Site icon PowerTV

ಪ್ರೀತಿಸಿ ಮನೆಬಿಟ್ಟು ಬಂದಿದ್ದ ಯುವತಿಯನ್ನ ಧಾರುಣವಾಗಿ ಕೊ*ಲೆ ಮಾಡಿದ ಗಂಡ

ಆನೇಕಲ್​: ಮನೆಯವರನ್ನು ಧಿಕ್ಕರಿಸಿ ಪ್ರೀತಿಸಿದ ಹುಡುಗನ ಹಿಂದೆ ಓಡಿಬಂದಿದ್ದ ಯುವತಿಯೊಬ್ಬಳು ಸ್ವಂತ ಗಂಡನಿಂದಲೇ ಕೊಲೆಯಾಗಿರುವ ಘಟನೆ ಬೆಂಗಳೂರಿನ ಹೊರವಲಯದಲ್ಲಿ ನಡೆದಿದ್ದು. ಮೃತಪಟ್ಟ ಯುವತಿಯನ್ನು 21 ವರ್ಷದ ಬರ್ಸಾ ಪ್ರಿಯದರ್ಶಿನಿ ಎಂದು ಗುರುತಿಸಲಾಗಿದೆ.

ಹೆತ್ತವರನ್ನು ಧಿಕ್ಕರಿಸಿ ಮನೆಯಿಂದ ಹೊರಬಂದು ಪ್ರೀತಿಸಿದ ಹುಡುಗನನ್ನು ಮದುವೆಯಾಗಿದ್ದ ಒಡಿಶಾ ಮೂಲದ ಗೃಹಿಣಿ ಇದೀಗ ಗಂಡನಿಂದಲೇ ಬೆಂಗಳೂರಿನಲ್ಲಿ ಕೊಲೆಯಾಗಿರುವಂತಹ ಧಾರಣ ಘಟನೆ ಬೆಂಗಳೂರು ಹೊರ ವಲಯದ ಆನೇಕಲ್ ತಾಲೂಕಿನ ವಾಬಸಂದ್ರ ಗ್ರಾಮದಲ್ಲಿ ನಡೆದಿದೆ.

ಇದನ್ನೂ ಓದಿ:ಗಂಡನನ್ನು ಪಟಾಯಿಸಿಕೊಂಡಿದ್ದ ಪ್ರೇಯಸಿಗೆ, ರಸ್ತೆಯಲ್ಲಿ ಅಟ್ಟಾಡಿಸಿಕೊಂಡು ಹೊಡೆದ ಪತ್ನಿ

ಒಡಿಸ್ಸಾ ಮೂಲದ ಬರ್ಸ ಪ್ರಿಯದರ್ಶಿನಿ ಅಮೃತ ಕೊಲೆಯಾದ ದುರ್ದೈವಿಯಾಗಿದ್ದು ಬಿಹಾರ ಮೂಲದ ಮೋಹನ್ ಕುಮಾರ್ ಕೊಲೆ ಮಾಡಿ ಪರಾರಿಯಾಗಿರುವ ಗಂಡನಾಗಿದ್ದಾನೆ. ದಂಪತಿ ಕಳೆದ ಒಂದು ವಾರದ ಹಿಂದೆ ಬಾಬಸಂದ್ರ ಸಮೀಪದ ನಂಜಾ ರೆಡ್ಡಿ ಲೇಔಟ್ ಗೆ ಬಂದಿದ್ದರು. ರಾತ್ರಿ 12:00 ಸಮಯದಲ್ಲಿ ಮಗು ಕಿರುಚಾಟ ಕೇಳಿ ಬಂದ ಹಿನ್ನೆಲೆ ಮನೆ ಮಾಲೀಕ ಹೋಗಿ ನೋಡಿದಾಗ ಗಂಡ ಸೋಹನ್ ಕುಮಾರ್ ಅಲ್ಲಿಂದ ಓಡಿ ಹೋಗಿದ್ದಾನೆ ಅನುಮಾನ ಬಂದು ಮನೆ ಬಾಗಿಲು ತೆಗೆದಾಗ ಆಕೆಯನ್ನು ಕೊಲೆ ಮಾಡಿರುವುದು ಬೆಳಕಿಗೆ ಬಂದಿದೆ.

ಇನ್ನು ಮೃತ ಬರ್ಸ ಮೂರು ವರ್ಷದ ಹಿಂದೆ ಮನೆಯವರನ್ನು ಧಿಕ್ಕರಿಸಿ ಬಂದು ಬಿಹಾರ ಮೂಲದ ಸೋಹನ್ ಕುಮಾರ್​ನನ್ನು ತಮಿಳುನಾಡಿನಲ್ಲಿ ಮದುವೆಯಾಗಿದ್ದಳು. ಎರಡು ವರ್ಷಗಳ ಹಿಂದೆ ಸೋಹನ್​ ಕುಮಾರ್​ ಮಗು ಡೆಲಿವೆರಿಗೆಂದು ಹೆಂಡತಿಯನ್ನು ಬಿಹಾರದಲ್ಲಿ ಬಿಟ್ಟು ಬೆಂಗಳೂರಿಗೆ ಕೆಲಸಕ್ಕೆ ಬಂದಿದ್ದ. ಯುವತಿಯ ಪೋಷಕರು ಯುವಕನ ವರ್ತನೆ ಸರಿಯಿಲ್ಲ ಮತ್ತೊಂದು ಮದುವೆ ಮಾಡುತ್ತೇವೆ ಎಂದು ಎಂದು ಪ್ರಿಯದರ್ಶಿನಿಗೆ ಹೇಳಿದ್ದರು. ಆದರೆ ನನಗೆ ಗಂಡನೇ ಬೇಕು ಎಂದು ಬರ್ಸ ಸೋಹನ್ ಜೊತೆ ಕಳೆದ ವಾರ ಜಿಗಣಿ ವಾಬಸಂದ್ರ ಬಳಿ ಬಂದು ಬಾಡಿಗೆ ಮನೆಯಲ್ಲಿ ನೆಲೆಸಿದ್ದರು.

ಇದನ್ನೂ ಓದಿ:ಸೌತ್ ಸಿನಿರಂಗದಲ್ಲಿ ಸಂಹಿತಾ ವಿನ್ಯಾ ಮಿಂಚಿಂಗ್​..!

ಇದರ ನಡುವೆ ರಾತ್ರಿ ಅದೇನಾಯಿತೋ ಏನೋ ರಾತ್ರಿ ಗಂಡ ಹೆಂಡತಿ ಜಗಳವಾಡಿಕೊಂಡು ಮಗುವಿನ ಮುಂದೆಯೇ ತಾಯಿಯನ್ನು ಸೋಹನ್ ಉಸಿರುಗಟ್ಟಿಸಿ ಕೊಲೆ ಮಾಡಿ ಪಾರಾರಾಗಿದ್ದಾನೆ. ಒಟ್ಟಿನಲ್ಲಿ ಯಾರೋ ಮಾಡಿದ ತಪ್ಪಿಗೆ ಇದೀಗ ಪುಟಾಣಿ ಮಗು ಅನಾಥವಾಗಿರೋದು ದುರಂತವೇ ಹೌದು. ಇನ್ನು ಪೋಲೀಸರ ತನಿಖೆ ನಂತರ ಅಸಲಿ ವಿಷಯ ಹೊರಬರಬೇಕಿದೆ.

Exit mobile version