ಜಮ್ಮು ಮತ್ತು ಕಾಶ್ಮೀರದ ಪೂಂಚ್ನಲ್ಲಿ ಭಯೋತ್ಪಾದಕರು ಬಳಸುತ್ತಿದ್ದ ಅಡಗುತಾಣವನ್ನು ಭದ್ರತಾ ಪಡೆಗಳು ಭೇದಿಸಿದ್ದು, ಉಗ್ರರ ಅಡುಗು ತಾಣದಲ್ಲಿ 5 IED ಬಾಂಬ್ಗಳು, ಎರಡು ರೇಡಿಯೋ ಸೆಟ್ಗಳು ಮತ್ತು ಮೂರು ಕಂಬಳಿಗಳು ಪತ್ತೆಯಾಗಿವೆ.
ನಿನ್ನೆ(ಏ.05) ಸಂಜೆ ಪೂಂಚ್ನ ಸುರನ್ಕೋಟ್ನಲ್ಲಿ ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ನಡೆಸಿದ ಜಂಟಿ ಕಾರ್ಯಾಚರಣೆಯ ಸಂದರ್ಭದಲ್ಲಿ ಅಡಗುತಾಣದಲ್ಲಿ ಐದು ಸ್ಫೋಟಕ ಸಾಧನಗಳು, ಎರಡು ರೇಡಿಯೋ ಸೆಟ್ಗಳು ಮತ್ತು ಮೂರು ಕಂಬಳಿಗಳು ಪತ್ತೆಯಾಗಿವೆ. ಭಯೋತ್ಪಾದಕರ ಅಡಗುತಾಣವನ್ನು ಭೇದಿಸಿದ ಕೆಲವೇ ಗಂಟೆಗಳ ನಂತರ, ಪಾಕಿಸ್ತಾನ ಸೇನೆಯು ಪೂಂಚ್ ಮತ್ತು ಇತರ ಗಡಿ ಪ್ರದೇಶಗಳ ನಿಯಂತ್ರಣ ರೇಖೆಯುದ್ದಕ್ಕೂ ಅಪ್ರಚೋದಿತ ಗುಂಡಿನ ದಾಳಿ ಮಾಡಿದೆ. ಇದನ್ನೂ ಓದಿ :ಪೊಲೀಸರಿಂದಲೇ ಬಡ್ಡಿ ದಂಧೆ: ಕಿರುಕುಳ ತಾಳಲಾರದೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ
ಪಾಕಿಗಳಿಂದ ನಿರಂತರ ಕದನ ವಿರಾಮ ಉಲ್ಲಂಘನೆ
ಪಹಲ್ಗಾಮ್ ದಾಳಿಯ ನಂತರ ಭಾರತದಿಂದ ದಾಳಿಯಾಗುವ ಭೀತಿಯಲ್ಲಿರುವ ಪಾಕಿಗಳು ಗಡಿಯಲ್ಲಿ ನಿರಂತರವಾಗಿ ಕದನ ವಿರಾಮ ಉಲ್ಲಂಘನೆ ಮಾಡಿ ಗುಂಡಿನ ದಾಳಿ ನಡೆಸುತ್ತಿವೆ. ನಿನ್ನೆ ಉಗ್ರರ ಅಡಗು ತಾಣವನ್ನು ಬೇಧಿಸಿದ ನಂತರವೂ ಇದು ಮುಂದುವರಿದಿದ್ದು. ಕಾಶ್ಮೀರದ ಕುಪ್ವಾರಾ, ಬಾರಾಮುಲ್ಲಾ, ಪೂಂಚ್, ರಾಜೌರಿ, ಮೆಂಧರ್, ನೌಶೇರಾ, ಸುಂದರ್ಬಾನಿ ಮತ್ತು ಅಖ್ನೂರ್ ಪ್ರದೇಶದಲ್ಲಿ ಅಪ್ರಚೋಧಿತ ಗುಂಡಿನ ದಾಳಿ ನಡೆಸಿದೆ. ಇದಕ್ಕೆ ಭಾರತೀಯ ಸೇನೆಯೂ ಪ್ರಮಾಣಕ್ಕನುಗುಣವಾಗಿ ಪ್ರತಿಕ್ರಿಯೆ ನೀಡಿದೆ ಎಂದು ಭಾರತೀಯ ಸೇನೆ ತಿಳಿಸಿದೆ.
ಇದನ್ನೂ ಓದಿ:ಬ್ರೈನ್ ಟ್ಯೂಮರ್ ಸಮಸ್ಯೆ: ಜೈನ ಧರ್ಮದ ‘ಸಲ್ಲೇಖನ ವ್ರತ’ ಕೈಗೊಂಡು ಜೀವ ಬಿಟ್ಟ 3 ವರ್ಷದ ಕಂದಮ್ಮ
ಏಪ್ರಿಲ್ 22 ರಂದು ಪಹಲ್ಗಾಮ್ ಹತ್ಯಾಕಾಂಡ ನಡೆದ ನಂತರ ಭದ್ರತಾ ಸಂಸ್ಥೆಗಳು ಜಾಗರೂಕವಾಗಿವೆ, ಇದು 370 ನೇ ವಿಧಿಯನ್ನು ರದ್ದುಗೊಳಿಸಿದ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ ನಡೆದ ಅತ್ಯಂತ ಭೀಕರ ಭಯೋತ್ಪಾದಕ ದಾಳಿಯಾಗಿದ್ದು. ಇದಕ್ಕೆ ಪ್ರತಿಕಾರ ತೀರಿಸಿಕೊಳ್ಳಬೇಕು ಎಂಬ ಕೂಗು ಎಲ್ಲಡೆ ಕೇಳಿ ಬರುತ್ತಿದೆ.


