Site icon PowerTV

‘ಆಸ್ಪತ್ರೆಗೆ ಹಣ ವ್ಯರ್ಥ ಮಾಡಲು ಇಷ್ಟವಿಲ್ಲ’: ಹೆಂಡತಿಯನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಗಂಡ

ಗಾಜಿಯಾಬಾದ್ :  ಕ್ಯಾನ್ಸರ್​ ಖಾಯಿಲೆಯಿಂದ ಬಳಲುತ್ತಿದ್ದ ರಿಯಲ್​ ಎಸ್ಟೆಟ್​ ಉದ್ಯಮಿಯೊಬ್ಬ ಚಿಕಿತ್ಸೆಗೆ ಹಣ ವ್ಯರ್ಥ ಮಾಡಲು ಇಷ್ಟವಿಲ್ಲದೆ ಆತ್ಮಹತ್ಯೆ ಮಾಡಿಕೊಂಡಿದ್ದು. ಆತ್ಮಹತ್ಯೆಗೆ ಮುನ್ನ ತನ್ನ ಹೆಂಡತಿಗೆ ಗುಂಡು ಹೊಡೆದು ಕೊಲೆ ಮಾಡಿ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕೃತ ವ್ಯಕ್ತಿಯನ್ನು 46 ವರ್ಷದ ಕುಲದೀಪ್​ ತ್ಯಾಗಿ ಎಂದು ಗುರುತಿಸಲಾಗಿದೆ.

ಪೊಲೀಸರ ಪ್ರಕಾರ, ರಾಜ್ ನಗರ ಎಕ್ಸ್‌ಟೆನ್ಶನ್‌ನ ರಾಧಾ ಕುಂಜ್ ಸೊಸೈಟಿಯಲ್ಲಿರುವ ಮನೆಯಲ್ಲಿ ಕುಲ್​ದೀಪ್​ ಆತ್ಮಹತ್ಯೆ ಮಾಡಿಕೊಂಡಿದ್ದು. ಮೊದಲಿಗೆ ಪತ್ನಿ  ಅಂಶು ತ್ಯಾಗಿಗೆ ಪರವಾನಿಗೆ ಪಡೆದ ರಿವಾಲ್ವರ್​ನಿಂದ ಗುಂಡು ಹಾರಿಸಿ ಕೊಲೆ ಮಾಡಿದ್ದು. ನಂತರ ತಾನೂ ಅದೇ ಬಂದೂಕಿನಿಂದ ಶೂಟ್​ ಮಾಡಿಕೊಂಡು ಸಾವನ್ನಪ್ಪಿದ್ದಾನೆ. ಘಟನೆ ನಡೆದ ಸಮಯದಲ್ಲಿ ಮನೆಯಲ್ಲಿದ್ದ ಕುಲದೀಪ್​ ಕುಟುಂಬಸ್ಥರು ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಇದನ್ನೂ ಓದಿ :ಮುಸ್ಲಿಮರು ವಿಜಯ್​ಗೆ ಸಪೋರ್ಟ್​ ಮಾಡಬೇಡಿ: ದಳಪತಿ ವಿರುದ್ದ ಫತ್ವಾ ಹೊರಡಿಸಿ ಮುಸ್ಲಿಂ ಜಮಾತ್​

ಕ್ಯಾನ್ಸರ್​ ಚಿಕಿತ್ಸೆ ಹಣ ವ್ಯರ್ಥ ಮಾಡಲ್ಲ..!

ಕುಲದೀಪ್​ ತ್ಯಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಕೋಣೆಯಲ್ಲಿ ಡೆತ್​ ನೋಟ್​ ಪತ್ತೆಯಾಗಿದ್ದು. ಈ ಪತ್ರದಲ್ಲಿ ಕುಲದೀಪ್​ ಆತ್ಮಹತ್ಯೆಗೆ ಕಾರಣ ತಿಳಿಸಿದ್ದಾನೆ, ‘ನಾನು ಕ್ಯಾನ್ಸರ್‌ನಿಂದ ಬಳಲುತ್ತಿದ್ದೇನೆ ಮತ್ತು ನನ್ನ ಕುಟುಂಬಕ್ಕೆ ಅದರ ಬಗ್ಗೆ ತಿಳಿದಿಲ್ಲ. ನಾನು ಬದುಕುವುದು ಅನಿಶ್ಚಿತವಾಗಿರುವುದರಿಂದ ನನ್ನ ಚಿಕಿತ್ಸೆಗೆ ಹಣ ವ್ಯರ್ಥವಾಗಬಾರದು ಎಂದು ನಾನು ಬಯಸುತ್ತೇನೆ. ಜೊತೆಗೆ ನಾನು ಮತ್ತು ನನ್ನ ಪತ್ನಿ ಶಾಶ್ವತವಾಗಿ ಒಟ್ಟಿಗೆ ಇರಲು ಪ್ರತಿಜ್ಞೆ ಮಾಡಿದ್ದರಿಂದ ನಾನು ನನ್ನ ಹೆಂಡತಿಯನ್ನು ಕರೆದುಕೊಂಡು ಹೋಗುತ್ತಿದ್ದೇನೆ. ಇದು ನನ್ನ ನಿರ್ಧಾರ. ಯಾರೊಬ್ಬರೂ, ವಿಶೇಷವಾಗಿ ನನ್ನ ಮಕ್ಕಳು ತಪ್ಪಿತಸ್ಥರಲ್ಲ’ ಎಂದು ಬರೆಯಲಾಗಿದೆ.

ಇದನ್ನೂ ಓದಿ :ಉರ್ದು ಒಂದು ಧರ್ಮಕ್ಕೆ ಸಂಬಂಧಿಸಿದ ಭಾಷೆಯಲ್ಲ, ಅದು ಭಾರತದ ಭಾಷೆ; ಸುಪ್ರೀಂಕೋರ್ಟ್

ಘಟನೆ ಬಳಿಕ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು. ಆತ್ಮಹತ್ಯೆಗೆ ಬಳಸಿದ ಪಿಸ್ತೂಲ್​ನ್ನು ವಶಕ್ಕೆ ಪಡೆದು ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಹಿರಿಯ ಪೊಲೀಸ್ ಅಧಿಕಾರಿ ಪೂನಂ ಮಿಶ್ರಾ ಮಾತನಾಡಿ, ಕುಲದೀಪ್ ತ್ಯಾಗಿ ತನ್ನ ಪತ್ನಿಗೆ ಗುಂಡು ಹಾರಿಸಿದ ನಂತರ ತಾನೂ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳದಲ್ಲಿ ಡೆತ್ ನೋಟ್ ಪತ್ತೆಯಾಗಿದೆ. ನಾವು ಈ ವಿಷಯದ ಬಗ್ಗೆ ತನಿಖೆ ನಡೆಸುತ್ತಿದ್ದೇವೆ’ ಎಂದು ಅವರು ಹೇಳಿದರು.

Exit mobile version