Site icon PowerTV

ಯತ್ನಾಳ್ ಪೈಗಂಬರ್​ ಅವರ ಕಾಲಿನ ಧೂಳಿಗೂ ಸಮವಲ್ಲ: ವಿಜಯಾನಂದ ಕಾಶಪ್ಪನವರ್​

ವಿಜಯಪುರ : ಪೈಗಂಬರ್​ ವಿರುದ್ದ ಹೇಳಿಕೆ ನೀಡಿದ್ದ ಯತ್ನಾಳ್​ ವಿರುದ್ದ ವಿಜಯಪುರದಲ್ಲಿ ಮುಸ್ಲಿಂ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿದ್ದು. ಈ ಪ್ರತಿಭಟನೆಯಲ್ಲಿ ಮಾತನಾಡಿದ ವಿಜಯನಂದ ಕಾಶಪ್ಪನವರ್ ಯತ್ನಾಳ್​ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಯತ್ನಾಲ್​ ಪೈಗಂಬರ್​ರರ ಕಾಲಿನ ಧೂಳಿಗೂ ಸಮವಲ್ಲ ಎಂದು ಹೇಳಿದ್ದಾರೆ.

ವಿಜಯಪುರದ ಪ್ರತಿಭಟನೆಯಲ್ಲಿ ಮಾತನಾಡಿದ ಕಾಶಪ್ಪನವರ್​ ‘ಮಿಸ್ಟರ್ ಯತ್ನಾಳ್ ನೀನು ಪೈಗಂಬರ್ ವಿರುದ್ಧ ಮಾತನಾಡಿದ್ದು ಸರಿ ಅಲ್ಲ. ಪೈಗಂಬರ್ 1400 ವರ್ಷಗಳ ಹಿಂದೆ ಪ್ರಾಣಿಗಳ ಮೇಲೆ ದಯೆ, ಕರುಣೆ ಇರಬೇಕು ಎಂದು ಹೇಳಿದ್ದಾರೆ. ಯತ್ನಾಳ್ ಒಬ್ಬ ನರಪಿಳ್ಳೆ. ಯತ್ನಾಳ್​ಗೆ ದಯೆ ಇಲ್ಲ, ಧರ್ಮವೂ ಇಲ್ಲ, ಯತ್ನಾಳ್ ಹುಚ್ಚು ನಾಯಿ. ಯತ್ನಾಳ್ ಪೈಗಂಬರ್​ರ ಕಾಲಲ್ಲಿನ ಧೂಳಿಗೂ ಸಮವಲ್ಲ. ಯತ್ನಾಳ್ ಗೊಡ್ಡು ಎಮ್ಮೆ, ಮೆದುಳು ನಾಲಿಗೆಗೆ ಲಿಂಕ್ ಇಲ್ಲ. ಬಿಜೆಪಿಯಿಂದ ಉಚ್ಚಾಟನೆ ಆದ ಮೇಲೆ ಯತ್ನಾಳ್​ಗೆ ಪೂರ್ತಿ ತಲೆ ಕೆಟ್ಟಿದೆ. ಇದನ್ನೂ ಓದಿ :63 ಸಾವಿರ ಕೋಟಿ ಮೌಲ್ಯದ 26 ರಫೇಲ್​ ಯುದ್ದ ವಿಮಾನ ಖರೀದಿಗೆ ಭಾರತ-ಫ್ರಾನ್ಸ್​​ ಒಪ್ಪಂದ

ಠಾಕ್ರೆ ಮನೆಯಲ್ಲಿ ಯತ್ನಾಳ್ ಹುಟ್ಟಬೇಕಿತ್ತು, ವಿಜಯಪುರದಲ್ಲಿ ತಪ್ಪಿ ಹುಟ್ಟಿದ್ದಾನೆ. ಹಿಂದೂ ಸರ್ವನಾಶ ಮಾಡಲು ಹುಟ್ಟಿದ್ದಾನೆ. ಹಿಂದೂಗಳ ಮನೆಯಲ್ಲಿ ಗೊಡ್ಡು ಎಮ್ಮೆ ಹುಟ್ಟಿದೆ. ಬಸವಣ್ಣನವರ ಮನೆಯಲ್ಲಿ ಗೊಡ್ಡು ಎಮ್ಮೆ ಹುಟ್ಟಿದೆ. ಯತ್ನಾಳ್‌ಗೆ ಕ್ಷಮೆ ಕೇಳು ಎಂದು ಕೇಳಬೇಡಿ. ಯತ್ನಾಳ್ ಟೈಂ ಹತ್ತಿರ ಬಂದಿದೆ. ಯತ್ನಾಳ್ ಲಿಂಗಾಯತರ ಮನೆಯಲ್ಲೂ ಹುಟ್ಟೋಕು ನಾಲಾಯಕ್​. ಅವನಿಗೆ ಧರ್ಮದ ಬಗ್ಗೆ ನಿಷ್ಟೆ ಇಲ್ಲ. ಆತನ ಅಂತಿಮ ಕಾಲ ಹತ್ತಿರ ಬಂದಿದೆ ಎಂದು ಹೇಳಿದರು.

ಇದನ್ನೂ ಓದಿ :ಕಾಂಗ್ರೆಸ್​ ಸಮಾವೇಶದಲ್ಲಿ ಪ್ರತಿಭಟನೆ: ASP ಮೇಲೆ ಕೈ ಎತ್ತಿದ ಸಿಎಂ ಸಿದ್ದರಾಮಯ್ಯ

ಕಾಂಗ್ರೆಸ್ ಕಛೇರಿಯ ಮುಂದೆ ಹೆಣವನ್ನು ಹೊಯ್ಯಬೇಡಿ ಎಂದು ಹೇಳಿದ್ದ ಯತ್ನಾಳ್​ ಮಾತಿಗೆ ನಾಲಿಗೆ ಹರಿಬಿಟ್ಟ ಕಾಶಪ್ಪನವರ್ ‘ಯತ್ನಾಳ್ ಸತ್ತರೆ ಕರ್ನಾಟಕದಲ್ಲಿ ಮಣ್ಣು ಮಾಡಬಾರದು. ಸರ್ವಜನಾಂಗದ ಶಾಂತಿಯ ತೋಟ ಕರ್ನಾಟಕ ಇದನ್ನು ಮುಗಿಸಲು ಯತ್ನಾಳ್​ ಹುಟ್ಟಿದ್ದಾನೆ. ಕ್ಷಮೆ ಕೇಳಿ ಎನ್ನುವ ಗಾಂಡುಗಳು ನಾವಲ್ಲ. ನೀನು
ರಾಜೀನಾಮೆ ಕೊಟ್ಟು ಬಿಡು.. ಹಮೀದ್ ಮುಶ್ರೀಪ್​ಗೆ ಗೆಲ್ಲಿಸ್ತೇವೆ. ಹಮೀದ್ ಗೆಲ್ಲಿಸದಿದ್ದರೇ ನಾವು ಅಪ್ಪನಿಗೆ ಹುಟ್ಟಿಲ್ಲ‌ ಎಂದ ಕಾಶಪ್ಪನವರ್ ಎಂದು ಹೇಳಿದರು.

Exit mobile version