Site icon PowerTV

‘ಮೋದಿ ಅವಕಾಶ ಕೊಟ್ಟರೆ ನಾನು ಯುದ್ದಕ್ಕೆ ಹೋಗುತ್ತೇನೆ’: ಪಾಕ್​ ವಿರುದ್ದ ಕದನಕ್ಕೆ ಇಳಿದ ಜಮೀರ್​​

ವಿಜಯನಗರ: ಪಹಲ್ಗಾಮ್​ ದಾಳಿಗೆ ಪ್ರತಿಕಾರವಾಗಿ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ದದ ಕಾರ್ಮೋಡವಿದ್ದು. ಈ ವಿಚಾರದ ಕುರಿತು ಮಾತನಾಡಿದ ಸಚಿವ ಜಮೀರ್​ ಅಹಮದ್​ ‘ಮೋದಿ, ಅಮಿತ್ ಷಾ, ಕೇಂದ್ರ ಸರ್ಕಾರ ನನಗೆ ಅವಕಾಶ ನೀಡಲಿ, ನಾನು ಯುದ್ದಕ್ಕೆ ಹೋಗುತ್ತೇನೆ ಎಂದು ಎದೆತಟ್ಟಿ ಹೇಳಿದರು.

ಈ ಕುರಿತು ಹೊಸಪೇಟೆಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಜಮೀರ್​ ‘ಮೋದಿ, ಅಮಿತ್ ಷಾ, ಕೇಂದ್ರ ಸರ್ಕಾರ ನನಗೆ ಅವಕಾಶ ಕೊಟ್ಟರೆ, ನಾನು ಯುದ್ಧಕ್ಕೆ ಹೋಗಲು ಸಿದ್ಧ. ಪಾಕಿಸ್ತಾನದ ಜೊತೆ ಎಂದಿಗೂ ನಮಗೆ ಸಂಬಂಧವಿಲ್ಲ. ಪಾಕಿಸ್ತಾನ ಯಾವತ್ತಿಗೂ ನಮ್ಮ ಶತ್ರು ದೇಶನೇ. ಕೇಂದ್ರ ಸರ್ಕಾರ ಪಾಕಿಸ್ತಾನದ ಮೇಲೆ ಯುದ್ಧ ಸಾರಲಿ, ಮೋದಿ, ಅಮಿತ್ ಷಾ ಮತ್ತು ಕೇಂದ್ರ ಸರ್ಕಾರ ನನಗೆ ಅವಕಾಶ ಕೊಡಲಿ, ನಾನು ಯುದ್ಧ ಮಾಡೋದಕ್ಕೆ ಸಿದ್ಧ ಎಂದು ಎದೆ ತಟ್ಟಿ ಹೇಳಿದರು. ಇದನ್ನೂ ಓದಿ :‘ಪರೀಕ್ಷೆ ಒಂದೇ ಜೀವನವಲ್ಲ’: ಫೇಲ್​ ಆದ ಮಗನಿಗೆ ಕೇಕ್​ ತಿನ್ನಿಸಿ ಧೈರ್ಯ ತುಂಬಿದ ತಂದೆ

ಶಿವಾನಂದ ಪಾಟೀಲ್​ ರಾಜೀನಾಮೆ ವಿಚಾರಕ್ಕೆ ಜಮೀರ್ ಹೇಳಿಕೆ..!

ಸಚಿವ ಶಿವಾನಂದ ಪಾಟೀಲ್ ಮತ್ತು ಯತ್ನಾಳ್ ರಾಜೀನಾಮೆ ಜಟಾಪಟಿ ವಿಚಾರವಾಗಿ ಮಾತನಾಡಿದ ಜಮೀರ್ ‘ಯತ್ನಾಳ್ ಅವರು, ಯಾವಾಗಲೂ ದಮ್ಮು, ತಾಕತ್ತು ಅಂತ ಮಾತಾಡ್ತಾರೆ,  ಸಚಿವ ಶಿವಾನಂದ ಪಾಟೀಲ್ ತಮ್ಮ ದಮ್ಮು ತಾಕತ್ತು ತೋರಿಸಿದ್ದಾರೆ.  ಅವರಪ್ಪಗೆ ಹುಟ್ಟಿದವರಾದ್ರೆ, ರಾಜೀನಾಮೆ ಕೊಟ್ಟು ಬರಲಿ ಅಂತ, ಈಗ ಶಿವಾನಂದ್ ಪಾಟೀಲ್ ರಾಜಿನಾಮೆ ಕೊಟ್ಟು ಅವರಪ್ಪಗೆ ಹುಟ್ಟಿದ್ದಾರೆ ಅಂತ ತೋರಿಸಿದ್ದಾರೆ. ಅದೇ ಯತ್ನಾಳ್ ರಾಜೀನಾಮೆ ನೀಡಿ, ಅವರಪ್ಪಗೆ ಹುಟ್ಟಿದ್ದಾರೆ ಅಂತ ತೋರಿಸಲಿ ಎಂದು  ಜಮೀರ್ ಅಹಮ್ಮದ್ ಖಾನ್ ಸವಾಲಾಕಿದರು.

Exit mobile version