Site icon PowerTV

ಮೋದಿ ತನ್ನ ವೈಫಲ್ಯ ಮುಚ್ಚಿಕೊಳ್ಳಲು, ಮುಸ್ಲಿಂರ ಹೆಸರನ್ನ ಬಳಸುತ್ತಿದ್ದಾರೆ: ಸಂತೋಷ್​ ಲಾಡ್​

ಬೆಂಗಳೂರು : ಪಹಲ್ಗಾಮ್​ನಲ್ಲಿ ಪ್ರವಾಸಿಗರ ಮೇಲೆ ಭಯೋತ್ಪಾದಕರ ದಾಳಿ ವಿಚಾರವಾಗಿ ಮಾಧ್ಯಮದವ ರೊಂದಿಗೆ ಮಾತನಾಡಿದ ಸಂತೋಷ್​ ಲಾಡ್​ ‘ಬಿಜೆಪಿಯವರು ಏನೇ ನಡೆದರು ಹಿಂದೂ-ಮುಸ್ಲಿಂ ಅಂತ ಹೇಳ್ತಾರೆ. ತಮ್ಮ ವೈಪಲ್ಯಗಳನ್ನು ಮುಚ್ಚಿಕೊಳ್ಳಲು ಮುಸ್ಲಿಂಮರ ಹೆಸರನ್ನ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.

ಬೆಂಗಳೂರಿನಲ್ಲಿ ಮಾಧ್ಯಮ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವ ಸಂತೋಷ್ ಲಾಡ್​ ‘ಈಗ ರಾಜಕೀಯ ಮಾಡುವ ಸಂದರ್ಭ ಅಲ್ಲ. ಆದರೆ ಇಂತಹ ಸಂದರ್ಭದಲ್ಲೂ ಕೇಂದ್ರ ಸರ್ಕಾರದ ಯಾವೊಬ್ಬ ಸಚಿವರು ಮಾತನಾಡುತ್ತಿಲ್ಲ. ಕಳೆದ 10 ವರ್ಷಗಳಲ್ಲೂ ಯಾವೊಬ್ಬ ಸಚಿವರು ಮಾತನಾಡಿರುವ ಉದಾಹರಣೆ ಇಲ್ಲ. ಶ್ರೀನಗರದಲ್ಲಿ ಹೆಜ್ಜೆ ಹೆಜ್ಜೆಗೂ ಚೆಕ್​ಪೋಸ್ಟ್​ಗಳಿವೆ. ಮೊದಲಿನಿಂದಲೂ ಹೈ ಅಲರ್ಟ್​ನಲ್ಲಿರುವ ಸ್ಥಳ ಅವಾಗಿವೆ. ಆದರೆ ಘಟನೆ ನಡೆದ ಸ್ಥಳದಲ್ಲಿ ಒಬ್ಬ ವಾಚ್​ಮೆನ್​ ಕೂಡ ಇರಲಿಲ್ಲ. ಇದನ್ನೂ ಓದಿ :ಮಾನಸಿಕ ಖಿನ್ನತೆ: ಗುಂಡು ಹಾರಿಸಿಕೊಂಡು ಕಾರ್ಪೋರೇಟರ್​ ಪುತ್ರ ಆತ್ಮಹ*ತ್ಯೆ

ಮೋದಿ ಸರ್ಕಾರದಲ್ಲಿ ಏನೇ ನಡೆದರೂ ಹಿಂದೂ-ಮುಸ್ಲಿಂ ಎಂದು ಹೇಳುತ್ತಾರೆ. ತಮ್ಮ ವೈಪಲ್ಯ ಮುಚ್ಚಿಕೊಳ್ಳಲು ಮುಸ್ಲಿಂಮರ ಹೆಸರನ್ನ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಪ್ರಧಾನಿ ಮೋದಿ ಇದರ ಬಗ್ಗೆ ಬಿಹಾರದ ಚುನಾವಣ ಪ್ರಚಾರದಲ್ಲಿ ಮಾತನಾಡಿದ್ದಾರೆ. ಇಂತಹ ಸಂದರ್ಭದಲ್ಲೂ ಬಿಜೆಪಿ ರಾಜಕೀಯವನ್ನೇ ಮಾಡುತ್ತಿದೆ. ನಾನು ಘಟನೆ ನಡೆದ ಸ್ಥಳಕ್ಕೆ ಹೋದಾಗ ನಿಜಕ್ಕೂ ಬೇಸರ ತಂದಿದ್ದು ನಿಜ. ಅಲ್ಲಿ ಜನ ನಿಜಕ್ಕೂ ರಕ್ತ ಕಣ್ಣೀರು ಹಾಕ್ತಾ ಇದ್ದಾರೆ.

ಹೆಣ್ಣು ಮಗಳೊಬ್ಬಳು ಗಟ್ಟಿತನ ಮೆರೆದಿದ್ದಾರೆ, ನನ್ನ ಗಂಡನ್ನ ಸಾಯಿಸಿದ್ದೀಯ ನನ್ನೂ ಸಾಯಿಸಿ ಅಂದಿದ್ದಾಳೆ, ಇಂತ ಮಾತು ಹೇಳೋದು ನಮ್ಮ ದೇಶದ ಹೆಣ್ಣು ಮಕ್ಕಳೇ, ಆ ಹೆಣ್ಣು ಮಕ್ಕಳಿಗೆ ನನ್ನದೊಂದು ಸಲಾಮ್, ಆದರೆ ಅಲ್ಲಿ ಸೆಕ್ಯುರಿಟಿ ಲ್ಯಾಪ್ಸ್ ಆಗಿರೋದು ನಿಜ, ಅದರ ಬಗ್ಗೆ ಕೇಂದ್ರ ಸರ್ಕಾರ ಮಾತಾಡಬೇಕಲ್ವಾ, ಅಲ್ಲಿ ಇದ್ದ ಮಕ್ಕಳ ಕಣ್ಣಲ್ಲಿ ನೀರಿಗಿಂತ ಹೆಚ್ಚು ಸಿಟ್ಟು ಕಾಣಿಸುತ್ತಿತ್ತು.

ಇದನ್ನೂ ಓದಿ :ಸಿಂಧೂ ನದಿ ನೀರನ್ನು ಎಲ್ಲಿ ಸಂಗ್ರಹಿಸುತ್ತೀರಾ; ಕೇಂದ್ರ ಸರ್ಕಾರಕ್ಕೆ ಓವೈಸಿ ಪ್ರಶ್ನೆ

ಆದರೆ ಇಷ್ಟೇಲ್ಲ ಆದರೂ ಮೋದಿ ಬಿಹಾರ ಚುನಾವಣ ಪ್ರಚಾರಕ್ಕೆ ಹೋದರು. ಘಟನೆ ನಡೆದ ಸ್ಥಳಕ್ಕೆ ಹೋಗಲಿಲ್ಲ. ಈ ಕುರಿತು ಬಿಜೆಪಿಯವರನ್ನು ಕೇಳಿದರೆ ಹಾರಿಕೆ ಉತ್ತರ ಕೊಡುತ್ತಾರೆ. ಇವರು ಈವರೆಗೆ ಮಣಿಪುರಕ್ಕೂ ಹೋಗಿಲ್ಲ.ದೇಶದ ವಿಚಾರ ಬಂದಾಗ ಪಕ್ಷ ಮೀರಿ ಹೋಗಬೇಕಾಗುತ್ತದೆ, ನಾವು ಮೃತಪಟ್ಟವರಿಗೆ 10 ಲಕ್ಷ ಕೊಟ್ಟಿದ್ದೇನೆ. ಇವರು ಏನು ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.

Exit mobile version