Site icon PowerTV

ಗಡ್ಡ ತೆಗೆಯಲು ಒಪ್ಪದ ಗಂಡ; ಮೈದುನನ ಜೊತೆ ಪರಾರಿಯಾದ ಹೆಂಡತಿ

ಮೀರತ್​ : ಗಂಡ ಗಡ್ಡ ತೆಗೆಯಲು ಒಪ್ಪಲಿಲ್ಲ ಎಂದು ಮಹಿಳೆಯೊಬ್ಭಳು ಗಂಡನನ್ನು ತ್ಯಜಿಸಿ ಮೈದುನನ ಜೊತೆ ಓಡಿ ಹೋಗಿರುವ ಘಟನೆ ಉತ್ತರ ಪ್ರದೇಶದ ಮೀರತ್​ನಲ್ಲಿ ನಡೆದಿದ್ದು. ಇದೀಗ ಈ ಸುದ್ದಿ ಸಾಕಷ್ಟು ವೈರಲ್​ ಆಗುತ್ತಿದೆ.

ಹೌದು.. ಉತ್ತರ ಪ್ರದೇಶದ ಮೀರತ್​ನಲ್ಲಿ ಇಂತಹ ಘಟನೆ ನಡೆದಿದ್ದು. ಮಹಿಳೆಯೊಬ್ಬರು ಮೀರತ್​ನಲ್ಲಿ ಮೌಲಾನಾ ಒಬ್ಬರನ್ನು ವಿವಾಹವಾಗಿದ್ದಳು, ಮದುವೆಯ ಸಮಯದಲ್ಲಿ ಗಂಡನಿಗಿದ್ದ ಗಡ್ಡ ಆಕೆಗೆ ಇಷ್ಟವಾಗಲಿಲ್ಲ. ಆಕೆ ತನ್ನ ಮನಸ್ಸಿನಲ್ಲಿರುವುದನ್ನು ಗಂಡನ ಬಳಿ ಹೇಳಿಕೊಂಡು ಗಡ್ಡವನ್ನು ತೆಗೆಯಲು ಕೇಳಿದ್ದಾಳೆ. ಆದರೆ ಆತ ಅದನ್ನು ನಿರಾಕರಿಸಿದ್ದ. ಇದೇ ವಿಚಾರಕ್ಕೆ ಇಬ್ಬರ ನಡುವೆ ಆಗಾಗ ಜಗಳಗಳು ನಡೆಯುತ್ತಿದ್ದವು.

ಇದನ್ನೂ ಓದಿ :‘ಇಲ್ಲಿಂದ ಜೀವಂತವಾಗಿ ಹೋಗ್ತೀನಿ ಅನ್ನೋ ಗ್ಯಾರಂಟಿ ಇಲ್ಲ’: ಜೀವ ಬೆದರಿಕೆ ಬಗ್ಗೆ ಯು.ಟಿ ಖಾದರ್​ ಮಾತು

ಆದರೆ ಇತ್ತೀಚೆಗೆ ಗಂಡನೊಂದಿಗೆ ಮಹಿಳೆ ಜಗಳವಾಡುವುದನ್ನು ನಿಲ್ಲಿಸಿದ್ದಳು. ಸಂಸಾರ ಜೊತೆಯಾಗಿ ಸಾಗುತ್ತಿದೆ ಎಂದು ಮಹಿಳೆಯ ಗಂಡ ಮೌಲಾನ ಕೂಡ ತಿಳಿದಿದ್ದ. ಆದರೆ ಮಹಿಳೆ ಮಾತ್ರ ಗಂಡನನ್ನು ಬಿಟ್ಟು ಆತನ ತಮ್ಮನನ್ನು ಪ್ರೀತಿಸಲು ಆರಂಭಿಸಿದ್ದಳು. ಇದೀಗ ಮಹಿಳೆ ತನ್ನ ಮೈದುನನ ಜೊತೆ ಓಡಿಹೋಗಿದ್ದಾಳೆ. ಮಹಿಳೆ ಪತಿ ಪೊಲೀಸ್​ ಠಾಣೆಗೆ ದೂರು ನೀಡಿದ್ದು. ಓಡಿ ಹೋಗಿರುವ ಜೋಡಿಗಳಿಗೆ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂ ಓದಿ:KSRTC ಬಸ್​ನಲ್ಲಿ ನಮಾಜ್​ ಮಾಡಿದ್ದ ಎ.ಆರ್​ ಮುಲ್ಲಾ ಕೆಲಸದಿಂದ ಅಮಾನತು

ತನಿಖೆಯಿಂದ ಮಹಿಳೆ ಲುಧಿಯಾನದಲ್ಲಿದ್ದಾಳೆಂದು ತಿಳಿದುಬಂದಿದೆ. ಮಹಿಳೆಯನ್ನು ಕರೆತರಲು ಪೊಲೀಸರು ಒಂದು ತಂಡವನ್ನು ರಚಿಸಿದ್ದು, ಮಹಿಳೆ ನಿರ್ದಿಷ್ಟ ಸ್ಥಳಕ್ಕೆ ತೆರಳಿದ್ದಾರೆ.

Exit mobile version