Site icon PowerTV

ಸಿಗರೇಟ್​ ಸೇದಬೇಡಿ ಎಂದಿದ್ದಕ್ಕೆ RSS ಮುಖಂಡನ ಮೇಲೆ ಅನ್ಯಕೋಮಿನ ಯುವಕರಿಂದ ಹಲ್ಲೆ

ಧಾರವಾಡ: ಕ್ಷುಲ್ಲಕ ಕಾರಣಕ್ಕಾಗಿ ಅನ್ಯಕೋಮಿನ ನಾಲ್ವರು ಯುವಕರು ಆರ್‌ಎಸ್‌ಎಸ್ ಮುಖಂಡ ಶಿರೀಶ್‌ ಬಳ್ಳಾರಿ ಹಾಗೂ ಅವರ ಕುಟುಂಬಸ್ಥರ ಮೇಲೆ ಹಲ್ಲೆ ನಡೆಸಿರುವ ಘಟನೆ ಧಾರವಾಡದ ಗಾಂಧಿಚೌಕ್ ಬಳಿ ನಡೆದಿದೆ.

ಸಿಗರೇಟ್​ ಸೇದುತ್ತಿದ್ದ ನಾಲ್ವರಿಗೆ ಶಿರೀಶ್‌ ಅವರು ಬುದ್ಧಿವಾದ ಹೇಳಿದ್ದಾರೆ. ಈ ವಿಚಾರವನ್ನೇ ಮುಂದಿಟ್ಟುಕೊಂಡ ನಾಲ್ವರು ಶಿರೀಶ್ ಅವರ ಮನೆಯೊಳಗೆ ನುಗ್ಗಿ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಶಿರೀಶ್ ಅಷ್ಟೇ ಅಲ್ಲದೇ ಅವರ ಕುಟುಂಬಸ್ಥರ ಮೇಲೂ ಯುವಕರು ಹಲ್ಲೆ ನಡೆಸಿದ್ದಾರೆ. ಹಲ್ಲೆ ಮಾಡುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಲ್ಲೆ ಮಾಡಿದ ನಂತರ ನಾಲ್ವರು ನಾಪತ್ತೆಯಾಗಿದ್ದಾರೆ.

ಇದನ್ನೂ ಓದಿ:ಯೂರೋಪ್​ಗೆ ಹೋಗಬೇಕಿದ್ದ ವಿನಯ್-ಹಿಮಾಂಶಿ​ ವೀಸಾ ರದ್ದು: ಕಾಶ್ಮೀರದಲ್ಲಿ ಕಾದಿತ್ತು ಸಾ*ವು

ಈ ಸಂಬಂಧ ದೂರು ಪಡೆದಿರುವ ಧಾರವಾಡ ಶಹರ ಠಾಣೆ ಪೊಲೀಸರು ನಾಪತ್ತೆಯಾಗಿರುವ ಯುವಕರ ಪತ್ತೆಗೆ ಬಲೆ ಬೀಸಿದ್ದು ಇಬ್ಬರನ್ನು ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.

Exit mobile version