ಹರಿಯಾಣ : ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಮಂಗಳವಾರ (ಮೇ.6) ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಹುತಾತ್ಮರಾದ ನೌಕಾಪಡೆಯ ಅಧಿಕಾರಿ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಕುಟುಂಬ ಸದಸ್ಯರನ್ನು ಭೇಟಿಯಾಗಿದ್ದಾರೆ. ಈ ವೇಳೆ ಹರಿಯಾಣ ವ್ಯವಹಾರಗಳ ಉಸ್ತುವಾರಿ ಬಿ.ಕೆ ಹರಿಪ್ರಸಾದ್, ಹರಿಯಾಣ ಕಾಂಗ್ರೆಸ್ ಮುಖ್ಯಸ್ಥ ಉದಯ್ ಭಾನ್, ಕಾಂಗ್ರೆಸ್‌ನ ರೋಹ್ಟಕ್ ಸಂಸದ ದೀಪೇಂದರ್ ಸಿಂಗ್ ಹೂಡಾ ಮತ್ತು ಪಕ್ಷದ ನಾಯಕ ದಿವ್ಯಾಾಂಶು ಬುಧಿರಾಜ ಕೂಡ ಉಪಸ್ಥಿತರಿದ್ದರು.
ಭಾರತೀಯ ನೌಕಾ ಅಧಿಕಾರಿಯ ನಿವಾಸಕ್ಕೆ ಭೇಟಿ ಕೊಟ್ಟ ರಾಹುಲ್ ಗಾಂಧಿ ವಿನಯ್ ನರ್ವಾಲ ಕುಟುಂಬದೊಂದಿಗೆ ಒಂದುವರೆ ಗಂಟೆಗೂ ಹೆಚ್ಚು ಕಾಲ ಮಾತನಾಡಿ ಅವರ ಕುಟುಂಬಕ್ಕೆ ಸಾತ್ವಾಂನ ಹೇಳಿದರು. ಈ ಕುರಿತು ಹರಿಯಾಣ ಕಾಂಗ್ರೆಸ್ ಅಧ್ಯಕ್ಷ ಶ್ರೀ ಭನ್ ಮಾಧ್ಯಮಕ್ಕೆ ತಿಳಿಸಿದ್ದು. ರಾಹುಲ್ ಗಾಂಧಿ ಕುಟುಂಬಕ್ಕೆ ಸಾಂತ್ವನ ಹೇಳಿ ದುಃಖ ಹಂಚಿಕೊಂಡರು. “ಅವರು ತಮ್ಮ ಪೋಷಕರು ಸೇರಿದಂತೆ ಕುಟುಂಬ ಸದಸ್ಯರನ್ನು ಭೇಟಿಯಾದರು” ಎಂದು ಭನ್ ಹೇಳಿದರು.
ಇದನ್ನೂ ಓದಿ:ಅಕ್ರಮ ಗಣಿಗಾರಿಕೆ ಪ್ರಕರಣ: ಜರ್ನಾಧನ್ ರೆಡ್ಡಿಗೆ 7 ವರ್ಷ ಜೈಲು ಶಿಕ್ಷೆ ಪ್ರಕಟ
ಮೂರು ವಾರಗಳ ಹಿಂದೆ ವಿವಾಹವಾದ 26 ವರ್ಷದ ಲೆಫ್ಟಿನೆಂಟ್ ವಿನಯ್ ನರ್ವಾಲ್, ಅವರ ಪತ್ನಿ ಶ್ರೀಮತಿ ಹಿಮಾಂಶಿ ಅವರೊಂದಿಗೆ ಪಹಲ್ಗಾಮ್‌ಗೆ ಹನಿಮೂನ್ ಪ್ರವಾಸಕ್ಕೆ ಹೋಗಿದ್ದಾಗ, ಏಪ್ರಿಲ್ 22 ರಂದು ಭಯೋತ್ಪಾದಕರು ಅವರ ಮೇಲೆ ಗುಂಡು ಹಾರಿಸಿದರು. ಈ ದಾಳಿಯಲ್ಲಿ ವಿನಯ್ ನರ್ವಾಲ್ ಸೇರಿದಂತೆ 26 ಪ್ರವಾಸಿಗರು ಸಾವನ್ನಪ್ಪಿದ್ದರು.