Site icon PowerTV

ಆಸ್ತಿಗಾಗಿ ಡಬಲ್​ ಮರ್ಡರ್​: ಪೊಲೀಸರಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡ ಖದೀಮ

ಬೆಳಗಾವಿ : ಆಸ್ತಿಗಾಗಿ ಜೋಡಿ ಕೊಲೆ ಮಾಡಿದ್ದ ಇಬ್ಬರು, ಎಲ್ಲಿ ಪೊಲೀಸರು ಬಂಧಿಸುತ್ತಾರೋ ಎಂದು ಹೆದರಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಬೆಳಗಾವಿಯಲ್ಲಿ ನಡೆದಿದ್ದು. ಓರ್ವ ಆರೋಪಿ ಸಾವನ್ನಪ್ಪಿದ್ದು. ಮತ್ತೊಬ್ಬನನ್ನು ಪೊಲೀಸರು ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಬೆಳಗಾವಿ ಜಿಲ್ಲೆಯ, ಅಥಣಿ ತಾಲೂಕಿನ, ಶೇಗುಣಸಿ ಗ್ರಾಮದ ನಿವಾಸಿ 39 ವರ್ಷದ ಸುರೇಶ್​ ಸವದತ್ತಿ ಎಂಬಾತ ಗ್ರಾಮದ ಹೊರವಲಯದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದು. ಮತ್ತೊಬ್ಬ ಶ್ರೀ ಶೈಲ್​ ಹೊಸಟ್ಟಿ ಎಂಬಾತ ನೇಣು ಬಿಗಿದುಕೊಳ್ಳುತ್ತಿದ್ದ ಸಂದಂರ್ಭದಲ್ಲಿ ಪೊಲೀಸರು ಹೋಗಿ ರಕ್ಷಿಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಇವರು ಆತ್ಮಹತ್ಯೆ ಮಾಡಿಕೊಳ್ಳಲು ಕಾರಣ ಕಳೆದ ಏ,13ರಂದು ಇವರೇ ಮಾಡಿರುವ ಡಬಲ್​ ಮರ್ಡರ್​ ಕಾರಣ ಎಂಬುದು ತಿಳಿದು ಬಂದಿದೆ.

ಇದನ್ನೂ ಓದಿ :ಅತ್ಯಾಚಾರ ಆರೋಪ, ವ್ಯಕ್ತಿಯನ್ನು ಬೆತ್ತಲೆಗೊಳಿಸಿ ಹಲ್ಲೆ: ನಾಯಿಗಳಿಂದ ದಾಳಿ

ಡಬಲ್​ ಮಾಡಿದ್ದ ಖದೀಮರು..!

ಏ.13ರಂದು ಅಥಣಿ ತಾಲೂಕಿನ ನಂದಗಾಂವ ಗ್ರಾಮದಲ್ಲಿ ಚಂದ್ರವ್ವ ಇಚೇರಿ(62) ಮತ್ತು ಆಕೆಯ ಮಗ ವಿಠ್ಠಲ್ ಇಚೇರಿಯ ಕತ್ತು ಬಿಗಿದು ಕೊಲೆ ಮಾಡಲಾಗಿತ್ತು. ಚಂದ್ರವ್ವನ ಮಗ ವಿಠಲ್​ಗೆ ಎರಡು ಎಕರೆ ಜಮೀನಿತ್ತು. ಚಂದ್ರವ್ವ ಮತ್ತು ಈತನನ್ನು ಮುಗಿಸಿದರೆ 2 ಎಕರೆ ಜಮೀನು ತಮ್ಮದಾಗುತ್ತದೆ ಎಂದು ಸಂಚು ರೂಪಿಸಿದ್ದ ಇಬ್ಬರು ಜಮೀನಿನ ಆಸೆಗೆ ತಾಯಿ-ಮಗನನ್ನು ಕೊಲೆ ಮಾಡಿದ್ದಾರೆ ಎಂದು ಶಂಕಿಸಲಾಗಿದೆ.

