Site icon PowerTV

ಇರಾನ್ ಬಂದರಿನಲ್ಲಿ ಪ್ರಬಲ ಸ್ಫೋಟ: 500ಕ್ಕೂ ಹೆಚ್ಚು ಜನರಿಗೆ ಗಾಯ

ಟೆಹರಾನ್: ಇರಾನಿನ ಅಬ್ಬಾಸ್​ ನಗರದಲ್ಲಿರುವ ರಾಜಾಯೈ ಬಂದರಿನಲ್ಲಿ ಪ್ರನಲ ಸ್ಪೋಟ ಸಂಭವಿಸಿದ್ದು. ಈ ಘಟನೆಯಲ್ಲಿ ಸುಮಾರು 500ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಆದರೆ, ಇದು ಬಾಂಬ್ ಸ್ಫೋಟವೋ ಅಥವಾ ಬಂದರಿನಲ್ಲಿ ಇರಿಸಲಾಗಿದ್ದ ಯಾವುದಾದರೂ ಕಚ್ಚಾ ವಸ್ತುವಿನ ಸ್ಫೋಟವೋ ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ. ಸದ್ಯಕ್ಕೆ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗಿದೆ. ಆನಂತರ ಸೂಕ್ತ ತನಿಖೆಯಲ್ಲಿ ಈ ಬಗ್ಗೆ ನಿಖರ ಮಾಹಿತಿ ನೀಡಲಾಗುತ್ತದೆ ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ:ಕೆರೆಯಲ್ಲಿ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ತಂದೆ–ಮಗಳು ದಾರುಣ ಸಾ*ವು

ಇರಾನ್ ಬಂದರಿನಲ್ಲಿ ನಡೆದಿರುವ ಈ ಸ್ಫೋಟ ಕಂಟೈನರ್ ಒಂದರಲ್ಲಿ ಬಂದಿರುವ ಕಚ್ಚಾವಸ್ತುವೊಂದು ಸ್ಫೋಟವಾಗಿರುವುದರಿಂದಲೇ ಆಗಿರುವ ಸಾಧ್ಯತೆಯಿದೆ ಎಂದು ಸ್ಥಳೀಯ ತುರ್ತು ಸಂದರ್ಭ ನಿರ್ವಹಣಾಧಿಕಾರಿ ಮೆಹರ್ಬಾದ್ ಹಸನ್ ಝಾದೇ ಅವರು ಹೇಳಿದ್ದಾರೆ. ಅವರು ಹೇಳುವ ಪ್ರಕಾರ, ಇರಾನ್ ನ ರಾಜಾಯ್ಯೈ ಬಂದರಿನಲ್ಲಿ ಸಾಮಾನ್ಯವಾಗಿ ಸರಕು ಸಾಗಣೆಯೇ ಪ್ರಧಾನವಾಗಿ ನಡೆಯುವ ವಾಣಿಜ್ಯ ಚಟುವಟಿಕೆಗಳಾಗಿವೆ. ಅಲ್ಲಿ ವಿಶೇಷವಾಗಿ, ಪೆಟ್ರೋಕೆಮಿಕಲ್ ವಸ್ತುಗಳು, ಕಚ್ಚಾ ತೈಲದ ಕಂಟೈನರ್​ಗಳೇ ಹೆಚ್ಚಾಗಿ ಆಮದು ರಫ್ತು ಆಗುತ್ತಿರುತ್ತವೆ. ಹಾಗಾಗಿ, ಯಾವುದೋ ತೈಲೋತ್ಪನ್ನ ವಸ್ತುವೇ ಸ್ಫೋಟವಾಗಿರಬಹುದು ಎಂದು ಶಂಕಿಸಲಾಗಿದೆ.

Exit mobile version