Site icon PowerTV

ಉಗ್ರ ದಾಳಿಯಲ್ಲಿ ಮೃತಪಟ್ಟ ಪ್ರವಾಸಿಗರಿಗೆ ಶ್ರದ್ದಾಂಜಲಿ ಸಲ್ಲಿಸಿದ ಗೃಹ ಸಚಿವ ಅಮಿತ್​ ಶಾ

ಶ್ರೀನಗರ : ನಿನ್ನೆ (ಏ.22) ಜಮ್ಮು&ಕಾಶ್ಮೀರದ ಪಹಲ್ಗಾಮ್​​ನಲ್ಲಿ ನಡೆದಿರುವ ಭೀಕರ ಉಗ್ರ ದಾಳಿಯಲ್ಲಿ 28 ಜನ ಸಾವನ್ನಪ್ಪಿದ್ದು. ಕನಿಷ್ಟ 20 ಮಂದಿ ಗಾಯಗೊಂಡಿದ್ದಾರೆ. ದುರ್ಘಟನೆಯಲ್ಲಿ ಸಾವನ್ನಪ್ಪಿದ ಪ್ರವಾಸಿಗರಿಗೆ ಗೃಹ ಸಚಿವ ಅಮಿತ್ ಶಾ ಗೌರವ ನಮನ ಸಲ್ಲಿಸಿದ್ದಾರೆ.

ಕರ್ನಾಟಕ ಮೂಲದ ಮೂವರು ಪ್ರವಾಸಿಗರು ಸೇರಿದಂತೆ ಒಟ್ಟು 28 ಜನ ಪ್ರವಾಸಿಗರು ಪಹಲ್ಗಾಮ್​ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ ಮೃತಪಟ್ಟಿದ್ದಾರೆ. ಪ್ರವಾಸಿಗರ ಮೃತದೇಹದ ಮರಣೋತ್ತರ ಪರೀಕ್ಷೆ ಅಂತ್ಯವಾಗಿದ್ದು, ಮೃತದೇಹಗಳನ್ನು ಸ್ವಗ್ರಾಮದ ಕಡೆಗೆ ಕಳುಹಿಸಲು ಸಿದ್ದತೆ ನಡೆಸಲಾಗಿದೆ.

ಇದನ್ನೂ ಓದಿ: ಸೈಫುಲ್ಲಾ ಖಾಲಿದ್​: ಪಹಲ್ಗಾಮ್​ ಉಗ್ರದಾಳಿಯ ಹಿಂದಿನ ಮಾಸ್ಟರ್​ ಮೈಂಡ್​ ಹಿನ್ನಲೆ ಏನು..?

ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ವಿರೋಧಿಸಿ ಜಮ್ಮುವಿನಲ್ಲಿ ಬಂದ್​ಗೆ ಕರೆ ನೀಡಿದ್ದು. ಜನರು ಸ್ವಯಂ ಘೋಷಿತವಾಗಿ ಮನೆಯಲ್ಲಿ ಉಳಿದಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಪ್ರಮುಖ ಮಾರುಕಟ್ಟೆಗಳಾದ ಹಂದ್ವಾರ ಮತ್ತು ಕುಪ್ವಾರಾದಲ್ಲಿ ಮಾರುಕಟ್ಟೆಗಳು ಮುಚ್ಚಲ್ಪಟ್ಟಿವೆ.

ದೆಹಲಿಯಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ತುರ್ತು ಸಭೆ ನಡೆಯುತ್ತಿದ್ದು. ಈ ಸಭೆಯಲ್ಲಿ ಅಜಿತ್​ ದೋವಲ್​, ವಿದೇಶಾಂಗ ಸಚಿವ ಜೈ ಶಂಕರ್​ ಸೇರಿದಂತೆ ಹಲವು ಪ್ರಮುಖರು ಭಾಗವಹಿಸಿದ್ದಾರೆ.

Exit mobile version