Site icon PowerTV

ಕ್ರೈಸ್ತ ಧರ್ಮಗುರು ಪೋಪ್​ ಫ್ರಾನ್ಸಿಸ್​ ನಿಧನ

ಕಳೆದ ಕೆಲದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಕ್ರೈಸ್ತ ಧರ್ಮಗುರು ಪೋಪ್​ ಫ್ರಾನ್ಸಿಸ್​ ನಿಧನರಾಗಿದ್ದು. ರೋಮನ್ ಕ್ಯಾಥೋಲಿಕ್ ಚರ್ಚ್‌ನ ಮೊದಲ ಲ್ಯಾಟಿನ್ ಅಮೇರಿಕನ್ ಧರ್ಮಗುರು ಪೋಪ್ ಫ್ರಾನ್ಸಿಸ್ ಅವರು 88 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ ಈ ಕುರಿತಾದ ವಿಡಿಯೋ ಹೇಳಿಕೆಯನ್ನು ವ್ಯಾಟಿಕನ್ ಬಿಡುಗಡೆ ಮಾಡಿದೆ.

ಕಳೆದ ಕೆಲ ತಿಂಗಳಿಂದ ನ್ಯೂಮೋನಿಯಾದಿಂದ ಬಳಲುತ್ತಿದ್ದ ಪೋಪ್​ ಫ್ರಾನ್ಸಿಸ್​ ರೋಮ್​ನ ಜೆಮ್ಮಿಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಕೆಲದಿನಗಳಿಂದ ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಪೋಪ್​ ಫ್ರಾನ್ಸಿಸ್ ಇಂದು (ಏ.21)​ ಸ್ಥಳೀಯ ಕಾಲಮಾನ 7:35ಕ್ಕೆ ನಿಧನರಾಗಿದ್ದಾರೆ ಎಂದು ಕಾರ್ಡಿನಲ್ ಕೆವಿನ್ ಫಾರೆಲ್ ತಿಳಿಸಿದ್ದಾರೆ.

ಇದನ್ನೂ ಓದಿ :ಕರ್ನಾಟಕದ ನಾಲ್ವರು ಜಡ್ಜ್ಸ್​ ಸೇರಿದಂತೆ, ಏಳು ಮಂದಿ ಹೈಕೋರ್ಟ್ ನ್ಯಾಯಮೂರ್ತಿಗಳ ವರ್ಗಾವಣೆ

ಈ ಕುರಿತು ಕಾರ್ಡಿನಲ್ ಕೆವಿನ್ ಫಾರೆಲ್​ರ ಹೇಳಿಕೆ ಬಿಡುಗಡೆ ಮಾಡಿದ್ದು.”ಆತ್ಮೀಯ ಸಹೋದರ ಸಹೋದರಿಯರೇ, ನಮ್ಮ ಪವಿತ್ರ ತಂದೆ ಫ್ರಾನ್ಸಿಸ್ ಅವರ ನಿಧನವನ್ನು ನಾನು ತೀವ್ರ ದುಃಖದಿಂದ ಘೋಷಿಸಬೇಕು. ಇಂದು ಬೆಳಿಗ್ಗೆ 7.35 ಕ್ಕೆ, ರೋಮ್‌ನ ಬಿಷಪ್ ಫ್ರಾನ್ಸಿಸ್ ಅವರು ತಂದೆಯ ಮನೆಗೆ ಮರಳಿದರು. ಅವರ ಇಡೀ ಜೀವನವು ಭಗವಂತ ಮತ್ತು ಅವರ ಚರ್ಚ್‌ನ ಸೇವೆಗೆ ಸಮರ್ಪಿತವಾಗಿತ್ತು ಎಂದು ಹೇಳಿದ್ದಾರೆ.

ಇನ್ನು ಮುಂದಿನ ಪೋಪ್ ಧರ್ಮಗುರುವನ್ನು ಮುಂದಿನ 15 ಅಥವಾ 20 ದಿನಗಳಲ್ಲಿ ಘೋಷಿಸಲಾಗುತ್ತೆ ಎಂದು ತಿಳಿದು ಬಂದಿದೆ.

Exit mobile version