Site icon PowerTV

ಪಾಕ್​ ಜೊತೆ ಯುದ್ದದ ಅನಿವಾರ್ಯತೆ ಇಲ್ಲ, ಕೇಂದ್ರ ಸರ್ಕಾರ ಜನರಿಗೆ ಟೋಪಿ ಹಾಕಿದೆ: ಸಿಎಂ ಸಿದ್ದರಾಮಯ್ಯ

ಮೈಸೂರು : ಜಮ್ಮು-ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಭೀಕರ ಉಗ್ರ ದಾಳಿಯ ಬಗ್ಗೆ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮದ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ‘ಪಾಕಿಸ್ತಾನದ ಜೊತೆ ಯುದ್ದದ ಅನಿವಾರ್ಯತೆ ಇಲ್ಲ, ನಾವು ಶಾಂತಿಯ ಪರವಾಗಿ ಇರುವವರು, ಆದರೆ ಭದ್ರತೆ ವಿಚಾರದಲ್ಲಿ ಕೇಂದ್ರ ಸರ್ಕಾರ ಜನರಿಗೆ ಟೋಪಿ ಹಾಕಿದೆ ಎಂದು ಹೇಳಿದರು.

ರಾಜ್ಯದಲ್ಲಿರುವ ಪಾಕ್​ ಪ್ರಜೆಗಳನ್ನು ವಾಪಸ್​ ಕಳುಹಿಸುವ ವಿಚಾರವಾಗಿ ಮಾತನಾಡಿದ ಸಿಎಂ ‘ಕೇಂದ್ರದ ಸೂಚನೆಗೆ ನಾವು ಸಹಕಾರ ಕೊಡುತ್ತೇವೆ. ರಾಜ್ಯದಲ್ಲಿ ಎಷ್ಟು ಜನ ಪಾಕಿಸ್ತಾನ ಪ್ರಜೆಗಳು ಇದ್ದಾರೆ ಎಂಬ ಬಗ್ಗೆ ನನಗೆ ಮಾಹಿತಿ ಇಲ್ಲ. ಕೇಂದ್ರದ ಸೂಚನೆಯನ್ನ ನಾವು ಪಾಲಿಸುತ್ತೇವೆ‌. ಬೆಂಗಳೂರಿನಲ್ಲಿ ಅತಿ ಹೆಚ್ಚು ಜನರು ಇರುವ ಸಾಧ್ಯತೆ ಇದೆ. ಇದರ ಬಗ್ಗೆ ಸೂಕ್ತ ಕ್ರಮಕೈಗೊಳ್ಳುತ್ತೇವೆ‌ ಎಂದು ಹೇಳಿದರು.

ಇದನ್ನೂ ಓದಿ :ನಾನು ಭಾರತ, ಪಾಕಿಸ್ತಾನಕ್ಕೆ ಹತ್ತಿರವಾಗಿದ್ದೇನೆ, ಆದರೆ ಪಹಲ್ಗಾಂ ದಾಳಿ ಬಹಳ ಕೆಟ್ಟ ದಾಳಿ: ಟ್ರಂಪ್​

ಪಾಕ್​ ಜೊತೆ ಯುದ್ದದ ಅನಿವಾರ್ಯತೆ ಇಲ್ಲ ಎಂದ ಸಿಎಂ..!

ಪಹಲ್ಗಾಂನಲ್ಲಿ ನಡೆದಿರುವ ಭೀಕರ ಭಯೋತ್ಪಾದಕ ದಾಳಿಗೆ ಪ್ರತಿಕಾರ ತೆಗೆದುಕೊಳ್ಳಬೇಕು ಎಂಬ ಕೂಗು ಕೇಳಿಬರುತ್ತಿದ್ದು. ಎರಡು ದೇಶದ ಗಡಿಗಳಲ್ಲಿ ಯುದ್ದದ ಕಾರ್ಮೋಡ ಆವರಿಸಿದೆ. ಈ ಕುರಿತು ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು. ‘ ಪಾಕಿಸ್ತಾನದ ಜೊತೆ ಯುದ್ಧದ ಅನಿರ್ವಾಯತೆ ಇಲ್ಲ. ನಾವು ಯಾವತ್ತು ಯುದ್ಧದ ಪರ ಇಲ್ಲ. ಯುದ್ಧದ ಬದಲು ಭದ್ರತೆಯನ್ನ ಬಿಗಿ ಮಾಡಿಕೊಳ್ಳಬೇಕಿದೆ. ನಾವು ಯಾವತ್ತು ಶಾಂತಿಯ ಪರವಾಗಿದ್ದೇವೆ. ಯುದ್ಧದ ಬಗ್ಗೆ ಯೋಚನೆ ಬೇಡ, ಕೇಂದ್ರ ಸರ್ಕಾರ ಭದ್ರತೆಯನ್ನ ಬಿಗಿ ಮಾಡಿಬೇಕು ಎಂದು ಹೇಳಿದರು

ಭದ್ರತೆ ವಿಚಾರದಲ್ಲಿ ಕೇಂದ್ರ ಸರ್ಕಾರ ಜನರಿಗೆ ಟೋಪಿ ಹಾಕಿದೆ..!

ಇದನ್ನೂ ಓದಿ :ಚಲಿಸುತ್ತಿದ್ದ ಖಾಸಗಿ ಬಸ್​ನಲ್ಲಿ ಅಗ್ನಿ ಅವಘಡ: 25ಕ್ಕೂ ಹೆಚ್ಚು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರು

ಪಹಲ್ಗಾಂನಲ್ಲಿ ನಡೆದ ಭದ್ರತಾ ವೈಪಲ್ಯದ ಕುರಿತು ಮಾತನಾಡಿದ ಸಿಎಂ ‘ಕಾಶ್ಮೀರದ ಭದ್ರತೆ ವಿಚಾರದಲ್ಲಿ ಕೇಂದ್ರ ಸರ್ಕಾರ ಜನರಿಗೆ ಟೋಪಿ ಹಾಕಿದೆ. ಭದ್ರತೆ ಇದೆ ಎಂದು ನಂಬಿಕೊಂಡು ಜನ ಕಾಶ್ಮೀರಕ್ಕೆ ಹೋದರು.
ಆದರೆ ಅಲ್ಲಿ ಭದ್ರತೆ ವೈಫಲ್ಯ ಉಂಟಾಗಿದೆ. ಹಾಗಾದರೆ ಇವರು ಮಾಡಿದ್ದು ಬರಿ ಭಾಷಣನಾ. ಈಗ ಏನೇ ಕ್ರಮಕೈಗೊಂಡರು ಹೋದ 26 ಜೀವ ವಾಪಸ್ ತರಲು ಸಾಧ್ಯನಾ. ಪುಲ್ವಾಮ ಘಟನೆ ವಿಚಾರದಲ್ಲಿ ಮುಂದೆ ಏನಾಯಿತು, ಯಾರಿಗೆ ಗೊತ್ತಿದೆ ಹೇಳಿ. ಈಗ ಕೇಂದ್ರ ಸರ್ಕಾರ ಭದ್ರತಾ ವೈಫಲ್ಯ ಒಪ್ಪಿಕೊಂಡಿದೆ. ನಾನು ಮೊದಲೇ ಹೇಳಿದೆ, ನನ್ನ ಮಾತು ನಿಜವಾಗಿದೆ ಎಂದು ಹೇಳಿದರು.

Exit mobile version