Site icon PowerTV

ಪಾಕ್‌ ಮಾಧ್ಯಮಗಳಲ್ಲಿ ಸುದ್ದಿಯಾದ ಸಿದ್ದರಾಮಯ್ಯ; ‘ಪಾಕಿಸ್ತಾನದ ರತ್ನ’ ಎಂದ ಆರ್.ಅಶೋಕ್​

ಬೆಂಗಳೂರು: ಕರ್ನಾಟಕ ಸಿಎಂ ಸಿದ್ದರಾಮಯ್ಯ ಪಾಕ್​ ಜೊತೆ ಯುದ್ದ ಬೇಡ ಎಂಬ ಹೇಳಿಕೆಯನ್ನು ಪಾಕ್​ ಮಾಧ್ಯಮಗಳು ವರದಿ ಮಾಡಿದ್ದು. ಇದೀಗ ಸಿಎಂ ಸಿದ್ದರಾಮಯ್ಯ ಪಾಕ್​ ಮಾಧ್ಯಮಗಳಲ್ಲಿ ಫೇಮಸ್​ ಆಗಿದ್ದಾರೆ. ಈ ಕುರಿತು ವಿಪಕ್ಷ ನಾಯಕ ಆರ್​.ಅಶೋಕ್​ ಸಾಮಾಜಿಕ ಜಾಲತಾಣದಲ್ಲಿ ಕಿಡಿಕಾರಿದ್ದು. ಸಿದ್ದರಾಮಯ್ಯರನ್ನು ‘ಪಾಕಿಸ್ತಾನ ರತ್ನ’ ಎಂದು ವಿಡಂಭಿಸಿದ್ದಾರೆ.

ನಿನ್ನೆ(ಏ.26) ಮೈಸೂರಿನಲ್ಲಿ ಭಾರತ ಮತ್ತು ಪಾಕ್​ ನಡುವಿನ ಯುದ್ದದ ಕಾರ್ಮೋಡದ ಬಗ್ಗೆ ಮಾತನಾಡಿದ್ದ ಸಿಎಂ ‘ಪಾಕಿಸ್ತಾನದ ಜೊತೆ ಯುದ್ದದ ಅನಿವಾರ್ಯತೆ ಇಲ್ಲ. ಕೇಂದ್ರ ಸರ್ಕಾರ ಭದ್ರತೆಯನ್ನು ಹೆಚ್ಚಿಸಬೇಕು. ನಾವು ಯುದ್ದದ ಪರವಾಗಿಲ್ಲ. ನಾವು ಶಾಂತಿ ಪ್ರಿಯರು ಎಂದು ಹೇಳಿದ್ದರು. ಈ ಹೇಳಿಕೆಯನ್ನ ಪಾಕ್​ ಮಾಧ್ಯಮಗಳು ವರದಿ ಮಾಡಿವೆ.

ಇದನ್ನು ಓದಿ :ಇರಾನ್ ಬಂದರಿನಲ್ಲಿ ಪ್ರಬಲ ಸ್ಫೋಟ: 500ಕ್ಕೂ ಹೆಚ್ಚು ಜನರಿಗೆ ಗಾಯ

ಸಿದ್ದರಾಮಯ್ಯರ ಹೇಳಿಕೆಯನ್ನ ಪಾಕಿಸ್ತಾನ ಮಾಧ್ಯಮಗಳು ಹೊಗಳಿ ಕೊಂಡಾಡಿದ್ದು. ಈ ಕುರಿತು ಮಾತನಾಡಿರುವ ಪಾಕ್​ ಮಾಧ್ಯಮದ ನಿರೂಪಕಿ ‘ಸಿದ್ದರಾಮಯ್ಯನವರು ಭಾರತ ಯುದ್ದ ಮಾಡುವ ಅವಶ್ಯಕತೆ ಇಲ್ಲ, ಬದಲಾಗಿ ಭದ್ರತಾ ಕ್ರಮ ಕೈಗೊಳ್ಳಬೇಕೂ ಎಂಬ ಹೇಳಿಕೆ ಪ್ರಬುದ್ದವಾಗಿದೆ ಎಂದು ಹೇಳಿದ್ದಾರೆ’. ಇದೀಗ ಸಿದ್ದರಾಮಯ್ಯರ ಹೇಳಿಕೆಗೆ ದೇಶದೆಲ್ಲಡೆ ಆಕ್ರೋಶ ವ್ಯಕ್ತವಾಗುತ್ತಿದೆ.

