Site icon PowerTV

Viral Video: ಪ್ರೇಯಸಿ ಜೊತೆ ನೂಡಲ್ಸ್​ ತಿನ್ನುತ್ತಿದ್ದ ಮಗನಿಗೆ ಚಪ್ಪಲಿಯಲ್ಲಿ ಹೊಡೆದ ಪೋಷಕರು

ಕಾನ್ಪುರ: ಪ್ರೇಯಸಿಯೊಂದಿಗೆ ನೂಡಲ್ಸ್ ತಿನ್ನುತ್ತಿದ್ದ ಪುತ್ರನಿಗೆ ಆತನ ಪೋಷಕರೇ ಧರ್ಮದೇಟು ನೀಡಿರುವ ಘಟನೆ ಉತ್ತರ ಪ್ರದೇಶದ ಕಾನ್ಪುರದಲ್ಲಿ ನಡೆದಿದ್ದು. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಕಾನ್ಪುರದ ನಿವಾಸಿ 21 ವರ್ಷದ ರೋಹಿತ್ ಎಂಬಾತ ತನ್ನ 19 ವರ್ಷದ ಪ್ರೇಯಸಿಯ ಜೊತೆ ಮಾರುಕಟ್ಟೆಯಲ್ಲಿ ನೂಡಲ್ಸ್​ ತಿನ್ನುತ್ತಿದ್ದ. ಈ ವೇಳೆ ರೋಹಿತ್​ ಪೋಷಕರಾದ ಶಿವಕರನ್​ ಮತ್ತು ಸುಶೀಲಾ ಇದನ್ನು ನೋಡಿದ್ದು. ಯುವತಿಯೊಂದಿಗಿದ್ದ ಮಗನನ್ನು ರೆಡ್​ಹ್ಯಾಂಡಡ್​ ಆಗಿ ಹಿಡಿದಿದ್ದಾರೆ. ಬಳಿಕ ನೋಡ ನೋಡುತ್ತಲೇ ತಾಯಿ ಸುಶೀಲಾ ರೋಹಿತ್ ಗೆ ಥಳಿಸಿದ್ದಾರೆ. ರೋಹಿತ್‌ನ ತಂದೆ ಕೂಡ ಆತನಿಗೆ ಚಪ್ಪಲಿಯಿಂದ ಹೊಡೆದಿದ್ದಾರೆ.

ಇದನ್ನೂ ಓದಿ:ಚೊಚ್ಚಲ ಮಗುವಿಗೆ ಚಂದದ ಹೆಸರಿಟ್ಟ ನಟಿ ಹರ್ಷಿಕಾ ಪೂಣಚ್ಚ ದಂಪತಿ

ಮೂಲಗಳ ಪ್ರಕಾರ ರೋಹಿತ್ ಪ್ರೀತಿಯನ್ನು ಆತನ ಪೋಷಕರು ಒಪ್ಪಿರಲಿಲ್ಲ. ಅದಾಗ್ಯೂ ರೋಹಿತ್ ತನ್ನ ಪ್ರೀತಿ ಮುಂದುವರೆಸಿದ್ದ. ಶುಕ್ರವಾರ ರಾಮ್‌ಗೋಪಾಲ್ ಜಂಕ್ಷನ್ ನಲ್ಲಿ ಇಬ್ಬರೂ ಮತ್ತೆ ಸೇರಿದ್ದಾಗ ಅಲ್ಲಿಯೇ ಇದ್ದ ಪೋಷಕರು ಇದನ್ನು ನೋಡಿ ಗಲಾಟೆ ಮಾಡಿದ್ದಾರೆ. ಈ ವಿಚಾರ ತಿಳಿಯುತ್ತಲೇ ಸ್ಥಳಕ್ಕಾಗಮಿಸಿದ ಪೊಲೀಸರು ಇಬ್ಬರನ್ನೂ ಕರೆಸಿ ಬುದ್ದಿವಾದ ಹೇಳಿ ಕಳುಹಿಸಿದ್ದಾರೆ ಎನ್ನಲಾಗಿದೆ. ಅಲ್ಲದೆ ಮುಂದಿನ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ” ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

Exit mobile version