಸಿಂಧೂರದ ನಂತರ ಭಾರತ ಮತ್ತು ಪಾಕಿಸ್ತಾನದ ಗಡಿಯಲ್ಲಿ ಉದ್ವಿಘ್ನತೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು. ಇದರ ನಡುವೆ ಗಡಿ ಪ್ರದೇಶದಲ್ಲಿದ್ದ ಜನರನ್ನು ನಿರಾಶ್ರಿತರ ಕೇಂದ್ರಗಳಿಗೆ ಸ್ಥಳಾಂತರಿಸಲಾಗಿದೆ. ಇಂದು ನಿರಾಶ್ರಿತ ಕೇಂದ್ರಕ್ಕೆ ಭೇಟಿ ನೀಡಿದ ಜಮ್ಮು ಕಾಶ್ಮೀರದ ಸಿಎಂ ಓಮರ್​ ಅಬ್ದುಲ್ಲಾ ಕೆಲ ಕಾಲ ಅಲ್ಲಿದ್ದ ಮಕ್ಕಳೊಂದಿಗೆ ಕ್ರಿಕೆಟ್​ ಆಟವಾಡಿದರು.

ಸಾಂಬಾದಲ್ಲಿನ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆಯುತ್ತಿರುವ ಸ್ಥಳೀಯರನ್ನು ಭೇಟಿಯಾದ ಸಂದರ್ಭದಲ್ಲಿ ಒಮರ್ ಅಬ್ದುಲ್ಲಾ ಅವರು ಪುಟ್ಟ ಬಾಲಕನೊಂದಿಗೆ ಕ್ರಿಕೆಟ್ ಆಡಿದ್ದು, ಅವರು ಬ್ಯಾಟ್ ಬೀಸಿರುವ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಇದೀಗ ಹರಿದಾಡುತ್ತಿವೆ. ಈ ವಿಡಿಯೋಗೆ ನೆಟ್ಟಿಗರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.  ಇದನ್ನೂ ಓದಿ :ದೇಶ ದ್ರೋಹಿ ಪೋಸ್ಟ್​: ‘ಸಿಂಧೂರ’ಕ್ಕೆ ಧಿಕ್ಕಾರ ಎಂದಿದ್ದ ಕರಾವಳಿ ಯುವತಿ ಮೇಲೆ ನೆಟ್ಟಿಗರ ಆಕ್ರೋಶ

ಗುರುವಾರ ರಾತ್ರಿ ಜಮ್ಮು&ಕಾಶ್ಮೀರದ ಪೂಂಚ್​​ ಜಿಲ್ಲೆಗಳಲ್ಲಿ ಪಾಕಿಸ್ತಾನ ಡ್ರೋನ್​ ಮತ್ತು ಕ್ಷಿಪಣಿಗಳನ್ನು ಬಳಸಿ ದಾಳಿ ನಡೆಸಿತ್ತು. ಇದನ್ನು ಓಮರ್ ಅಬ್ದುಲ್ಲಾ ತೀವ್ರವಾಗಿ ಖಂಡಿಸಿದ್ದರು. ಪಾಕ್ ಉಗ್ರರು ನಮ್ಮ ಜನರ ಮೇಲೆ ದಾಳಿ ನಡೆಸಿ ಅಮಾಯಕರನ್ನ ಕೊಂದರು. ಅವರ ಈ ದಾಳಿಗೆ ನಾವು ಪ್ರತಿಕ್ರಿಯಿಸಬೇಕಾಯಿತು ಎಂದು ಒಮರ್ ಅಬ್ದುಲ್ಲಾ ಹೇಳಿಕೊಂಡಿದ್ದರು.

ಇದನ್ನೂ ಓದಿ :300 ರಿಂದ 400 ಡ್ರೋನ್​ ಬಳಸಿ ಪಾಕ್ ದಾಳಿ ನಡೆಸಿದೆ, ಇಬ್ಬರು ವಿದ್ಯಾರ್ಥಿಗಳ ಸಾವು: ವಿದೇಶಾಂಗ ಇಲಾಖೆ

ಗುರುವಾರ ರಾತ್ರಿ ಪಾಕಿಸ್ತಾನದ ಸಶಸ್ತ್ರ ಪಡೆಗಳು ಡ್ರೋನ್ ಹಾಗೂ ಕ್ಷಿಪಣಿ ದಾಳಿಗೆ ಮುಂದಾಗಿತ್ತು. ಈ ವೇಳೆ ನಮ್ಮ ಸೇನೆಯು ಜಮ್ಮು ಮತ್ತು ಕಾಶ್ಮೀರ, ರಾಜಸ್ಥಾನ, ಪಂಜಾಬ್ ಮತ್ತು ಗುಜರಾತ್‌ನ ಪಟ್ಟಣಗಳಲ್ಲಿ ಸೈರನ್ ಮೊಳಗಿಸಿ ಜನರಿಗೆ ಮುನ್ನೆಚ್ಚರಿಕೆ ನೀಡಿತು. ಅಲ್ಲದೇ ಪಾಕ್‌ನ ಡ್ರೋನ್‌ಗಳನ್ನು ಹೊಡೆದುರುಳಿಸುವಲ್ಲಿ ಸೇನೆ ಯಶಸ್ವಿಯಾಯಿತು ಎಂದು ಹೇಳಿದರು.

 

Exit mobile version