Site icon PowerTV

ನಾಯಿ ಖರೀದಿಸಲು ಹಣ ಕೊಡಲಿಲ್ಲ ಎಂದು ವೃದ್ದ ತಾಯಿಯನ್ನು ಕೊಂದ ಮಗ

ಛತ್ತೀಸ್​ಗಡ್​ : ​ನಾಯಿ ಖರೀದಲು ಹಣ ಕೊಡಲಿಲ್ಲ ಎಂದು ಮಗನೊಬ್ಬ ತನ್ನ ವೃದ್ದ ತಾಯಿಗೆ ಸುತ್ತಿಗೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಛತ್ತೀಸ್​​ಗಡದ ರಾಯಪುರದಲ್ಲಿ ನಡೆದಿದ್ದು. ಕೊಲೆ ಮಾಡಿದ ಕ್ರೂರಿ ಮಗನನ್ನು 45 ವರ್ಷದ ಪ್ರದೀಪ್​ ದೇವಾಂಗನ್​ ಎಂದು ಗುರುತಿಸಲಾಗಿದೆ.

ಛತ್ತೀಸಗಡದ ಉರ್ಲಾ ಪೊಲೀಸ್​ ಠಾಣಾ ವ್ಯಾಪ್ತಿ ನಾಗೇಶ್ವರ ನಗರದಲ್ಲಿ ಬೆಳಿಗ್ಗೆ 8ರ ಸುಮಾರಿಗೆ ಘಟನೆ ನಡೆದಿದೆ ಎಂದು ಠಾಣಾಧಿಕಾರಿ ಬಿ.ಎಲ್. ಚಂದ್ರಾಕರ್ ಹೇಳಿದ್ದಾರೆ. ಪ್ರದೀಪ್​ ದೇವಾಂಗನ್​ 800 ರೂಪಾಯಿಗೆ ನಾಯಿಯೊಂದನ್ನು ಖರೀದಿ ಮಾಡಲು ಮುಂದಾಗಿದ್ದನು. ಆದರೆ ಆತನ ಬಳಿ ನಾಯಿ ಖರೀದಿಸಲು 200ರೂ ಕಡಿಮೆ ಇತ್ತು. ಹಾಗಾಗಿ ಉಳಿದ ಹಣಕ್ಕಾಗಿ ಪ್ರದೀಪ್​ ತಾಯಿ ಗಣೇಶಿ ಅವರ ಬಳಿ ಹಣ ಕೇಳಿದ್ದನು.

ಇದನ್ನೂ ಓದಿ :ಮುಸ್ಲಿಂರಿಗೆ ಹಂದಿ ಕಂಡ್ರೆ ಆಗಲ್ಲ, ಯಾಕೆಂದರೆ ಅವರು ಹಂದಿ ತರ ಮಕ್ಕಳನ್ನ ಹುಟ್ಟಿಸ್ತಾರೆ: ಪ್ರಮೋದ್ ಮುತಾಲಿಕ್​

ಆದರೆ ಅವರು ಮಗನಿಗೆ ಹಣ ನೀಡಲು ನಿರಾಕರಿಸಿದ್ದರು. ಇದರಿಂದ ಸಿಟ್ಟಾದ ಆರೋಪಿ ಪ್ರದೀಪ್ ಸುತ್ತಿಗೆಯಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಇದನ್ನು ತಡೆಯಲು ಬಂದ ಪತ್ನಿ ರಾಮೇಶ್ವರಿ ಮೇಲೂ ಹಲ್ಲೆ ನಡೆಸಿದ್ದಾನೆ. ಹಲ್ಲೆ ನಡೆಸಿದ ನಂತರ ಆರೋಪಿ ಸ್ಥಳದಿಂದ ಕಾಲ್ಕಿತ್ತಿದ್ದಾನೆ. ಇದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ಪೊಲೀಸರಿಗೆ ಮಾಹಿತಿ ತಿಳಿಸಿದ್ದು. ಪೊಲೀಸರು ಸ್ಥಳಕ್ಕೆ ಧಾವಿಸಿ ಸಂತ್ರಸ್ಥ ಮಹಿಳೆಯರನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ   ಅಷ್ಟು ವೇಳೆಗೆ ವೃದ್ದ ಮಹಿಳೆ ಸಾವನ್ನಪ್ಪಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ :ಭೀಕರ ರಸ್ತೆ ಅಪಘಾತ; ಕುರಿಸಂತೆಗೆ ಹೋಗುತ್ತಿದ್ದ ನಾಲ್ವರು ಸಾವಿನ ಮನೆಗೆ

ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು. ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ. ಇನ್ನು ಕೊಲೆ ಆರೋಪಿ ಪ್ರದೀಪ್​ ಮೂರು ಮಕ್ಕಳಿದ್ದು. ಇಬ್ಬರು ಗಂಡು ಮಕ್ಕಳು. ಒಂದು ಹೆಣ್ಣು ಮಗುವಿದೆ ಎಂದು ತಿಳಿದು ಬಂದಿದೆ.

Exit mobile version