Site icon PowerTV

ಕೇಂದ್ರ ಸರ್ಕಾರದ ಭದ್ರತಾ ವೈಪಲ್ಯದಿಂದ ಉಗ್ರ ದಾಳಿಯಾಗಿದೆ: ಸಿಎಂ ಸಿದ್ದರಾಮಯ್ಯ

ಬೆಂಗಳೂರು : ಜಮ್ಮು& ಕಾಶ್ಮೀರದಲ್ಲಿ ಪಹಲ್ಗಾಮ್​ನಲ್ಲಿ ನಡೆದಿರುವ ಭೀಕರ ಉಗ್ರ ದಾಳಿಯ ಬಗ್ಗೆ ಸಿಎಂ ಸಿದ್ರರಾಮಯ್ಯ ಹೇಳಿಕೆ ನೀಡಿದ್ದು. ಕೇಂದ್ರ ಸರ್ಕಾರದ ಭದ್ರತಾ ವೈಪಲ್ಯದಿಂದಲೇ ಘಟನೆ ಸಂಭವಿಸಿದೆ. ಕೇಂದ್ರ ಸರ್ಕಾರ ಉಗ್ರರನ್ನು ಮಟ್ಟ ಹಾಕೋ ಕೆಲಸ ಮಾಡಬೇಕೂ ಎಂದು ಹೇಳಿದರು.

ಮಾಧ್ಯಮದೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ ‘ಕಾಶ್ಮೀರದಲ್ಲಿ ಉಗ್ರರ ದಾಳಿ ನಡೆದಿದೆ. ನಾನು ಈ ದಾಳಿಯನ್ನು ತೀವ್ರವಾಗಿ ಖಂಡಿಸುತ್ತೇನೆ. ಕರ್ನಾಟಕದ ಪ್ರವಾಸಿಗಳು ಇಬ್ಬರು ಮೃತರಾಗಿದ್ದಾರೆ. ಘಟನಾ ಸ್ಥಳಕ್ಕೆ
ನಮ್ಮ ಅಧಿಕಾರಿಗಳ ತಂಡ, ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೋಗಿದ್ದಾರೆ. ಅಲ್ಲಿ ಯಾರಿದ್ದಾರೆ, ಅವರನ್ನ ಸೇಫಾಗಿ ಕರೆದುಕೊಂಡು ಬಾ ಅಂತ ಹೇಳಿದ್ದೀನಿ. ಮೃತರ ಪಾರ್ಥಿವ ವಾಪಸ್ ತರಲು ಅವರೇ ವಿಶೇಷ ವಿಮಾನದ ವ್ಯವಸ್ಥೆ ಮಾಡಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ :ಏಳೇಳು ಜನ್ಮ ಕಳೆದರೂ ಮರೆಯದಂತ ಪಾಠ ಕಲಿಸಬೇಕೂ: ಅನುಪಮ್​ ಖೇರ್​ ಆಕ್ರೋಶ

ಕಾಶ್ಮೀರದಲ್ಲಿ ನಡೆದಿರುವ ದಾಳಿ ಪೂರ್ವ ಯೋಜಿತ ಕೃತ್ಯವೆಂದು ಹೇಳಿದ ಸಿಎಂ ‘ ಈ ದಾಳಿ ಪ್ಲಾನ್​ ಮಾಡಿ ನಡೆಸಿದ್ದಾರೆ. ಅದು ಯಾರೇ ಆಗಿರಲಿ, ಈ ಘಟನೆಯನ್ನ ನಾನು ಖಂಡಿಸುತ್ತೇನೆ. ಉಗ್ರರ ದಾಳಿ ಆಗಬಾರದು, ಯಾವುದೇ ಜಾತಿ, ಧರ್ಮದ ಬಗ್ಗೆ ಆಗಬಾರದು. ಘಟನೆಯಲ್ಲಿ 26 ಜನ ಸಾವನ್ನಪ್ಪಿದ್ದಾರೆ. ಇದು ಅತ್ಯಂತ ದೊಡ್ಡ ಭಿಕರ ದಾಳಿ.

ಇದನ್ನೂ ಓದಿ :ಪಹಲ್ಗಾಮ್​ನಲ್ಲಿ ದಾಳಿ ನಡೆಸಿದ ಉಗ್ರರ ಪೋಟೊ ಬಿಡುಗಡೆ ಮಾಡಿದ NIA

ಕೇಂದ್ರದ ಸರ್ಕಾರದ ಗುಪ್ತಚರ ಇಲಾಖೆ ಫೇಲ್​ ಆಗಿದೆ. ಹಿಂದೆ ಕೂಡ ದಾಳಿ ಆಗಿದೆ, ಪುಲ್ವಾಮಾ ದಾಳಿ ಆಗಿತ್ತು
ಕೇಂದ್ರದ ವೈಫಲ್ಯ ಇದೆ ಅಂತ‌ ಅನ್ಸುತ್ತೆ. ಇದರ ಬಗ್ಗೆ ವಿಚಾರ ಮಾಡಬೇಕೂ. ಭದ್ರತೆಯಲ್ಲಿ ಯಾವುದೇ ರಾಜಿ ಮಾಡಿಕೊಳ್ಳಬಾರದು. ರಾಷ್ಟ್ರದ ಜನರಿಗೆ ಭದ್ರತೆ ಕೊಡೊ ಕೆಲಸ ಮಾಡಬೇಕೂ. ಉಗ್ರರನ್ನ ಮಟ್ಟ ಹಾಕೋ ಕೆಲಸ ಮಾಡಬೇಕೂ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

Exit mobile version