ಹಿರಿಯ ಬಹುಭಾಷ ನಟ ಪ್ರಕಾಶ್ ರಾಜ್ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದು.’ ಪಾಕ್ ನಟ ಫವಾದ್ ಖಾನ್ ನಟನೆಯ ‘ಅಬೀರ್ ಗುಲಾಲ್’ ಸಿನಿಮಾ ಭಾರತದಲ್ಲಿ ಬ್ಯಾನ್ ಮಾಡೋಕೆ ಅದೇನು ನೀಲಿಚಿತ್ರವಾ ಎಂದು ಸರ್ಕಾರದ ವಿರುದ್ಧ ಪ್ರಕಾಶ್ ರಾಜ್ ಸರ್ಕಾರದ ವಿರುದ್ದ ಕಿಡಿಕಾರಿದ್ದಾರೆ.
ಕಳೆದ ಏಪ್ರೀಲ್ 22ರಂದು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯು ದೇಶಾದ್ಯಂತ ತೀವ್ರ ಆಘಾತವನ್ನುಂಟುಮಾಡಿತು. ಇದಕ್ಕೆ ಪ್ರತಿಕ್ರಿಯೆಯಾಗಿ, ಕೇಂದ್ರ ಸರ್ಕಾರವು ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿತು ಮತ್ತು ಪಾಕಿಸ್ತಾನದ ವಿರುದ್ಧ ಹಲವಾರು ನಿರ್ಬಂಧಗಳನ್ನು ಜಾರಿಗೆ ತಂದಿತು. ಈ ಕ್ರಮಗಳ ಭಾಗವಾಗಿ, ಪಾಕಿಸ್ತಾನಿ ನಟರನ್ನು ಒಳಗೊಂಡ ಚಲನಚಿತ್ರಗಳ ಬಿಡುಗಡೆಯನ್ನು ಭಾರತದೊಳಗೆ ನಿಲ್ಲಿಸಲು ನಿರ್ಧರಿಸಿತು. ಈ ಹಿನ್ನೆಲೆಯಲ್ಲಿ, ಫವಾದ್ ಖಾನ್ ನಟಿಸಿರುವ ಅಬೀರ್ ಗುಲಾಲ್ ಚಿತ್ರದ ಬಿಡುಗಡೆಯನ್ನು ಸಹ ಸ್ಥಗಿತಗೊಳಿಸಲಾಗಿದೆ. ಇದನ್ನೂ ಓದಿ :ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ಉಗ್ರ ನದಿಯಲ್ಲಿ ಬಿದ್ದು ಸಾ*ವು
ಆದರೆ ಈ ಕುರಿತು ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ನಟ ಪ್ರಕಾಶ್ ರಾಜ್ ಮಾತನಾಡಿದ್ದು, ‘ “ಫವಾದ್ ಖಾನ್ ಅವರ ಚಿತ್ರವನ್ನು ಭಾರತದಲ್ಲಿ ನಿಷೇಧಿಸುವುದು ಸರಿಯಲ್ಲ ಎಂದು ತೋರುತ್ತದೆ. ಮೊದಲು ಚಿತ್ರ ಬಿಡುಗಡೆಯಾದರೆ, ಪಾಕಿಸ್ತಾನಿ ನಟರನ್ನು ಒಳಗೊಂಡ ಚಲನಚಿತ್ರಗಳನ್ನು ಬೆಂಬಲಿಸಬೇಕೆ ಅಥವಾ ಬೇಡವೇ ಎಂಬುದನ್ನು ಪ್ರೇಕ್ಷಕರು ನಿರ್ಧರಿಸುತ್ತಾರೆ.
ನೀಲಿ ಚಿತ್ರ ಅಥವಾ ಮಕ್ಕಳ ಮೇಲಿನ ದೌರ್ಜನ್ಯದ ಬಗ್ಗೆ ಸಿನಿಮಾ ಅಲ್ಲ ಅಂದ್ಮೇಲೆ ನೀವು ಯಾವುದೇ ಚಿತ್ರವನ್ನು ನಿಷೇಧಿಸಲು ಸಾಧ್ಯವಿಲ್ಲ ಎಂದು ಹೇಳುವ ಮೂಲಕ ಸರ್ಕಾರದ ವಿರುದ್ಧ ಪ್ರಕಾಶ್ ರಾಜ್ ಕಿಡಿಕಾರಿದ್ದಾರೆ.
ಇದನ್ನೂ ಓದಿ :ಮತಾಂಧತೆ ಹೆಚ್ಚಾಗುತ್ತೆ, ಮಹಾನ್ ನಾಯಕನಿಗೆ ಮೃತ್ಯು ಬರಲಿದೆ: ಕೋಡಿ ಶ್ರೀ ಭವಿಷ್ಯ
ಇನ್ನು ಪ್ರಕಾಶ್ ರಾಜ್ರ ಈ ಹೇಳಿಕೆಗೆ ತೀವ್ರ ಆಕ್ಷೇಪ ಕೇಳಿ ಬರುತ್ತಿದ್ದು. ‘ ರಾಷ್ಟ್ರೀಯ ಭದ್ರತೆ ಮತ್ತು ಸಾರ್ವಜನಿಕ ಭಾವನೆಗಿಂತ ಚಲನಚಿತ್ರಗಳ ಬಿಡುಗಡೆ ಮುಖ್ಯವೇ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಪಾಕಿಸ್ತಾನಿ ನಟರನ್ನು ಪರೋಕ್ಷವಾಗಿ ಬೆಂಬಲಿಸುವುದು ಬೇಜವಾಬ್ದಾರಿ ಎಂದು ಕೆಲವರು ಆರೋಪಿಸಿದ್ದಾರೆ.


