Site icon PowerTV

ಭೀಕರ ಅಪಘಾತ: ನಿಶ್ಚಿತಾರ್ಥ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ಐವರ ಧಾರುಣ ಸಾ*ವು

ಹುಬ್ಬಳ್ಳಿ: ಲಾರಿ-ಕಾರು ನಡುವೆ ಮುಖಾಮುಖಿ ಡಿಕ್ಕಿಯಾಗಿ ಭೀಕರ ಅಪಘಾತ ಸಂಭವಿಸಿದ್ದು. ಅಪಘಾತದಲ್ಲಿ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ. ಮಾಹಿತಿ ಪ್ರಕಾರ ಮೃತರೆಲ್ಲರು ನಿಶ್ಚಿತಾರ್ಥ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವೇಳೆ ಅಪಘಾತ ಸಂಭವಿಸಿ ಎಂದು ತಿಳಿದು ಬಂದಿದೆ.

ಧಾರವಾಡ ಜಿಲ್ಲೆಯ, ಹುಬ್ಬಳ್ಳಿ ತಾಲೂಕಿನ, ಕಿರೇಸೂರು ಕ್ರಾಸ್ ಬಳಿ ಅಪಘಾತ ಸಂಭವಿಸಿದ್ದು. ಅಪಘಾತದಲ್ಲಿ ಶಿವಮೊಗ್ಗ ಜಿಲ್ಲೆಯ ಸಾಗರದ ಶ್ವೇತಾ(29), ಅಂಜಲಿ (26), ಸಂದೀಪ್ (26), ವಿಠ್ಠಲ್ (55) ಮತ್ತು ಶಶಿಕಲಾ (40) ಮೃತಪಟ್ಟಿದ್ದಾರೆ. ಮೃತರು ಮೂಲತಃ ಶಿವಮೊಗ್ಗದವರಾಗಿದ್ದರು, ಎಲ್ಲರೂ ಬಾಗಲಕೋಟೆಯ ಕುಳಿಗೇರಿಯಲ್ಲಿ ನೆಲೆಸಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ :ಹಳೆ ವೈಷಮ್ಯ: ಫಿಲ್ಡ್​​ನಲ್ಲಿ ಹೆಸರು ಮಾಡಲು ರೌಡಿಶೀಟರ್​ ಬರ್ಬರ ಹ*ತ್ಯೆ

ಬಾಗಲಕೋಟೆಯಿಂದ ಸಹೋದರಿ ಶ್ವೇತ ನಿಶ್ಚಿತಾರ್ಥಕ್ಕೆಂದು ಕುಟುಂಬಸ್ಥರು ಶಿವಮೊಗ್ಗಕ್ಕೆ ಬಂದಿದ್ದರು. ನಿಶ್ಚಿತಾರ್ಥ ಮುಗಿಸಿಕೊಂಡು ವಾಪಾಸ್​ ತೆರಳುವಾಗಿ ಅಪಘಾತ ಸಂಭವಿಸಿದೆ. ಮೃತದೇಹಗಳನ್ನು ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಯ ಶವಗಾರಕ್ಕೆ ರವಾನಿಸಲಾಗಿದ್ದು. ಆಸ್ಪತ್ರೆಯ ಶವಗಾರದ ಮುಂದೆ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

Exit mobile version