Site icon PowerTV

‘ನನಗೆ ಸಿಗದ ನೀನು ಇನ್ಯಾರಿಗೂ ಸಿಗಬಾರದು’; ಮಾಜಿ ಪ್ರೇಯಸಿಯ ಮೇಲೆ ಆ್ಯಸಿಡ್​ ಎರಚಿದ ದುಷ್ಕರ್ಮಿ

ಅಜಮ್‌ಗಢ: ಉತ್ತರ ಪ್ರದೇಶದ ಮೌ ಜಿಲ್ಲೆಯಲ್ಲಿ ಭಗ್ನ ಪ್ರೇಮಿಯೊಬ್ಬ ತಾನೂ ಪ್ರೀತಿಸುತ್ತಿದ್ದ ಯುವತಿಯ ಮೇಲೆ ಆ್ಯಸಿಡ್​ ದಾಳಿ ನಡೆಸಿದ್ದು. 25 ವರ್ಷದ ರೀಮಾ (ಹೆಸರು ಬದಲಾಯಿಸಲಾಗಿದೆ) ಎಂಬಾಕೆಯ ಮೇಲೆ ದುಷ್ಕರ್ಮಿ ಆ್ಯಸಿಡ್​ ದಾಳಿ ನಡೆಸಿದ್ದಾನೆ.

ಯುವತಿ ರೀಮಾ ಮೇಲೆ ರಾಮ್ ಜನಮ್ ಸಿಂಗ್ ಪಟೇಲ್ ಎಂಬಾತ ಆ್ಯಸಿಡ್​ ದಾಳಿ ನಡೆಸಿದ್ದಾನೆ. ರೀಮಾ ಮತ್ತು ರಾಮ್​ ಜನಮ್​ ಸಿಂಗ ಪಟೇಲ್​ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಉಂಟಾಗಿ ದೂರಾಗಿದ್ದರು. ಯುವತಿ ರೀಮಾಗೆ ಇತ್ತೀಚೆಗೆ ಬೇರೊಬ್ಬ ಯುವಕನ ಜೊತೆ ಮದುವೆ ನಿಶ್ಚಯವಾಗಿತ್ತು. ಇದೇ ಮೇ.27ಕ್ಕೆ ಯುವತಿಯ ಮದುವೆಗೆ ಸಿದ್ದತೆ ನಡೆಸಬೇಕಿತ್ತು. ಆದರೆ ಇಂದು ಆಕೆಯ ಮಾಜಿ ಪ್ರಿಯತಮ ಆಕೆಯ ಮೇಲೆ ಆ್ಯಸಿಡ್​ ದಾಳಿ ಮಾಡಿದ್ದಾನೆ. ಇದನ್ನೂ ಓದಿ:ಚೆನೈ ಮೂಲಕ ಶ್ರೀಲಂಕಾಗೆ ಪರಾರಿಯಾದ್ರ ಪಹಲ್ಗಾಮ್​ ಉಗ್ರರು? ಕೊಲಂಬೋ ವಿಮಾನ ನಿಲ್ದಾಣದಲ್ಲಿ ಶೋಧ

ಮೂಲಗಳ ಪ್ರಕಾರ ಯುವತಿ ರೀಮಾ ‘ಗುರುವಾರ, ಬ್ಯಾಂಕಿನಿಂದ 20,000 ರೂ.ಗಳನ್ನು ಡ್ರಾ ಮಾಡಿಕೊಂಡು ಮನೆಗೆ ಹಿಂದಿರುಗುತ್ತಿದ್ದಾಗ, ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಆಕೆಯನ್ನು ತಡೆದಿದ್ದಾರೆ. ಈ ವೇಳೆ ಆರೋಪಿ ರಾಮ್ ಜನಮ್ ಸಿಂಗ್ ಪಟೇಲ್, ‘ನನಗೆ ಸಿಗದ ನೀನು ಇನ್ಯಾರಿಗೂ ಸಿಗಬಾರದು’ ಎಂದು ಹೇಳಿ ಆಕೆಯ ಮೇಲೆ ಆ್ಯಸಿಡ್ ಎರಚಿ ಪರಾರಿಯಾಗಿದ್ದಾನೆ. ಆ್ಯಸಿಡ್​ ದಾಳಿಯಿಂದ ಯುವತಿ ತೀವ್ರವಾಗಿ ಗಾಯಗೊಂಡಿದ್ದು. ಮುಖ, ಭುಜ, ಕುತ್ತಿಗೆ ಮತ್ತು ದೇಹದ ಮೇಲ್ಭಾಗ ತೀವ್ರವಾಗಿ ಸುಟ್ಟ ಗಾಯಗಳಾಗಿವೆ.

ಆ್ಯಸಿಡ್ ದಾಳಿಯ ನಂತರ ಆಕೆಯನ್ನು ಹಳ್ಳಿಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಲಾಯಿತು, ನಂತರ ಪ್ರಾಥಮಿಕ ಚಿಕಿತ್ಸೆಯ ನಂತರ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಶೇ. 60 ರಷ್ಟು ಸುಟ್ಟಗಾಯಗಳಿಗೆ ಒಳಗಾಗಿರುವ ಆಕೆ ಅಜಮ್‌ಗಢದ ಗ್ಲೋಬಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಪಟೇಲ್ ಮತ್ತು ಇತರ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ಘಟನೆಯಲ್ಲಿ ಬಳಸಲಾದ ಬೈಕ್ ಅನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ:ಪಹಲ್ಗಾಮ್​ ಬಗ್ಗೆ ಮಾತನಾಡಲು ಹೋಗಿ ಪೊಲೀಸ್​ ಕೇಸ್​ ಹಾಕಿಸಿಕೊಂಡ ವಿಜಯ್​ ದೇವರಕೊಂಡ

ಇನ್ನು ಪೊಲೀಸರ ಬಳಿ ಆರೋಪಿ ಹೇಳಿಕೆ ನೀಡಿದ್ದು. ‘ಆಕೆಯ ಮದುವೆ ತಡೆಯಲು ಆಕೆಗೆ ಕನಿಷ್ಟ ಹಾನಿ ಮಾಡುವ ಸಲುವಾಗಿ ಆ್ಯಸಿಡ್ ದಾಳಿ ಯೋಜನೆ ರೂಪಿಸಿದ್ದ. ಇದಕ್ಕಾಗಿ ಆಕೆಯ ಬೆನ್ನಿಗೆ ಆ್ಯಸಿಡ್ ಎರಚಲು ಯೋಜನೆ ರೂಪಿಸಿದ್ದಾಗಿ ಆರೋಪಿ ರಾಮ್ ಜನಮ್ ಸಿಂಗ್ ಹೇಳಿಕೆ ನೀಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

Exit mobile version