Site icon PowerTV

ಕೈಕೊಟ್ಟ ಯುವತಿ; ಸೇತುವೆ ಮೇಲಿಂದ ಜಿಗಿದು ಯುವಕ ಆತ್ಮಹತ್ಯೆ

ಹುಬ್ಬಳ್ಳಿ : ಪ್ರೀತಿಸುತ್ತಿದ್ದ ಯುವತಿ ಕೈ ಕೊಟ್ಟಿದ್ದಕ್ಕೆ ಯುವಕನೊಬ್ಬ ಸೇತುವೆ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದ್ದು. ಮೃತ ಯುವಕನನ್ನು 21 ವರ್ಷದ ಅವಿನಾಶ್ ಎಂದು ಗುರುತಿಸಲಾಗಿದೆ.

ಹಳೆ ಹುಬ್ಬಳ್ಳಿಯ ಪೊಲೀಸ್ ಠಾಣೆ ವ್ಯಾಪ್ತಿಯ, ಹೆಗ್ಗೆರಿ ಬಡಾವಣೆಯ 21 ವರ್ಷದ ಜಗದೀಶ್ ಅವಿನಾಶ್​ ಮುದ್ದಿ ಎಂಬಾತ ಯುವತಿಯೊಬ್ಬಳನ್ನು ಹಲವು ವರ್ಷದಿದ ಪ್ರೀತಿ ಮಾಡುತ್ತಿದ್ದನು. ಆಕೆಯೂ ಕೂಡ ಜಗದೀಶ್​ನನ್ನೂ ಪ್ರೀತಿಸುತ್ತಿದ್ದಳು. ಆದರೆ ಯುವತಿ ಇತ್ತೀಚೆಗೆ ಜಗದೀಶ್​ ಪ್ರೀತಿಯನ್ನು ನಿರಾಕರಿಸಿದ್ದಳು. ಇದರಿಂದ ನೊಂದಿದ್ದ ಅವಿನಾಶ್​ ಸೇತುವೆ ಮೇಲಿಂದ ಬಿದ್ದು ಸಾವನ್ನಪ್ಪಿದ್ದಾನೆ. ಇದನ್ನೂ ಓದಿ :ಬರದ ಭೂಮಿಯಲ್ಲಿ ಸೇಬು ಬೆಳೆದು ಮಾದರಿಯಾಗಿದ್ದ ರೈತನಿಗೆ ಮೋದಿ ಮೆಚ್ಚುಗೆ

ಪ್ರೇಮ ವೈಫಲ್ಯದ ಹಿನ್ನೆಲೆಯಲ್ಲಿ ಗುಡಿಹಾಳ ಬ್ರಿಡ್ಜ್ ಮೇಲಿಂದ ಅವಿನಾಶ್ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದು. ನಗರದ ಹೆಗ್ಗೆರಿಯ ಜಗದೀಶ್ ನಗರ ನಿವಾಸಿಯಾಗಿರುವ ಇವನಿಗೆ 21 ವರ್ಷ ಯುವತಿಯು ಪ್ರೇಮದ ವಿಷಯದಲ್ಲಿ ನಿರಾಕರಣೆ ಮಾಡಿದ ವಿಚಾರಕ್ಕೆ ಮನನೊಂದು ಸಾವಿನ ಹಾದಿ ಹಿಡಿದಿದ್ದಾನೆ. ಸೇತುವೆ ಮೇಲಿಂದ ಬಿದ್ದ ಹಿನ್ನೆಲೆಯಲ್ಲಿ ತೀವ್ರವಾಗಿ ರಕ್ತಸ್ರಾವ ಆಗಿದ್ದು ಸ್ಥಳದಲ್ಲೇ ಮೃತನಾಗಿದ್ದಾನೆ.ಇನ್ನೂ ಈ ಒಂದು ಸುದ್ದಿ ತಿಳಿದ ಹಳೆ ಹುಬ್ಬಳ್ಳಿಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ದೂರು ದಾಖಲು ಮಾಡಿಕೊಂಡಿದ್ದಾರೆ.

ಇದನ್ನೂ ಓದಿ :ಎಂತಹ ಕಠಿಣ ಸಮಯ ಬಂದರೂ ಕೇಂದ್ರ ಸರ್ಕಾರಕ್ಕೆ ಸಹಕಾರ ನೀಡುತ್ತೇವೆ: ಸಿಎಂ ಸಿದ್ದರಾಮಯ್ಯ

ಹಳೇ ಹುಬ್ಬಳ್ಳಿ ಠಾಣೆಯ ಪೊಲೀಸರು ಬೇಟಿ ನೀಡಿ ಹೆಚ್ಚಿನ ಮಾಹಿತಿ ಕಲೆ ಹಾಕಿದ್ದು ಇತ್ತ ಸಣ್ಣ ವಯಸ್ಸಿನಲ್ಲಿ ಸಾವಿಗೀಡಾದ ಯುವಕನನ್ನು ಕಳೆದುಕೊಂಡ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ. ಇತ್ತ ಇವೆಲ್ಲದರ ನಡುವೆ ಅವಿನಾಶ್ ಆತ್ಮಹತ್ಯೆ ಗೆ ನಿಜವಾದ ಕಾರಣ ಏನು ಆ ಯುವತಿ ಯಾರು ಎಲ್ಲಾ ವಿಚಾರ ಗಳ ಕುರಿತಂತೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ

 

Exit mobile version