Site icon PowerTV

ನಿಂತಿದ್ದ ಲಾರಿಗೆ ಕಾರ್​ ಡಿಕ್ಕಿ; ಮದುವೆಗೆ ಆಹ್ವಾನಿಸಲು ಹೋಗುತ್ತಿದ್ದ ಮೂವರು ಸಾ*ವು

ಕಲಬುರಗಿ: ಮದುವೆ ಆಮಂತ್ರಣ ಪತ್ರಗಳನ್ನು ನೀಡಲು ತೆರಳುತ್ತಿದ್ದ ವೇಳೆ ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಕಾರು ಡಿಕ್ಕಿಯಾಗಿ ಮೂವರು ಸಾವನ್ನಪ್ಪಿರುವ ಘಟನೆ ಕಲಬುರಗಿಯಲ್ಲಿ ನಡೆದಿದ್ದು. ಓರ್ವ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಕಲಬುರಗಿಯ ಸೇಡಂ ಬಳಿಯ ಮಳಖೇಡ ಬಳಿ ಅಪಘಾತ ಸಂಭವಿಸಿದ್ದು. ಮದುವೆ ಆಹ್ವಾನ ಪತ್ರಿಕೆ ನೀಡಲು ಎಂದು ಹೋಗುತ್ತಿದ್ದ ವೇಳೆ ಕಾರು ನಿಂತಿದ್ದ ಲಾರಿಗೆ ಡಿಕ್ಕಿಯಾಗಿ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಮಹೇಶ್ (32), ಪ್ರೇಮ್‍ಕುಮಾರ್ (25), ಅನ್ನದಾನಯ್ಯ (25) ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದು. ಘಟನೆಯಲ್ಲಿ ನಿತ್ಯಾನಂದ ಎಂಬಾತ ಗಂಭೀರವಾಗಿ ಗಾಯಗೊಂಡಿದ್ದು, ಆತನನ್ನು ಕಲಬುರಗಿಯ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.

ಇದನ್ನೂ ಓದಿ :‘ಸಾಬ್ರು ಎಂಜಲು ತಿನ್ನೋ ಪಾರ್ಟಿ’, ಸಿದ್ದರಾಮಯ್ಯ ವಿರುದ್ದ ಯತ್ನಾಳ್​ ವಾಗ್ದಾಳಿ

ಕೆಲವೇ ದಿನಗಳಲ್ಲಿ ಮದುವೆ ನಡೆಯಬೇಕಿದ್ದ ಕಾರಣ ಎಲ್ಲ ನಾಲ್ವರು ಕಾರಿನಲ್ಲಿ ಸಂಬಂಧಿಕರಿಗೆ ಮದುವೆ ಆಮಂತ್ರಣ ಪತ್ರಗಳನ್ನು ನೀಡಲು ಹೊರಟಿದ್ದರು. ಈ ಮಧ್ಯೆ, ಮಳಖೇಡ ಸಮೀಪದ ರಾಜ್ಯ ಹೆದ್ದಾರಿ ಪಕ್ಕದಲ್ಲಿ ನಿಂತಿದ್ದ ಲಾರಿಗೆ ಕಾರು ಅಪ್ಪಳಿಸಿದ್ದರಿಂದ ಈ ದುರಂತ ನಡೆದಿದೆ.
Exit mobile version