ಬೆಂಗಳೂರು : ಕನ್ನಡ ಹಾಡು ಕೇಳಿದ್ದಕ್ಕೆ ಅವಹೇಳನಕಾರಿ ಹೇಳಿಕೆ ನೀಡಿದ್ದ ಗಾಯಕ ಸೋನು ನಿಗಮರನ್ನು ಕನ್ನಡ ಚಿತ್ರರಂಗದಿಂದ ಬ್ಯಾನ್ ಮಾಡಿದ್ದು. ಈ ಕುರಿತು ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಅಧಿಕೃತವಾಗಿ ಘೋಷಿಸಿದೆ.
ಖಾಸಗಿ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರೇಕ್ಷಕರು ಕನ್ನಡ ಹಾಡು ಹೇಳಿ ಎಂದಿದ್ದಕ್ಕೆ ಕೋಪಗೊಂಡಿದ್ದ ಸೋನು ನಿಗಮ್ ‘ಕನ್ನಡ.. ಕನ್ನಡ ಇದೇ ಕಾರಣದಿಂದ ಪಹಲ್ಗಾಮ್ ದಾಳಿಯಾಗಿದ್ದು’ಎಂದು ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು. ಅವಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು. ಇದೀಗ ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ಸೋನುರನ್ನು ಚಿತ್ರರಂಗದಿಂದ ಬ್ಯಾನ್ ಮಾಡಿ ಕ್ರಮ ಕೈಗೊಂಡಿದೆ. ಇದನ್ನೂ ಓದಿ :ಪಾಕಿಸ್ತಾನದ ನಟನ ಸಿನಿಮಾ ಬ್ಯಾನ್ ಮಾಡೋಕೆ ಅದೇನು ನೀಲಿಚಿತ್ರವಾ: ಪ್ರಕಾಶ್ ರಾಜ್
ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು ಅವರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ಕ್ರಮ ಕೈಗೊಂಡಿದ್ದು. ಈ ಕುರಿತು ಮಾತನಾಡಿದ ನರಸಿಂಹಲು ‘ಸೋನು ನಿಗಮ್ ಇಲ್ಲಿಯವರೆಗೆ ಕನ್ನಡಿಗರ ಕ್ಷಮೆ ಕೇಳಿಲ್ಲ. ಅವರು ಕ್ಷಮೆ ಕೇಳುವವರೆಗೆ ಅವರ ವಿರುದ್ದ ಕನ್ನಡ ಚಿತ್ರರಂಗ ಅಸಹಕಾರ ಜಾರಿಯಾಗಲಿದೆ. ಕ್ಷಮೆ ಕೇಳುವವರೆಗೆ ಅವರನ್ನು ಕನ್ನಡ ಚಿತ್ರರಂಗದಿಂದ ದೂರವಿಡಲಾಗುತ್ತದೆ ಎಂದು ಹೇಳಿದರು.
ಇದನ್ನೂ ಓದಿ :ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಉಗ್ರ ನದಿಯಲ್ಲಿ ಬಿದ್ದು ಸಾ*ವು
ಸೋನು ನಿಗಮ್ರನ್ನು ಚಿತ್ರಗಳಿಗೆ ಹಾಡಿಸುವುದು. ಮ್ಯೂಸಿಕಲ್ ನೈಟ್ಸ್ಗಳಿಗೆ ಹಾಡಿಸುವುದು, ಕಾರ್ಯಕ್ರಮಗಳಲ್ಲಿ ಹಾಡಿಸುವಂತಿಲ್ಲ ಎಂದು ಆದೇಶಿಸಲಾಗಿದೆ. ಒಂದು ವೇಳೆ ಆದೇಶ ಮೀರಿ ಹಾಡಿಸಿದರೆ ಅವರ ವಿರುದ್ದ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ವಾಣಿಜ್ಯ ಮಂಡಳಿ ಅಧ್ಯಕ್ಷ ನರಸಿಂಹಲು ಘೋಷಿಸಿದ್ದಾರೆ. ಇನ್ನು ವಾಣಿಜ್ಯ ಮಂಡಳಿಯ ಈ ನಿರ್ಧಾರಕ್ಕೆ ಫಿಲ್ಮ ಛೇಂಬರ್ನ ಇತರ ಅಂಗ ಸಂಸ್ಥೆಗಳು ಸಂಪೂರ್ಣ ಒಪ್ಪಿಗೆ ನೀಡಿವೆ.