ಈ ಡಬಲ್​ ಮರ್ಡರ್​ ಪ್ರಕರಣದ ಬೆನ್ನು ಬಿದ್ದಿದ್ದ ಐಗಳಿ ಠಾಣೆ ಪೊಲೀಸರು ಕೊಲೆ ಆರೋಪಿಗಳು ಯಾರು ಅಂತಾ ಪತ್ತೆ ಹೆಚ್ಚುವಯಲ್ಲಿ ಯಶಸ್ವಿಯಾಗಿದ್ದರು. ಪೊಲೀಸರು ಎಲ್ಲಿ ಬಂಧಿಸುತ್ತಾರೋ ಎಂದು ಹೆದರಿದ್ದ ಆರೋಪಿ ಸುರೇಶ್​ ಊರ ಹೊರಗಿನ ಮರಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದನು. ಈ ವಿಷಯವನ್ನು ತಿಳಿದ ಮತ್ತೊಬ್ಬ ಆರೋಪಿ ಶ್ರೀ ಶೈಲ್​ ಹೊಸಟ್ಟಿ ಎಂಬಾತನೂ ಪೊಲೀಸರು ಬಂದಿದ್ದಾರೆ ಎಂದು ತಿಳಿದು ನೇಣು ಹಾಕಿಕೊಳ್ಳಲು ಹಗ್ಗ ತೆಗೆದುಕೊಂಡು ಮನೆಗೆ ಓಡಿ ಹೋಗಿದ್ದನು. ಇದನ್ನು ತಿಳಿದು ಹಿಂಬಾಲಿಸಿದ ಪೊಲೀಸರು ನೇಣು ಬಿಗಿದುಕೊಂಡಿದ್ದ ಆತನನ್ನು ರಕ್ಷಿಸಿ ಸ್ಥಳೀಯ ಆಸ್ಪತ್ರೆಗೆ ಶಿಫ್ಟ್​ ಮಾಡಿದ್ದಾರೆ. ಇದನ್ನೂ ಓದಿ :ಗೌರಿ ಖಾನ್ ಒಡೆತನದ ರೆಸ್ಟೋರೆಂಟ್​ನಲ್ಲಿ ನಕಲಿ ಪನ್ನೀರ್ ಬಳಕೆ ? ಶಾರುಕ್​ ಪತ್ನಿ ಮೇಲೆ ಗಂಭೀರ ಆರೋಪ

ರೋಚಕವಾಗಿತ್ತು ಪೊಲೀಸರ ತನಿಖೆ..!

ಡಬಲ್​ ಮರ್ಡರ್​ ಪ್ರಕರಣದ ಬೆನ್ನು ಬಿದ್ದಿದ್ದ ಪೊಲೀಸರು ಆರೋಪಿಗಳಿಗಾಗಿ ಬಲೆ ಬೀಸಿದ್ದರು, ತಾಯಿ ಮಗನ ಕೊಲೆ ಪ್ರಕರಣದ ತನಿಖೆ ಕೈಗೊಂಡಿದ್ದ ಪೊಲೀಸರು ಕೊಲೆಗಾರರ ಇಂಚಿಂಚು ಮಾಹಿತಿ ಕಲೆ ಹಾಕಿದ್ದರು. “ಏಪ್ರೀಲ್​ 13ರ ಸಂಜೆ ವಿಠ್ಠಲ್​ ತನ್ನ ಸಂಬಂಧಿಯಾಗಿದ್ದ ಸುರೇಶ್​ನನ್ನು ಪಾರ್ಟಿ ಮಾಡಲು ಕರೆದಿದ್ದನು. ಇದನ್ನೇ ಅವಕಾಶವಾಗಿ ಬಳಸಿಕೊಂಡಿದ್ದ ಸುರೇಶ್,​ ವಿಠ್ಠಲ್​​ನನ್ನು ಕೊಲೆ ಮಾಡಲು ತನ್ನ ಗೆಳಯ ಶ್ರೀಶೈಲ್​ನನ್ನು ಕರೆದುಕೊಂಡು ಬಂದಿದ್ದನು. ವಿಠ್ಠಲ್​ನ ಜೊತೆ ಪಾರ್ಟಿ ಮಾಡಿದ್ದ ಆರೋಪಿಗಳು. ವಿಠ್ಠಲ್​​ನನ್ನು ಟವಲ್​ನಿಂದ ಕತ್ತುಬಿಗಿದು ಕೊಲೆ ಮಾಡಿದ್ದರು.

