Site icon PowerTV

ಅಮೆರಿಕಾ, ಪೆರು ಪ್ರವಾಸ ಮೊಟಕುಗೊಳಿಸಿದ ನಿರ್ಮಲಾ ಸೀತಾರಾಮನ್​: ಭಾರತಕ್ಕೆ ವಾಪಾಸ್​

ದೆಹಲಿ : ನಿನ್ನೆ (ಏಪ್ರಿಲ್ 22) ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭೀಕರ ಭಯೋತ್ಪಾದಕ ದಾಳಿಯಲ್ಲಿ 26 ಜನ ಪ್ರವಾಸಿಗರು ಸಾವನ್ನಪ್ಪಿದ್ದು. ಇದನ್ನು ಗಮನದಲ್ಲಿಟ್ಟುಕೊಂಡು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ತಮ್ಮ ವಿದೇಶಿ ಪ್ರವಾಸವನ್ನು ಮೊಟಕುಗೊಳಿಸಿ ಭಾರತಕ್ಕೆ ಹಿಂತಿರುಗಿದ್ದಾರೆ.

ಶ್ರೀಮತಿ ಸೀತಾರಾಮನ್ ಅವರು ಏಪ್ರಿಲ್ 20 ರಿಂದ ಅಮೆರಿಕ ಮತ್ತು ಪೆರುವಿಗೆ 11 ದಿನಗಳ ಪ್ರವಾಸ ಕೈಗೊಂಡಿದ್ದು, ಅಂತರರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವಬ್ಯಾಂಕ್‌ನ ವಾರ್ಷಿಕ ಸಭೆಗಳು ಹಾಗೂ G20 ಸಭೆಯಲ್ಲಿ ಭಾಗವಹಿಸಲಿದ್ದರು. ಉಗ್ರ ದಾಳಿಯಾದ ಹಿನ್ನಲೆ ತಮ್ಮ ಪ್ರವಾಸವನ್ನು ಮೊಟಕುಗೊಳಿಸಿ ಭಾರತಕ್ಕೆ ವಾಪಸಾಗಿದ್ದಾರೆ.

ಇದನ್ನೂ ಓದಿ :ಪಹಲ್ಗಾಮ್ ಉಗ್ರ​ ದಾಳಿಗೆ ಕ್ರಿಕೆಟಿಗರ ಖಂಡನೆ: ಕೊಹ್ಲಿ, ರೋಹಿತ್​ ಮೌನ..!

ಈ ಕುರಿತು ಹಣಕಾಸು ಇಲಾಖೆ ತಮ್ಮ ಎಕ್ಷ್​ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು. “ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ @nsitharaman ಅವರು ಅಮೆರಿಕ-ಪೆರುಗೆ ತಮ್ಮ ಅಧಿಕೃತ ಭೇಟಿಯನ್ನು ಮೊಟಕುಗೊಳಿಸುತ್ತಿದ್ದಾರೆ. ಈ ಕಷ್ಟಕರ ಮತ್ತು ದುರಂತದ ಸಮಯದಲ್ಲಿ ನಮ್ಮ ಜನರೊಂದಿಗೆ ಇರಲು ಅವರು ಭಾರತಕ್ಕೆ ಹಿಂತಿರುಗುತ್ತಿದ್ದಾರೆ” ಎಂದು ಹಣಕಾಸು ಸಚಿವಾಲಯವು ತಿಳಿಸಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯೂ ತಮ್ಮ ಸೌದಿ ಪ್ರವಾಸವನ್ನು ಮೊಟಕುಗೊಳಿಸಿ ಭಾರತಕ್ಕೆ ವಾಪಸಾಗಿದ್ದು. ಮೋದಿ ನೇತೃತ್ವದಲ್ಲಿ ನಡೆಯುತ್ತಿರುವ ಸಂಪುಟ ಸಮತಿ ಸಭೆಯಲ್ಲಿ ಶ್ರೀಮತಿ ಸೀತಾರಾಮನ್​ ಅವರು ಭಾಗವಹಿಸಲಿದ್ದಾರೆ.

ಇದನ್ನೂ ಓದಿ :ಉಗ್ರ ದಾಳಿಯಲ್ಲಿ ಮೃತಪಟ್ಟ ಪ್ರವಾಸಿಗರಿಗೆ ಶ್ರದ್ದಾಂಜಲಿ ಸಲ್ಲಿಸಿದ ಗೃಹ ಸಚಿವ ಅಮಿತ್​ ಶಾ

ದಾಳಿಯನ್ನು ಖಂಡಿಸಿರುವ ಶ್ರೀಮತಿ ಸೀತಾರಾಮನ್, ಮೃತರಿಗೆ ಸಂತಾಪ ಸೂಚಿಸುತ್ತಾ “ದುಃಖ ವ್ಯಕ್ತಪಡಿಸಲು ಪದಗಳೇ ಸಾಲುತ್ತಿಲ್ಲ, ನಾನು ಭಯೋತ್ಪಾದಕ ಕೃತ್ಯವನ್ನು ಖಂಡಿಸುತ್ತೇನೆ. ಮೃತರ ಎಲ್ಲಾ ಸಂತ್ರಸ್ತ ಕುಟುಂಬಗಳು ಮತ್ತು ಸ್ನೇಹಿತರಿಗೆ ಸಂತಾಪ ಸೂಚಿಸುತ್ತೇನೆ. ಗಾಯಾಳುಗಳು ಬೇಗನೆ ಚೇತರಿಸಿಕೊಳ್ಳಲಿ ಎಂದು ಪ್ರಾಮಾಣಿಕವಾಗಿ ಪ್ರಾರ್ಥಿಸುತ್ತೇನೆ” ಎಂದು ಅವರು ಹೇಳಿದರು.

Exit mobile version