ಸ್ಯಾಂಡಲ್ವುಡ್ನ ಖ್ಯಾತ ನಟಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ಮನೆಯಲ್ಲಿ ಸಂಭ್ರಮ ಮನೆಮಾಡಿದೆ. ದಂಪತಿಗಳು ತನ್ನ ಚೊಚ್ಚಲ ಮಗುವಿಗೆ ಮುದ್ದಾದ ಹೆಸರನ್ನು ಇಟ್ಟಿದ್ದಾರೆ. ಈ ಕುರಿತು ತಮ್ಮ ಇನ್ಸ್ಟಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಹೌದು, ನಟಿ ಹರ್ಷಿಕಾ ಪೂಣಚ್ಚ ಹಾಗೂ ಭುವನ್ ಪೊನ್ನಣ್ಣ ತಮ್ಮ ಮಗಳಿಗೆ ತ್ರಿದೇವಿ ಪೊನ್ನಕ್ಕ ಎಂದು ಹೆಸರಿಟ್ಟಿದ್ದಾರೆ. ಈ ಕುರಿತು ಹರ್ಷಿಕಾ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ತಮ್ಮ ಮಗಳ ಹೆಸರನ್ನು ರಿವೀಲ್ ಮಾಡಿದ್ದಾರೆ. ಆ ಫೋಟೋದಲ್ಲಿ ಕೊಡವ ಸಂಪ್ರದಾಯದಂತೆ ಬಟ್ಟೆಯನ್ನು ತೊಟ್ಟು ಮೂವರು ಫೋಟೋಗೆ ಪೋಸ್ ಕೊಟ್ಟಿದ್ದಾರೆ. ಅಲ್ಲದೇ ಇಂದು ವಿರಾಜಪೇಟೆಯಲ್ಲಿ ಮಗಳ ನಾಮಕರಣ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇದನ್ನೂ ಓದಿ:ಗೋವಾದ ಶಿರ್ಗಾಂವ್ ದೇವಸ್ಥಾನದಲ್ಲಿ ಕಾಲ್ತುಳಿತ: 6 ಮಂದಿ ಸಾವು, 50ಕ್ಕೂ ಹೆಚ್ಚು ಜನರಿಗೆ ಗಾಯ
ಇನ್ನು ತಮ್ಮ ಮಗಳ ಹೆಸರಿನ ಹಿನ್ನಲೆಯ ಬಗ್ಗೆ ಬರೆದುಕೊಂಡಿರುವ ನಟಿ. ಹಿಂದೂ ಧರ್ಮದಲ್ಲಿ, ‘ತ್ರಿದೇವಿ’ ಎಂಬುದು ಮೂರು ಪ್ರಮುಖ ದೇವತೆಗಳನ್ನು ಸೂಚಿಸುತ್ತದೆ. ಸರಸ್ವತಿ, ಲಕ್ಷ್ಮಿ ಮತ್ತು ಪಾರ್ವತಿ (ಅಥವಾ ದುರ್ಗಾ). ಅವರನ್ನು ತ್ರಿಮೂರ್ತಿಗಳ (ಬ್ರಹ್ಮ, ವಿಷ್ಣು, ಶಿವ) ಪತ್ನಿಯರೆಂದು ಪರಿಗಣಿಸಲಾಗುತ್ತದೆ ಮತ್ತು ಕ್ರಮವಾಗಿ ಜ್ಞಾನ, ಸಂಪತ್ತು/ಸಮೃದ್ಧಿ ಮತ್ತು ಶಕ್ತಿ/ಪ್ರೀತಿಯನ್ನು ಪ್ರತಿನಿಧಿಸುತ್ತದೆ.
ಇದನ್ನೂ ಓದಿ:‘ಮೋದಿ ಅವಕಾಶ ಕೊಟ್ಟರೆ ನಾನು ಯುದ್ದಕ್ಕೆ ಹೋಗುತ್ತೇನೆ’: ಪಾಕ್ ವಿರುದ್ದ ಕದನಕ್ಕೆ ಇಳಿದ ಜಮೀರ್
ತ್ರಿದೇವಿ = “ತ್ರಿ” ಏಕೆಂದರೆ ಅವಳು ತನ್ನ ಜನ್ಮ ದಿನಾಂಕ ಮತ್ತು ಸಮಯದ ಪ್ರಕಾರ ತುಂಬಾ ಬಲವಾದ ಸಂಖ್ಯೆ 3 ಆಗಿದ್ದಾಳೆ. “ದೇವಿ” ಏಕೆಂದರೆ ಅವಳು ನವರಾತ್ರಿಯ ಮೊದಲ ದಿನದಂದು ಜನಿಸಿದಳು ಮತ್ತು ಮೂಕಾಂಬಿಕಾ ದೇವಿಯಿಂದ ನಮಗೆ ಉಡುಗೊರೆಯಾಗಿ ಬಂದಳು. ಪೊನ್ನಕ್ಕ = ಇದು ಅವಳ ಪೋಷಕರಿಬ್ಬರ ಹೆಸರುಗಳ ಸಂಯೋಜನೆಯಾಗಿದೆ. ಪೊನ್ನಣ್ಣ + ಹರ್ಷಿಕಾ = “ಪೊನ್ನಕ್ಕ”. ನೀವು ಎಲ್ಲಿದ್ದರೂ ನಮ್ಮ ಪುಟ್ಟ ಮಗುವನ್ನು ಆಶೀರ್ವದಿಸಿ ಎಂದು ಬರೆದುಕೊಂಡಿದ್ದಾರೆ.