Site icon PowerTV

ಕೇಂದ್ರ ಸರ್ಕಾರದ ವೈಪಲ್ಯ: ಮೋದಿ ಇಂದಿರಾ ಗಾಂಧಿಯಂತೆ ಕ್ರಮ ಕೈಗೊಳ್ಳಬೇಕು: ರಾಮಲಿಂಗರೆಡ್ಡಿ

ಕಲಬುರಗಿ : ಜಮ್ಮು&ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದಿರುವ ಭೀಕರ ಉಗ್ರದಾಳಿಯಲ್ಲಿ 26 ಪ್ರವಾಸಿಗರು ಸಾವನ್ನಪ್ಪಿದ್ದು. ಘಟನೆ ಕುರಿತು ಸಚಿವ ರಾಮಲಿಂಗ ರೆಡ್ಡಿ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ದಾರೆ. ಕೇಂದ್ರ ಸರ್ಕಾರದ ವೈಪಲ್ಯದಿಂದಲೇ ಘಟನೆ ಸಂಭವಿಸಿದೆ ಎಂದು ಹೇಳಿದ್ದಾರೆ.

ಕಲಬುರಗಿಯಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ರಾಮಲಿಂಗರೆಡ್ಡಿ ‘ ಕೇಂದ್ರ ಸರಕಾರದ ವೈಫಲ್ಯದಿಂದ ದುರ್ಘಟನೆ ಸಂಭವಿಸಿದೆ. ಕೇಂದ್ರ ಸರಕಾರ ಕಳೆದ ಮೂರು ವರ್ಷಗಳಿಂದ‌ ಸೇನೆಯಲ್ಲಿ ನೇಮಕಾತಿ ಮಾಡಿಕೊಂಡಿಲ್ಲ. ಅಗ್ನಿ ವೀರ ಅಂತ ಕೇವಲ ಕೆಲವು ವರ್ಷಕ್ಕೆ ಸೀಮಿತವಾಗಿ ಮಾಡಿಕೊಳ್ಳುತ್ತಿದೆ.  ದೇಶದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿದೆ.. ಆದ್ರೆ ಸೇನಾ ನೇಮಕಾತಿ ನಡೆಯುತ್ತಿಲ್ಲ. ಸೇನಾ ನೇಮಕಾತಿ ಮಾಡಿಕೊಂಡು ಬಂದೋಬಸ್ತ್ ಕೈಗೊಂಡಿದ್ದರೆ ಇಂತಹ ಘಟನೆ ನಡೆಯುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ :ಭೀಕರ ಉಗ್ರದಾಳಿ: IPL ಪಂದ್ಯದ ವೇಳೆ ಕಪ್ಪುಪಟ್ಟಿ ಧರಿಸಿ ಆಟವಾಡಲು ನಿರ್ಧಾರ

ಮುಂದುವರಿದು ಮಾತನಾಡಿರುವ ರಾಮಲಿಂಗ ರೆಡ್ಡಿ ‘ ದುರ್ಘಟನೆಗೆ ಕೇಂದ್ರ ಗುಪ್ತಚರ ಇಲಾಖೆಯ ವೈಫಲ್ಯವೂ ಎದ್ದು ಕಾಣುತ್ತಿದೆ. ಉಗ್ರರನ್ನು ಸದೆ ಬಡಿಯುವ ಕೆಲಸ ಪ್ರಧಾನಿ ಮೋದಿ ಮಾಡಬೇಕು. ಉಗ್ರರ ಮೂಲ ಗುರುತಿಸಿ ಸದೆ ಬಡೆಯಲು ಮಾಡಬೇಕಾದ ಎಲ್ಲಾ ಕ್ರಮ ಕೈಗೊಳ್ಳಬೇಕು. ಈ ಹಿಂದೆ ಇಂದಿರಾಗಾಂಧಿ ಪ್ರಧಾನಿ ಇದ್ದಾಗ ಶತ್ರು ರಾಷ್ಟ್ರ ಇಬ್ಬಾಗ ಆಗುವಂತೆ ಮಾಡಿದ್ದರು. ಅದಕ್ಕಾಗಿಯೇ ದೇಶ ಅವರನ್ನು ಉಕ್ಕಿನ ಮಹಿಳೆ ಎನ್ನುತ್ತದೆ
ಮೋದಿ ಸಹ ಇಂದಿರಾ ಗಾಂಧಿಯಂತೆ ದಿಟ್ಟ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು.

Exit mobile version