Site icon PowerTV

‘ಮೋದಿ ಹೆಸರೇಳಲು ಹೆದರುವ ರಣಹೇಡಿ ನಮ್ಮ ಪ್ರಧಾನಿ’: ಪಾಕ್​ ಸಂಸತ್ತಿನಲ್ಲಿ ಪಾಕ್​ ಪ್ರಧಾನಿ​ ಮಾನಭಂಗ

ಇಸ್ಲಮಾಬಾದ್​: ಭಾರತ ನಡೆಸುತ್ತಿರುವ ದಾಳಿಯ ಪರಿಣಾಮವಾಗಿ ಪಾಕಿಸ್ತಾನದಲ್ಲಿ ಆಂತರಿಕ ಸಂಘರ್ಷ ಹೆಚ್ಚಾಗುತ್ತಿದ್ದು. ಪಾಕಿಸ್ತಾನದ ಸಂಸದನೊಬ್ಬ ಪ್ರಧಾನಿ ಶೆಹಬಾಜ್​ ಷರೀಪ್​ರನ್ನು ರಣಹೇಡಿ ಎಂದು ಕರೆಯುವ ಮೂಲಕ ಹೀಗಳೆದಿದ್ದಾರೆ.

ಪಾಕಿಸ್ತಾನದ ಸಂಸದ ಬಜ್ದಿಲ್​ ಎಂಬಾತ ಪಾಕ್​ ಪ್ರಧಾನಿ ಶೆಹಬಾಜ್​ ಷರೀಫ್​ರನ್ನು ಸಂಸತ್ತಿನಲ್ಲಿ ಹೀಗಳೆದಿದ್ದು. “ನಮ್ಮ ಪ್ರಧಾನಿ ರಣಹೇಡಿಯಂತೆ ವರ್ತಿಸುತ್ತಿದ್ದಾರೆ. ಮೋದಿ ಹೆಸರನ್ನು ಹೇಳಲು ಆಗದವರು ಪಾಕಿಸ್ತಾನದ ಪ್ರಧಾನಿಯಾಗಿದ್ದಾರೆ, ಇವರಿಂದ ನಮ್ಮ ಸೇನೆಯ ಮನೋಸ್ಥೈರ್ಯವೇ ಕುಸಿದು ಹೋಗಿದೆ ಎಂದು ಹೇಳಿದರು.

ಇದನ್ನೂ ಓದಿ :ಯುದ್ಧ ವಿಮಾನಗಳ ನಿರ್ವಹಣೆ: HAL ನೌಕರರ ರಜೆ ರದ್ದು, ತುರ್ತು ಪರಿಸ್ಥಿತಿ ಎದುರಿಸಲು ಸೂಚನೆ

ಮುಂದುವರಿದು ಮಾತನಾಡಿದ ಬಜ್ದೀರ್ ‘ಟಿಪ್ಪು ಸುಲ್ತಾನ್​ ಹೇಳಿದ ಮಾತುಗಳನ್ನ ಉಲ್ಲೇಖಿಸಿ ತಮ್ಮಪ್ರಧಾನಿಯ ಮಾನಭಂಗ ಮಾಡಿದ್ದು. ರಾಜ ಸಿಂಹದಂತಿದ್ದರೆ, ಆತನ ಸೇನೆಯೂ ಸಿಂಹದಂತೆ ಇರುತ್ತದೆ. ಆದರೆ ರಾಜ ರಣಹೇಡಿಯಾಗಿದ್ದರೆ, ಸೇನೆ ಅದೆಷ್ಟೇ ಬಲಿಷ್ಟವಾಗಿದ್ದರು ಅದರಿಂದ ಉಪಯೋಗವಿಲ್ಲ. ನಮ್ಮ ಪ್ರಧಾನಿಯೂ ರಣ ಹೇಡಿಯಾಗಿದ್ದಾರೆ ಎಂದು ಪಾಕಿಸ್ತಾನದ ಸಂಸದರೊಬ್ಬರು ಸಂಸತ್ತಿನಲ್ಲಿ ತಮ್ಮ ಪ್ರಧಾನಿ ವಿರುದ್ದ ಗುಡುಗಿದ್ದಾರೆ.

Exit mobile version