ಬೆಳಗಾವಿ: ಕೇಂದ್ರ ಸರ್ಕಾರದ ಬೆಲೆ ಏರಿಕೆ ನೀತಿ ವಿರೋಧಿಸಿ ರಾಜ್ಯ ಕಾಂಗ್ರೆಸ್ ಸರ್ಕಾರ ಬೆಳಗಾವಿಯಲ್ಲಿ ಸಮಾವೇಶ ನಡೆಸುತ್ತಿದ್ದು. ಈ ಕಾರ್ಯಕ್ರಮದಲ್ಲಿ ಬಿಜೆಪಿ ಮಹಿಳಾ ಕಾರ್ಯಕರ್ತರು ಕಪ್ಪುಬಟ್ಟೆ ಪ್ರದರ್ಶಿಸಿ, ವೇದಿಕೆ ಮೇಲೆ ಪ್ರವೇಶಿಸಿಲು ಯತ್ನಿಸಿದ್ದಾರೆ. ಈ ವೇಳೆ ಸಿದ್ದರಾಮಯ್ಯ ಗರಂ ಆಗಿದ್ದು. ವೇದಿಕೆ ಮೇಲೆಯೇ ಬೆಳಗಾವಿ ಹೆಚ್ಚುವರಿ ಎಸ್‌ಪಿ ವಿರುದ್ಧ ಗರಂ ಆದರು. ಕೆನ್ನೆಗೆ ಹೊಡೆಯುವಂತೆ ಸನ್ನೆ ಮಾಡಿದರು.
ಬೆಳಗಾವಿಯ ಸಿಪಿಎಡ್ ಮೈದಾನದಲ್ಲಿ ನಡೆಯುತ್ತಿರುವ ಕಾಂಗ್ರೆಸ್ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಘಟನೆ ನಡೆದಿದ್ದು. ಸಿಎಂ ಸಿದ್ದರಾಮಯ್ಯ ಭಾಷಣದ ವೇಳೆ ಬಿಜೆಪಿ ಮಹಿಳಾ ಕಾರ್ಯಕರ್ತರು ಕಪ್ಪುಬಟ್ಟೆ ತೋರಿಸಿದರು. ಈ ವೇಳೆ ಪೊಲೀಸರು ತಕ್ಷಣವೇ ಅವರನ್ನು ವಶಕ್ಕೆ ಪಡೆದರು.
ಇದನ್ನೂ ಓದಿ :ಕೊಪ್ಪಳ: ಬಾಲ್ಯ ವಿವಾಹಕ್ಕೆ ಬಂದು ಮುಜುಗರಕ್ಕೀಡಾದ ಹಾಲಿ ಶಾಸಕ ಮತ್ತು ಮಾಜಿ ಸಚಿವ
ಆದರೆ ಈ ವೇಳೆ ಪೊಲೀಸರ ವಿರುದ್ದ ಗರಂ ಆದ ಸಿದ್ದರಾಮಯ್ಯ ಅಲ್ಲಿಯೇ ಇದ್ದ ಪೊಲೀಸರನ್ನು ‘ಏಯ್ ಪೊಲೀಸ್ ಬಾರಯ್ಯ ಇಲ್ಲಿ, ಅವನ್ಯಾವನು ಎಸ್ಪಿ ಏನ್ ಮಾಡ್ತಾ ಇದ್ದೀರಾ ಎಂದು ಪೊಲೀಸರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಷ್ಟೇ ಅಲ್ಲದೇ ಧಾರವಾಡದ ಹೆಚ್ಚುವರಿ ಎಎಸ್ಪಿ ನಾರಾಯಣ ಬರಮನಿ ಅವರ ಕೆನ್ನಗೆ ಹೊಡೆಯುವಂತೆ ಸನ್ನೆ ಮಾಡಿದ್ದಾರೆ.