Site icon PowerTV

ಹೆದ್ದಾರಿ ಸ್ವಚ್ಚಗೊಳಿಸುತ್ತಿದ್ದ ಸ್ವಚ್ಚತ ಸಿಬ್ಬಂದಿಗೆ ಪಿಕಪ್​ ವಾಹನ ಡಿಕ್ಕಿ: 6 ಮಂದಿ ಸಾ*ವು

ನವದೆಹಲಿ: ದೆಹಲಿ-ಮುಂಬೈ ಎಕ್ಸ್‌ಪ್ರೆಸ್‌ ವೇ ಸ್ವಚ್ಚಗೊಳಿಸುತ್ತಿದ್ದ ಸ್ವಚ್ಚತ ಸಿಬ್ಬಂದಿಗೆ ಪಿಕಪ್​ ವಾಹನವೊಂದು  ಡಿಕ್ಕಿಯಾಗಿ 6 ಮಂದಿ ಸ್ವಚ್ಚತಾ ಸಿಬ್ಬಂದಿ ಸಾವನ್ನಪ್ಪಿರುವ ಘಟನೆ ಹರಿಯಾಣದ ಫಿರೋಜ್​ಪುರ್​ನಲ್ಲಿ ನಡೆದಿದೆ.

ಹರಿಯಾಣದ ಫಿರೋಜ್‌ಪುರ್, ಝಿರ್ಕಾದ ಇಬ್ರಾಹಿಂ ಬಾಸ್ ಗ್ರಾಮದ ಬಳಿ ನಡೆದಿದೆ ಘಟನೆ ನಡೆದಿದ್ದು. ಶನಿವಾರ ಬೆಳಗ್ಗೆ 10 ಗಂಟೆಯ ಸುಮಾರಿಗೆ ಭೀಕರ ಅಪಘಾತ ಸಂಭವಿಸಿದೆ. ಘಟನೆಯ ಬಳಿಕ ಪಿಕಪ್ ಚಾಲಕ ವಾಹನವನ್ನು ಸ್ಥಳದಲ್ಲೇ ಬಿಟ್ಟು ಪರಾರಿಯಾಗಿದ್ದಾನೆ. ಘಟನೆಯಲ್ಲಿ ಆರು ಮಹಿಳೆಯರು ಸಾವನ್ನಪ್ಪಿದ್ದು, ಒಬ್ಬ ಪುರುಷ ಸೇರಿದಂತೆ ಐದು ಮಂದಿ ಗಾಯಗೊಂಡಿದ್ದಾರೆ. ಗಾಯಗೊಂಡ ಕಾರ್ಮಿಕರನ್ನು ಮಂಡಿ ಖೇರಾ ಆಸ್ಪತ್ರೆಗೆ ರವಾನಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಇದನ್ನೂ ಓದಿ :ದೇಶಕ್ಕೆ ಏನ್​ ಆದರೂ ಪರವಾಗಿಲ್ಲ, ವೋಟ್​ ಬಿದ್ದರೆ ಸಾಕು ಎಂಬ ಮನಸ್ಥಿತಿಗೆ ಸಿಎಂ ಬಂದಿದ್ದಾರೆ: ಅಶೋಕ್​

ಪ್ರಾಥಮಿಕ ತನಿಖೆಯ ಪ್ರಕಾರ, ಸಾವನ್ನಪ್ಪಿದ ಕಾರ್ಮಿಕರಲ್ಲಿ ಐದು ಮಂದಿ ಖೇರಿ ಕಲಾನ್ ಗ್ರಾಮಕ್ಕೆ ಸೇರಿದವರು ಮತ್ತು ಒಬ್ಬರು ಜಿಮ್ರಾವತ್ ಗ್ರಾಮಕ್ಕೆ ಸೇರಿದವರು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೆಹಲಿಯಿಂದ ಅಲ್ವಾರ್ ಕಡೆಗೆ ವೇಗವಾಗಿ ಹೋಗುತ್ತಿದ್ದ ಪಿಕಪ್ ನಿಯಂತ್ರಣ ತಪ್ಪಿ ಕಾರ್ಮಿಕರಿಗೆ ಡಿಕ್ಕಿ ಹೊಡೆದಿದೆ ಎಂದು ಪ್ರಾಥಮಿಕ ವರದಿಗಳು ತಿಳಿಸಿವೆ. ಘಟನೆ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ.

 

Exit mobile version