Site icon PowerTV

‘ಇಲ್ಲಿಂದ ಜೀವಂತವಾಗಿ ಹೋಗ್ತೀನಿ ಅನ್ನೋ ಗ್ಯಾರಂಟಿ ಇಲ್ಲ’: ಜೀವ ಬೆದರಿಕೆ ಬಗ್ಗೆ ಯು.ಟಿ ಖಾದರ್​ ಮಾತು

ಬೀದರ್​ : ನಿಷೇಧಿತ ಪಿಎಪ್‌ಐ ಸಂಘಟನೆಯಿಂದ ಯುಟಿ ಖಾದರ್‌ಗೆ ಜೀವ ಬೆದರಿಕೆ ಇದೆ ಎಂಬ ಅನುಪಮಾ ಶೈನೈ ಹೇಳಿಕೆ ವಿಚಾರವಾಗಿ ಬೀದರ್​ನಲ್ಲಿ ಮಾತನಾಡಿದ ಯು.ಟಿ ಖಾದರ್​ ‘ಎಲ್ಲಿ ಹುಟ್ಟಬೇಕೂ. ಎಲ್ಲಿ ಸಾಯಬೇಕು ಎಂದು ದೇವರು ಬರೆದಿದ್ದಾನೆ. ಅಂಡರ್​ವರ್ಲ್ಡ್​ನಿಂದಲೂ ಜೀವ ಬೆದರಿಕೆ ಕರೆಗಳು ಬಂದಿವೆ ಎಂಬ ಸ್ಪೋಟಕ ಮಾಹಿತಿ ನೀಡಿದರು.

ಬೀದರ್​ನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಖಾದರ್​ ‘ನನಗಾಗಿ ಜಿಲ್ಲೆಯಲ್ಲಿ NIA ಕಛೇರಿ ಸ್ಥಾಪನೆ ಮಾಡೋದು ಬೇಡಾ. ಜಿಲ್ಲೆಯ ಜನರಿಗಾಗಿ ಅಥವಾ ರಾಜ್ಯಕ್ಕಾಗಿ ಸ್ಥಾಪನೆ ಮಾಡಲಿ. ಎಲ್ಲಿ ಹುಟ್ಟಬೇಕೂ ಎಲ್ಲಿ ಸಾಯಬೇಕು ಅದನ್ನ ದೇವರು ಬರೆದಿದ್ದಾನೆ. ನೆಮ್ಮದಿಯಾಗಿ ಸಾಯೋವಂತ ಪರಿಸ್ಥಿತಿ ಮಾಡಿಕೊಡಲಿ ಎಂದು ದೇವರಲ್ಲಿ ಪ್ರಾರ್ಥನೆ ಮಾಡ್ತೇನೆ. ದೇವರು ಇಟ್ಟಂತೆ ಇರೋಣ, ನಮ್ಮ ಕೈಯಲ್ಲಿ ಏನು ಇಲ್ಲಾ ಎಂದು ಖಾದರ್ ಹೇಳಿದರು.

ಇದನ್ನೂ ಓದಿ :KSRTC ಬಸ್​ನಲ್ಲಿ ನಮಾಜ್​ ಮಾಡಿದ್ದ ಎ.ಆರ್​ ಮುಲ್ಲಾ ಕೆಲಸದಿಂದ ಅಮಾನತು

ಮುಂದುವರಿದು ಮಾತನಾಡಿದ ಖಾದರ್ ‘ಇಲ್ಲಿ ಮಾತಡ್ತೀದ್ದೀನಿ, ಇಲ್ಲಿಂದ ವಾಪಸ್​ ಹೋಗ್ತೀನಿ ಅನ್ನೋ ಗ್ಯಾರಂಟಿ ಇಲ್ಲ. ಈ ಹಿಂದೆ ಕೆಲವು ಭಾರಿ ಜೀವ ಬೆದರಿಕೆ ಕರೆಗಳು ಬಂದಿವೆ. ಅಂಡರ್​ವರ್ಲ್ಡ್​​ನಿಂದಲೂ ಜೀವ ಬೆದರಿಕೆ ಕರೆಗಳು ಬಂದಿವೆ ಎಂಬ ಸ್ಪೋಟಕ ವಿಚಾರವನ್ನು ಯುಟಿ ಖಾದರ್ ಹೇಳಿದರು.

Exit mobile version