Site icon PowerTV

ಬ್ರೈನ್​ ಟ್ಯೂಮರ್ ಸಮಸ್ಯೆ: ಜೈನ ಧರ್ಮದ ‘ಸಲ್ಲೇಖನ ವ್ರತ’ ಕೈಗೊಂಡು ಜೀವ ಬಿಟ್ಟ 3 ವರ್ಷದ ಕಂದಮ್ಮ

ಭೋಪಾಲ್: ಬ್ರೈನ್​ ಟ್ಯೂಮರ್​ನಿಂದ ಬಳಲುತ್ತಿದ್ದ 3 ವರ್ಷದ ಬಾಲಕಿಯೋರ್ವಳು ಜೈನ ಧರ್ಮದ ಸಲ್ಲೇಖನ ವ್ರತ ಕೈಗೊಂಡು ಜೀವ ತ್ಯಜಿಸಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದ್ದು. ಇಷ್ಟು ಚಿಕ್ಕ ವಯಸ್ಸಿಗೆ ಇಂತಹ ವ್ರತ ಕೈಗೊಂಡ ಬಾಲಕಿಯನ್ನು ಗೋಲ್ಡನ್​ ಬುಕ್​ ಆಫ್​ ರೆಕಾರ್ಡ್ಗೆ ಸೇರಿಸಲಾಗಿದೆ.

​ವಿಯಾನಾ ಜೈನ್ (3) ಸಲ್ಲೇಖನ ವ್ರತದ ಮೂಲಕ ಜೀವ ತ್ಯಜಿಸಿದ ಬಾಲಕಿಯಾಗಿದ್ದಾಳೆ. ವಿಯಾನಾ ಜೈನ್ ಕಳೆದ ಹಲವು ತಿಂಗಳುಗಳಿಂದ ಮೆದುಳಿನ ಗೆಡ್ಡೆ ಸಮಸ್ಯೆಯಿಂದ ಬಳಲುತ್ತಿದ್ದಳು. ಶಸ್ತ್ರಚಿಕಿತ್ಸೆ ಮಾಡಿಸಿದ ನಂತರವೂ ಸಮಸ್ಯೆ ದೂರಾಗಿರಲಿಲ್ಲ. ನಂತರ ಜೈನ ಗುರು ರಾಜೇಶ್ ಮುನಿ ಮಹಾರಾಜ್ ಬಳಿಗೆ ಪೋಷಕರಾದ ಪೋಷಕರು ವರ್ಷಾ ಮತ್ತು ಪಿಯೂಷ್ ಜೈನ್ ಹೋಗಿದ್ದಾರೆ. ಈ ವೇಳೆ ಮುನಿಗಳು ಬಾಲಕಿಯ ಅಂತಿಮ ಕಾಲ ಸನ್ನಿಹಿತವಾಗಿದ್ದು, ಸಲ್ಲೇಖನ ವ್ರತಕ್ಕೆ ಮುಂದಾಗುವಂತೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ:‘ಕನ್ನಡಿಗರು ಬಹಳ ಒಳ್ಳೆಯವರು’: ವಿವಾದದ ಬಳಿಕೆ ಬೆಣ್ಣೆ ಹಚ್ಚಿದ ಸೋನು ನಿಗಮ್​

ಪುಟ್ಟ ಬಾಲಕಿಗೆ ಇಂತಹ ವ್ರತಾಚರಣೆಯ ಬಗ್ಗೆ ಯಾವುದೇ ಸ್ವತಂತ್ರ ನಿರ್ಧಾರ ಕೈಗೊಳ್ಳಲು ಸಾಧ್ಯವಾಗದ ಕಾರಣ ಪೋಷಕರು ವ್ರತದ ಕುರಿತು ನಿರ್ಧಾರ ಕೈಗೊಂಡಿದ್ದಾರೆ. ವ್ರತ ಕೈಗೊಂಡ 10 ನಿಮಿಷಗಳಲ್ಲಿ ಬಾಲಿ ಪ್ರಾಣ ತ್ಯಜಿಸಿದ್ದಾಳೆಂದು ತಿಳಿದುಬಂದಿದೆ. ಈ ಮೂಲಕ ಕಠಿಣ ವ್ರತ ಕೈಗೊಂಡ ವಿಶ್ವದ ಅತ್ಯಂತ ಕಿರಿಯ ಬಾಲಕಿ ಹೆಗ್ಗಳಿಕೆಗೆ ಪಾತ್ರಳಾಗಿದ್ದಾಳೆ.

ಪೋಷಕರ ಮಾತು..!

