Site icon PowerTV

‘ಕನ್ನಡ, ಕನ್ನಡ ಎಂದಿದ್ದಕ್ಕೆ ಪಹಲ್ಗಾಮ್​ ದಾಳಿ ಆಯ್ತು’: ಇದೆಂತಾ ಹೇಳಿಕೆ ನೀಡಿದರು ಸೋನು ನಿಗಮ್​

ಬೆಂಗಳೂರು : ಖ್ಯಾತ ಗಾಯಕ ಸೋನು ನಿಗಮ್​ ಕನ್ನಡಕ್ಕೆ ಅವಮಾನ ಮಾಡಿ ಚರ್ಚೆಗಗೆ ಗ್ರಾಸವಾಗಿದ್ದು. ‘ಪಹಲ್ಗಾಮ್ ದಾಳಿಯಾಗಿದ್ದು ಕನ್ನಡದಿಂದಲೇ’ ಎಂಬರ್ಥ ಬರೋ ರೀತಿಯಲ್ಲಿ ಸೋನು ನಿಗಮ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈ ಹೇಳಿಕೆ ವಿರುದ್ದ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದು, ಕನ್ನಡಿಗರು ಸೋನು ನಿಗಮ್​ ವಿರುದ್ದ ಗರಂ ಆಗಿದ್ದಾರೆ.

ಬೆಂಗಳೂರಿನ ಈಸ್ಟ್​ ಪಾಯಿಂಟ್​ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಸೋನು ನಿಗಮ್ ಭಾಗವಹಿಸಿದ್ದರು. ಈ ವೇಳೆ ವಿದ್ಯಾರ್ಥಿಯೊಬ್ಬ ಕನ್ನಡ ಹಾಡು ಹೇಳುವಂತೆ ಕೇಳಿದರು. ಆದರೆ ವೇಳೆ ತಾವು ಹಾಡುತಿದ್ದ ಹಾಡನ್ನು ಅರ್ಧಕ್ಕೆ ನಿಲ್ಲಿಸಿದ ಸೋನು ನಿಗಮ್​  ‘ಕನ್ನಡ.. ಕನ್ನಡ ಇದೇ ಕಾರಣದಿಂದ ಪಹಲ್ಗಾಮ್ ದಾಳಿಯಾಗಿದ್ದು’ ಎಂದು ಹೇಳಿಕೆ ನೀಡಿ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ.

ಇದನ್ನೂ ಓದಿ :ಸುಹಾಸ್​ ಶೆಟ್ಟಿ ಹತ್ಯೆ ಖಂಡಿಸಿ ದಕ್ಷಿಣ ಕನ್ನಡ ಬಂದ್​: ಬಸ್​ ಸಂಚಾರ ಸ್ಥಗಿತ

‘ನನ್ನ ವೃತ್ತಿಜೀವನದಲ್ಲಿ ನಾನು ಬೇರೆ ಬೇರೆ ಭಾಷೆಗಳಲ್ಲಿ ಹಾಡಿದ್ದೇನೆ. ನಾನು ಹಾಡಿದ ಅತ್ಯುತ್ತಮ ಹಾಡುಗಳು ಕನ್ನಡದಲ್ಲಿವೆ. ನಾನು ಕರ್ನಾಟಕಕ್ಕೆ ಬಂದಾಗಲೆಲ್ಲಾ ತುಂಬಾ ಪ್ರೀತಿ, ಗೌರವದಿಂದ ಬರುತ್ತೇನೆ. ಪ್ರತಿ ಬಾರಿ ಯಾರಾದರೂ ಕನ್ನಡ ಎಂದು ಕೂಗಿದಾಗ ಅವರಿಗಾಗಿ ಕನ್ನಡ ಹಾಡನ್ನು ಹಾಡಿರುತ್ತೇನೆ’ ಎಂದಿದ್ದ ಸೋನು ನಿಗಮ್, ಈಗ ಈ ರೀತಿ ಹೇಳಿರುವುದು ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.

ಇನ್ನು ಸೋನುನಿಗಮ್​ ವಿರುದ್ದ ಸಾಮಾಜಿಕ ಜಾಲತಾಣದಲ್ಲಿ ಕನ್ನಡಿಗರಿಂದ ಆಕ್ರೋಶ ವ್ಯಕ್ತವಾಗುತ್ತಿದ್ದು, ಕನ್ನಡ ಪರ ಸಂಘಟನೆಗಳು ಸೋನು ನಿಗಮ್​ಗೆ ಕ್ಷಮೆ ಕೇಳಲು ಉತ್ತಾಯಿಸಿವೆ. ಅವರನ್ನು ಬ್ಯಾನ್ ಮಾಡುವ ಒತ್ತಾಯವೂ ಕೇಳಿ ಬಂದಿದೆ.

Exit mobile version