Site icon PowerTV

Pahalgam Attack : ಲಷ್ಕರ್-ಇ-ತೈಬಾ ಕಮಾಂಡರ್​ ಅಲ್ತಾಫ್​ ಲಲ್ಲಿಯನ್ನು ಹೊಡೆದುರುಳಿಸಿದ ಸೈನಿಕರು

ಶ್ರೀನಗರ : ಜಮ್ಮು-ಕಾಶ್ಮೀರದ ಬಂಡಿಪೋರಾದಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಲಷ್ಕರ್-ಎ-ತೈಬಾ (ಎಲ್‌ಇಟಿ) ಉನ್ನತ ಕಮಾಂಡರ್ ಅಲ್ತಾಫ್ ಲಲ್ಲಿ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದ್ದು. ಪಹಲ್ಗಾಮ್​ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ ಈತನು ಭಾಗಿಯಾಗಿದ್ದನು ಎನ್ನಲಾಗಿದೆ. 

ಭಯೋತ್ಪಾದಕರ ಸುಳಿವಿನ ಬಗ್ಗೆ ಗುಪ್ತಚರ ಇಲಾಖೆ ನೀಡಿದ್ದ ಖಚಿತ ಮಾಹಿತಿ ಮೇರೆಗೆ ಕಾರ್ಯಚರಣೆ ಕೈಗೊಂಡ ಭಾರತೀಯ ಸೇನೆ ಮತ್ತು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಉಗ್ರನನ್ನು ಹೊಡೆದುರುಳಿಸಿದ್ದಾರೆ. ಬಂಡಿಪೋರಾದಲ್ಲಿ ನಡೆದ ಜಂಟಿ ಶೋಧ ಕಾರ್ಯಚರಣೆಯಲ್ಲಿ ಎಲ್​ಇಟಿಯ ಕಮಾಂಡರ್​ ಅಲ್ತಾಫ್​ ಲಲ್ಲಿ ಸಾವನ್ನಪ್ಪಿದ್ದಾನೆ. ಈ ಗುಂಡಿನ ಚಕಮಕಿಯಲ್ಲಿ ಭದ್ರತಾ ಪಡೆಯ ಇಬ್ಬರು ಪೊಲೀಸ್​ ಸಿಬ್ಬಂದಿಗಳು ಗಾಯಗೊಂಡಿದ್ದಾರೆ. ಇದನ್ನೂ ಓದಿ :ಇನ್​ಸ್ಟಾಗ್ರಾಂ ಪ್ರೀತಿ : ಪೋಷಕರನ್ನು ತೊರೆದು ಪ್ರಿಯಕರ ಹಿಂದೆ ಹೋಗಿದ್ದ ಯುವತಿ ಹೆಣವಾಗಿ ಪತ್ತೆ

ಏತನ್ಮಧ್ಯೆ, ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಶ್ರೀನಗರಕ್ಕೆ ಆಗಮಿಸಿದ್ದು, ಅಲ್ಲಿ ಬಂಡಿಪೋರಾದಲ್ಲಿ ನಡೆಯುತ್ತಿರುವ ಕಾರ್ಯಾಚರಣೆಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ಮತ್ತೊಂದು ಬೆಳವಣಿಗೆಯಲ್ಲಿ, ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದಾರೆಂದು ನಂಬಲಾದ ಇಬ್ಬರು ಭಯೋತ್ಪಾದಕರ ಮನೆಗಳನ್ನು ಶುಕ್ರವಾರ ಭದ್ರತಾ ಪಡೆಗಳು ಮತ್ತು ಜಮ್ಮು ಮತ್ತು ಕಾಶ್ಮೀರ ಅಧಿಕಾರಿಗಳು ನಾಶಪಡಿಸಿದ್ದಾರೆ.

ಇದನ್ನೂ ಓದಿ :ಜೀನಿ ಮಾಲೀಕ ದಿಲೀಪ್​ ವಿರುದ್ದ ಅತ್ಯಾಚಾರ ಯತ್ನ ಆರೋಪ: ಬಂಧನ ಸಾಧ್ಯತೆ

ಇನ್ನು ಪಹಲ್ಗಾಮ್​ನಲ್ಲಿ ದಾಳಿ ನಡೆಸಿದ  ಇಬ್ಬರು ಪಾಕಿಸ್ತಾನಿ ಪ್ರಜೆಗಳಾದ ಅಲಿ ಭಾಯ್ ಮತ್ತು ಹಾಶಿಮ್ ಮೂಸಾ ಬಗ್ಗೆ ಮಾಹಿತಿ ನೀಡಿದವರಿಗೆ ಅನಂತನಾಗ್ ಪೊಲೀಸರು 20 ಲಕ್ಷ ರೂ. ಬಹುಮಾನ ಘೋಷಿಸಿದ್ದಾರೆ. ದಾಳಿಕೋರರಿಗಾಗಿ ಭದ್ರತಾ ಪಡೆಗಳು ವ್ಯಾಪಕ ಹುಡುಕಾಟ ಆರಂಭಿಸಿರುವುದರಿಂದ ಮೂವರ ರೇಖಾಚಿತ್ರಗಳನ್ನು ಸಹ ಬಿಡುಗಡೆ ಮಾಡಲಾಗಿದೆ.

Exit mobile version