ಅಲ್ಲಿದ್ದ ಸೀದಾ ವಿಠ್ಠಲ್​ನ ಮನೆಗೆ ಬಂದಿದ್ದ ಸುರೇಶ್ ಮತ್ತು ಶ್ರೀಶೈಲ್​ ಚಂದ್ರವ್ವನನ್ನು ಕತ್ತು ಹಿಸುಕಿ ಕೊಲೆ ಮಾಡಿ ಪರಾರಿಯಾಗಿದ್ದರು. ಈ ವೇಳೆ ಮನೆಯಲ್ಲಿ ಸಾರಾಯಿಯ ಟೆಟ್ರಾ ಪ್ಯಾಕ್​ನ್ನು ಮನೆಯಲ್ಲಿ ಬೀಳಿಸಿಕೊಂಡು ಹೋಗಿದ್ದರು. ಕೊಲೆಯಾದ ಬಗ್ಗೆ ಸ್ಥಳ ಪರಿಶೀಲನೆಗೆ ಬಂದಿದ್ದ ಪೊಲೀಸರಿಗೆ ಈ ಪ್ಯಾಕೆಟ್​ ಸಿಕ್ಕಿ ಅದನ್ನು ಯಾವ ಬಾರ್​ನಿಂದ ಖರೀದಿಸಿದ್ದಾರೆ ಎಂಬುದನ್ನು ಪತ್ತೆ ಹಚ್ಚಿದ್ದರು.

ಇದನ್ನೂ ಓದಿ :ಜನಿವಾರ ತೆಗೆಸಿ CET ಪರೀಕ್ಷೆಗೆ ಅವಕಾಶ; ಬ್ರಾಹ್ಮಣ ಸಂಘಟನೆಗಳಿಂದ ಆಕ್ರೋಶ

ಇದರ ಆಧಾರದ ಮೇಲೆ ಬಾರ್​ನ ಸಿಸಿಟಿವಿ ದೃಷ್ಯಗಳನ್ನು ಪರಿಶೀಲನೆ ನಡೆಸಿದಾಗ ಕೊಲೆಯಾದ ವಿಠ್ಠಲ್ ಹಾಗೂ ಆರೋಪಿಗಳಾದ ಸುರೇಶ್ ಮತ್ತು ಶ್ರೀಶೈಲ್ ಮೂರು ಜನ ಒಟ್ಟಿಗೆ ಇರೋದು ತಿಳಿದ ಪೊಲೀಸರು. ಆರೋಪಿಗಳಿಗೆ ಬಲೆ ಬೀಸಿದ್ದರು. ಆದರೆ ಪೊಲೀಸರ ಬಂಧನಕ್ಕೆ ಹೆದರಿದ ಆರೋಪಿಗಳು ಆತ್ಮಹತ್ಯೆಗೆ ಯತ್ನಿಸಿದ್ದು. ಒರ್ವ ಸಾವನ್ನಪ್ಪಿದ್ದಾನೆ. ಮತ್ತೋರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು. ಆತನ ಬಳಿ ಪೊಲೀಸರು ಹೆಚ್ಚಿನ ಮಾಹಿತಿ ಕಲೆಹಾಕುತ್ತಿದ್ದಾರೆ ಎಂದು ತಿಳಿದು ಬಂದಿದೆ.

 

Exit mobile version