ಕಳೆದ ವರ್ಷ ಡಿಸೆಂಬರ್‌ನಲ್ಲಿ ಮಗುವಿಗೆ ಮೆದುಳಿನ ಗೆಡ್ಡೆ ಇರುವುದು ಪತ್ತೆಯಾಯಿತ್ತು. ಜನವರಿಯಲ್ಲಿ ಮುಂಬೈನಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಶಸ್ತ್ರಚಿಕಿತ್ಸೆಯ ನಂತರ ಮಗುವಿನ ಸ್ಥಿತಿ ಸುಧಾರಿಸಿತ್ತು. ಆದರೆ ಒಂದೆರಡು ತಿಂಗಳ ನಂತರ ಸಮಸ್ಯೆ ಮರುಕಳುಹಿಸಿತ್ತು. ನಂತರ ಮಗುವಿನ ಸ್ಥಿತಿ ತೀವ್ರವಾಗಿ ಹದಗೆಟ್ಟಿತ್ತು. ಮಾರ್ಚ್ 21 ರಂದು ನಾವು ಅವರನ್ನು ನಮ್ಮ ಜೈನ ಗುರುಗಳ ಬಳಿಗೆ ಕರೆದೊಯ್ದೆವು. ಅವರು ಆಕೆಯ ಅಂತಿಮ ಸಮಯ ಸಮೀಪಿಸುತ್ತಿದೆ ಎಂದು ನಮಗೆ ಹೇಳಿದರು. ಸಂತಾರ ವ್ರತ ಕೈಗೊಳ್ಳುವಂತೆ ಸಲಹೆ ನೀಡಿದ್ದರು ಎಂದು ಬಾಲಕಿಯ ತಾಯಿ ವರ್ಷಾ ಜೈನ್​ ಅವರು ಹೇಳಿದ್ದಾರೆ.

ಇದನ್ನೂ ಓದಿ :‘ನನಗೆ ಸಿಗದ ನೀನು ಇನ್ಯಾರಿಗೂ ಸಿಗಬಾರದು’; ಮಾಜಿ ಪ್ರೇಯಸಿಯ ಮೇಲೆ ಆ್ಯಸಿಡ್​ ಎರಚಿದ ದುಷ್ಕರ್ಮಿ

ಮುಂದುವರಿದು ಮಾತನಾಡಿದ ವರ್ಷ ಜೈನ್​ ‘ಜೈನ ಗುರು ರಾಜೇಶ್ ಮುನಿ ಮಹಾರಾಜ್ ಅವರು ಸಲ್ಲೇಖನ ವ್ರತದಲ್ಲಿ ಪಿಎಚ್‌ಡಿ ಪದವಿ ಪಡೆದಿದ್ದಾರೆ. 107 ವ್ಯಕ್ತಿಗಳಿಗೆ ಸಂತಾರ ವ್ರತ ಕೈಗೊಳ್ಳಲು ಸಹಾಯ ಮಾಡಿದ್ದಾರೆ. ನಾವು ಭಾರವಾದ ಹೃದಯದಿಂದ ಒಪ್ಪಿಕೊಂಡೆವು. ಸಂತಾರ ಆಚರಣೆಯ ಮಂತ್ರಗಳ ಪಠಣದ ನಂತರ 10 ನಿಮಿಷಗಳಲ್ಲಿ ವಿಯಾನಾ ಕೊನೆಯುಸಿರೆಳೆದರು. ನನ್ನ ಮಗಳು ಹಸುಗಳು ಮತ್ತು ಪಾರಿವಾಳಗಳಿಗೆ ಆಹಾರವನ್ನು ನೀಡುವುದನ್ನು ಇಷ್ಟಪಡುತ್ತಿದ್ದಳು, ನಾವು ಅದನ್ನು ಮುಂದುವರಿಸುತ್ತಿದ್ದೇವೆ. ಭವಿಷ್ಯದಲ್ಲಿ ಆಕೆಯ ನೆನಪಿಗಾಗಿ ದೊಡ್ಡ ಮರಗಳ ನೆಡುವುದು ನನ್ನ ಕನಸಾಗಿದೆ ಎಂದು ಹೇಳಿದ್ದಾರೆ.

ಇನ್ನು ಇಷ್ಟು ಚಿಕ್ಕ ವಯಸ್ಸಿನಲ್ಲಿ ಸಲ್ಲೇಖನ ವ್ರತದ ಮೂಲಕ ಜೀವ ತ್ಯಾಗ ಮಾಡಿದ ಮೊದಲ ನಿದರ್ಶನ ಇದಾಗಿದ್ದು, ಬಾಲಕಿ ವಿಯಾನಾಳ ಹೆಸರನ್ನು ‘ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್’ನಲ್ಲಿ ಸೇರಿಸಲಾಗಿದೆ.

Exit mobile version