Site icon PowerTV

ಪಹಲ್ಗಾಮ್​ನಲ್ಲಿ ಧರ್ಮ ಕೇಳಿ ಕೊಂದಿಲ್ಲ ಅನ್ನೋದು ನನ್ನ ಭಾವನೆ: ಆರ್​.ಬಿ ತಿಮ್ಮಾಪುರ

ಬಾಗಲಕೋಟೆ : ಪಹಲ್ಗಾಮ್ ನಲ್ಲಿ ಉಗ್ರರ ದಾಳಿ ವಿಚಾರವಾಗಿ ಅಬಕಾರಿ ಸಚಿವ ಆರ್​.ಬಿ ತಿಮ್ಮಾಪುರ ಹೇಳಿಕೆ ನೀಡಿದ್ದು. ಹಿಂದೂಗಳನ್ನೇ ಕೊಂದಿದ್ದಾರೆ ಎಂಬ ವಿಚಾರವನ್ನ ನಿರಾಕರಿಸಿದ್ದಾರೆ. ಧರ್ಮ ಕೇಳಿ ಹೊಡೆಯೋಕಾಗುತ್ತಾ ಎಂದು ಪ್ರಶ್ನಿಸಿರುವ ತಿಮ್ಮಾಪುರ್. ಧರ್ಮ ಕೇಳಿ ಹೊಡೆಯುವಷ್ಟು ವ್ಯವಧಾನ ಯಾರಿಗೂ ಇಲ್ಲ ಎಂದು ಹೇಳಿದ್ದಾರೆ.

ಬಾಗಲಕೋಟೆಯಲ್ಲಿ ಮಾತನಾಡಿದ ಆರ್​.ಬಿ ತಿಮ್ಮಾಪುರ ‘ಈ ದೇಶದಲ್ಲಿ ಬೇಹುಗಾರಿಕೆ ಫೆಲ್ಯೂರ್ ಆಗ್ತಿರೋದು ಇದೇ ಮೊದಲಲ್ಲ. ಕಾರ್ಗಿಲ್ ಯುದ್ದ ಆದಾಗ, ಪುಲ್ವಾಮಾದಲ್ಲಿ ಫೇಲ್ ಆಯ್ತು. ಮತ್ತೆ ಇವಾಗ ಫೇಲ್ ಆಗಿದೆ. ಆದರೆ ಹಿಂದೂ ಐಡಿ ಕಾರ್ಡ್ ನೋಡಿ ಗುಂಡು ಹೊಡೆದರು ಅಂತ ಹೇಳ್ತಾರೆ. ಪಹಲ್ಗಾಂನಲ್ಲಿ ಮುಸ್ಲಿಂರನ್ನು ಕೊಂದಿದ್ದಾರೆ.

ಇದನ್ನೂ ಓದಿ :ಮೋದಿಗೆ ಸೀರಿಯಸ್​ನೆಸ್​ ಇಲ್ಲ, ಸರ್ವಪಕ್ಷ ಸಭೆ ಕರೆದು ಚುನಾವಣ ಪ್ರಚಾರಕ್ಕೆ ಹೋಗಿದ್ದಾರೆ: ಖರ್ಗೆ

ಯಾರೇ ಸತ್ತರೂ ಅದನ್ನು ರಾಜಕೀಯ ಲಾಭಕ್ಕೆ ತಗೋಬೇಕೂ ಅನ್ನೋದು ನಮ್ಮ ಧ್ಯೇಯ. ಈ ರೀತಿ ಆದರೆ ದೇಶದ ಪರಿಸ್ಥಿತಿ ಎಲ್ಲಿಗೆ ಹೋಗಬೇಕು. ನಡೆದಿರುವ ಘಟನೆ ಬಗ್ಗೆ ನೋವನ್ನು ವ್ಯಕ್ತಪಡಿಸುವುದು ಬಿಟ್ಟು. ಹಿಂದೂ ಧರ್ಮದವರನ್ನೂ ಹುಡುಕಿ ಹುಡುಕಿ ಕೊಂದರು ಅಂತ ಹೇಳ್ತಾರೆ. ಎಲ್ಲವನ್ನೂ ಎಲೆಕ್ಷನ್​ ದೃಷ್ಟಿಯಲ್ಲಿ ನೋಡುವುದು ಸರಿನಾ.. ಮೃತ ಮಂಜುನಾಥ್​ ರಾವ್​ ಅವರ ಪತ್ನಿಯೆ ಹೇಳಿದ್ದಾರೆ, ನನ್ನ ಹಾಗು ನನ್ನ ಮಗನನ್ನು ಬದುಕಿಸಿದ್ದು ಮುಸ್ಲಿಂ ಅಂತ ಹೇಳಿದ್ದಾರೆ. ಇದನ್ನೂ ಓದಿ:ಪಹಲ್ಗಾಮ್​ ದಾಳಿಯ ಬಗ್ಗೆ ಭಾರತ ನಡೆಸುವ ತನಿಖೆಗೆ ನಾವು ಸಹಕರಿಸುತ್ತೇವೆ: ಪಾಕ್​ ಪ್ರಧಾನಿ

ಹಿಂದು ಅಂತ ಕೇಳಿ ಹೊಡೆದಿದ್ದಾರೆ ಅಂತ ಹೇಳ್ತಿದ್ದಾರೆ. ಆದರೆ ಒಮ್ಮೆ ಪ್ರಾಕ್ಟಿಕಲ್​ ಆಗಿ ಯೋಚನೆ ಮಾಡಿ ಯಾರಿಗಾದರೂ ಜಾತಿ ಕೇಳಿ ಹೊಡೆಯುವಷ್ಟು ವ್ಯವಧಾನ ಯಾರಿಗೂ ಇರೊದಿಲ್ಲ. ಈ ಘಟನೆಯನ್ನು ಧರ್ಮಕ್ಕೆ ಹಚ್ಚಿ ಲಾಭ ತೆಗೆದುಕೊಳ್ಳೋ ಉನ್ನಾರ ನಡೆಯುತ್ತಿದೆ. ದೇಶಕ್ಕೆ ಗಂಡಾಂತರ ಇರೋ ಸಂದಂರ್ಭದಲ್ಲಿ ಅದನ್ನು ಎದುರಿಸುವ ಭಾವನೆ ನಮ್ಮಲ್ಲಿ ನಡೆಯುತ್ತಿದೆ. ಆದರೆ ಪಹಲ್ಗಾಂನಲ್ಲಿ ಹಿಂದೂ ಅನ್ನೋದನ್ನ ಕೇಳಿ ಹೊಡೆದಿದ್ದಾರೆ ಅನ್ನೋ ಭಾವನೆ ನನ್ನದು ಎಂದು ಆರ್​.ಬಿ ತಿಮ್ಮಾಪುರ ಹೇಳಿಕೆ ನೀಡಿದರು.

Exit mobile version