ಕಿಡಿಕಾರಿದ ವಿಪಕ್ಷ ನಾಯಕ ಆರ್​.ಅಶೋಕ್​..!

ಸಾಮಾಜಿಕ ಜಾಲತಾಣದಲ್ಲಿ ಆರ್​.ಅಶೋಕ್​ ಸಿದ್ದರಾಮಯ್ಯರ ವಿರುದ್ದ ಕಿಡಿಕಾರಿದ್ದು ‘ಪಾಕಿಸ್ತಾನ ರತ್ನ ಸಿಎಂ ಸಿದ್ದರಾಮಯ್ಯನವರೇ, ತಮ್ಮ ಬಾಲಿಶ, ಅಸಂಬದ್ಧ ಹೇಳಿಕೆಗಳಿಂದ ಈಗ ರಾತ್ರೋರಾತ್ರಿ ಪಾಕಿಸ್ತಾನದಲ್ಲಿ ವರ್ಲ್ಡ್ ಫೇಮಸ್ ಆಗಿಬಿಟ್ಟಿದ್ದೀರಿ. ತಮಗೆ ಅಭಿನಂದನೆಗಳು. ಮುಂದೆಂದಾದರೂ ತಾವು ಪಾಕಿಸ್ತಾನಕ್ಕೆ ಭೇಟಿ ಕೊಟ್ಟರೆ ತಮಗೆ ರಾಜಾತಿಥ್ಯ ಗ್ಯಾರೆಂಟಿ. ಪಾಕಿಸ್ತಾನದ ಪರ ವಕಾಲತ್ತು ವಹಿಸಿದ ಮಹಾನ್ ಶಾಂತಿದೂತ ಎಂದು ಪಾಕಿಸ್ತಾನ ಸರ್ಕಾರ ತಮಗೆ ಅಲ್ಲಿನ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ನಿಶಾನ್-ಎ-ಪಾಕಿಸ್ತಾನ ಪ್ರಶಸ್ತಿ ಕೊಟ್ಟು ಸನ್ಮಾನ ಮಾಡಿದರೂ ಅಚ್ಚರಿಯಿಲ್ಲ.

ಇದನ್ನೂ ಓದಿ :ಕೆರೆಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ತಂದೆ–ಮಗಳು ದಾರುಣ ಸಾ*ವು

ದೇಶ ಅತ್ಯಂತ ಸೂಕ್ಷ್ಮ ಪರಿಸ್ಥಿತಿ ಎದುರಿಸುತ್ತಿರುವಾಗ, ಗಡಿಯಲ್ಲಿ ಯುದ್ಧದ ಕಾರ್ಮೋಡ ಕವಿದಿರುವಾಗ ಈ ರೀತಿ ಶತ್ರುರಾಷ್ಟ್ರದ ಕೈಗೊಂಬೆಯಂತೆ ವರ್ತಿಸುತ್ತದ್ದೀರಲ್ಲ, ನಿಮ್ಮಂತಹವರು ಸಾರ್ವಜನಿಕ ಬದುಕಿನಲ್ಲಿ ಇರುವುದೇ ನಮ್ಮ ದೇಶದ ಅತ್ಯಂತ ದೊಡ್ಡ ದುರಂತ ಎಂದು ಬರೆದುಕೊಂಡಿದ್ದಾರೆ.

 

Exit mobile version