Site icon PowerTV

ಗಂಡನನ್ನು ಪಟಾಯಿಸಿಕೊಂಡಿದ್ದ ಪ್ರೇಯಸಿಗೆ, ರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಹೊಡೆದ ಪತ್ನಿ

ಹೆಣ್ಣು ಒಲಿದರೆ ನಾರಿ.. ಮುನಿದರೆ ಹೆಮ್ಮಾರಿ ಎಂಬುದಕ್ಕೆ ಬೆಸ್ಟ್ ಎಕ್ಸಾಂಪಲ್ ಈ ದೃಶ್ಯಾವಳಿ. ಮಹಿಳೆಯೊಬ್ಬಳು ತನ್ನ ಗಂಡನ ಕಳ್ಳ ಸಂಬಂಧದ ಪ್ರೇಯಸಿಯ ಮನೆಗೆ ನುಗ್ಗಿ ಆಕೆಯನ್ನು ವಿಚಾರಿಸಿದ್ದು ಮಾತ್ರವಲ್ಲದೆ ಆಕೆಯ ಮೇಲೆ ಮನಸ್ಸೋ ಇಚ್ಛೆ ಹಲ್ಲೆ ಮಾಡುತ್ತಿರುವ ದೃಶ್ಯಾವಳಿಯೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ಸದ್ದು ಮಾಡಿದೆ.

ಇದನ್ನೂ ಓದಿ:ಪಹಲ್ಗಾಂ ದಾಳಿಯಲ್ಲಿ ಸಾವನ್ನಪ್ಪಿದ್ದ ನೌಕಾ ಅಧಿಕಾರಿ ನಿವಾಸಕ್ಕೆ ರಾಹುಲ್​ ಭೇಟಿ

ಇಡ್ಕೊಂಡೋಳು ಇರೋ ತನಕ ಕಟ್ಕ್ನೋಡೋಳು ಕಡೆ ತನಕ ಇದು ಗಾದೆ ಮಾತು. ಆದರೆ ಅದ್ಯಾಕೋ ಇತ್ತೀಚಿನ ದಿನಗಳಲ್ಲಿ ಈ ಗಾಧೆ ಮಾತು ತನ್ನ ಸಾರವನ್ನೆ ಕಳ್ಕೊಂಡಿದೆ ಅನ್ಸುತ್ತೆ. ಉತ್ತರ ಪ್ರದೇಶದ ಮುಜಾಫರ್​ ನಗರದಲ್ಲಿ ಈ ಘಟನೆ ನಡೆದಿದ್ದು, ಮಹಿಳೆಯೊಬ್ಬಳು ಗಂಡನ ಪ್ರೇಯಸಿಯ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾಳೆ. ಹೆಂಡತಿಗೆ ಗಂಡನ ಕಳ್ಳ ಸಂಬಂದದ ವಾಸನೆ ಮೂಗಿಗೆ ಬಡಿದಿದ್ದೆ ತಡ ಗಂಡನ ಪ್ರೇಯಸಿಯ ವಿಳಾಸವನ್ನೆ ಪತ್ತೆ ಹಚ್ಚಿ ಆಕೆಯ ಮನೆಗೆ ಎಂಟ್ರೀ ಕೊಟ್ದಿದ್ದಾಳೆ. ಪ್ರಿಯತಮನ ಹೆಂಡ್ತಿಯೆ ತನ್ನ ಕಣ್ಣ ಮುಂದೆ ಚಂಡಿ ಅವತಾರದಲ್ಲಿ ಬಂದು ನಿಂತಾಗ ಮಹಿಳೆ ನಡುಗಿ ಹೋಗಿದ್ದಾಳೆ.

ಇದನ್ನೂ ಓದಿ :‘ಸೂಸೈಡ್​ ಬಾಂಬರ್​ ಆಗಿ ದೇಶಕ್ಕೆ ಬಲಿದಾನ ನೀಡಲು ನಾನು ಸಿದ್ದ’: ಮತ್ತೆ ಪುನರುಚ್ಚರಿಸಿದ ಜಮೀರ್​

ಇನ್ನು ಇವಳ ಕೈನಲ್ಲಿ ಸಿಕ್ಕಿ ಹಾಕಿಕೊಂಡರೆ ಮುಗೀತು ಅಂತ ಅಂದ್ಕೊಂಡು ಅಲ್ಲಿಂದ ಓಡಿ ಹೋಗೋಕೆ ಯತ್ನಿಸಿದ್ದಾಳೆ. ವಿಳಾಸ ಹುಡುಕಿಕೊಂಡು ಹೋದವಳು ಇನ್ನೂ ಕೈಗೆ ಸಿಕ್ಕಿದ ಗಂಡನ ಪ್ರೇಯಸಿಯನ್ನು ಬಿಡ್ತಾಳ ಹೇಳಿ. ಮೊದಲೆ ಚಂಡಿ ಅವತಾರ ತಾಳಿದ ಪತ್ನಿ ಗಂಡನ ಮಾಜಿ ಪ್ರೇಯಸಿಯ ಜುಟ್ಟು ಹಿಡ್ಕೊಂಡು ಅಟ್ಟಾಡಿಸಿಕೊಂಡು ಸರಿಯಾಗಿ ಬಾರಿಸಿದ್ದಾಳೆ.. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಕಳ್ಳ ಸಂಬಂಧ ಇಟ್ಕೊಂಡವರಿಗೆ ಇದು ಎಚ್ಚರಿಕೆ ಎಂಬಂತೆ ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.

Exit mobile version