Site icon PowerTV

50 ಕೋಟಿಯ ನಾಯಿ ಸಾಕಿದ್ದೀನಿ ಎಂದಿದ್ದ ಸತೀಶನ ಮನೆ ಮೇಲೆ ED ದಾಳಿ; ಬಯಲಾಯ್ತು ಸತ್ಯ

ಬೆಂಗಳೂರು : 50 ಕೋಟಿ ರೂಪಾಯಿ ಕೊಟ್ಟು ವಿಶ್ವದಲ್ಲೇ ದುಬಾರಿ ನಾಯಿ ಖರೀದಿಸಿದ್ದೀನಿ ಎಂದು ಹೇಳುತ್ತಿದ್ದ ಶ್ವಾನ ಪ್ರೇಮಿ ಸತೀಶ್​ ಮನೆ ಮೇಲೆ ಇಡಿ ದಾಳಿ ನಡೆಸಿದ್ದು. ಇಡಿ ದಾಳಿ ವೇಳೆ ಸತೀಶ್​​ ಸುಳ್ಳು ಹೇಳಿರುವುದು ಬೆಳಕಿಗೆ ಬಂದಿದೆ.

ಬೆಂಗಳೂರಿನ ಶ್ವಾನಪ್ರಿಯರಲ್ಲಿ ಒಬ್ಬನಾಗಿರುವ ಸತೀಶ್​. ಇವರು ಹಲವು ಶ್ವಾನ ತಳಿ ಸಂಘಗಳನ್ನು ಮುನ್ನಡೆಸುತ್ತಿದ್ದಾರೆ. ಹಲವು ವರ್ಷಗಳ ಹಿಂದೆಯೇ ನಾಯಿ ಸಾಕುವುದನ್ನು ಬಿಟ್ಟಿದ್ದರೂ ಆಗಾಗ್ಗೆ ಅಪರೂಪದ ನಾಯಿಗಳೊಂದಿಗೆ ಪ್ರದರ್ಶನಕ್ಕೆ ಬರುತ್ತಿರುತ್ತಾರೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದ ಸತೀಶ್​ ವಿಶ್ವದಲ್ಲೆ ದುಬಾರಿ ಶ್ವಾನ ಖರೀದಿಸಿರುವಾಗಿ ಬಡಾಯಿ ಬಿಟ್ಟಿದ್ದನು.

ಇದನ್ನೂ ಓದಿ :‘ಆಸ್ಪತ್ರೆಗೆ ಹಣ ವ್ಯರ್ಥ ಮಾಡಲು ಇಷ್ಟವಿಲ್ಲ’: ಹೆಂಡತಿಯನ್ನು ಕೊಂದು ತಾನೂ ಆತ್ಮಹತ್ಯೆಗೆ ಶರಣಾದ ಗಂಡ

ಸತೀಶ್‌ 50 ಕೋಟಿ ರೂ. ಕೊಟ್ಟು ಶ್ವಾನವೊಂದನ್ನು ಖರೀದಿ ಮಾಡಿರುವಿದಾಗಿ ಕಾರ್ಯಕ್ರಮವೊಂದರಲ್ಲಿ  ಹೇಳಿಕೊಂಡಿದ್ದರು. ಕಾಡು ತೋಳ ಮತ್ತು ಕಕೇಶಿಯನ್‌ ಶೆಫರ್ಡ್‌ ತಳಿಯ ಮಿಶ್ರಣವಾಗಿರುವ ಇದನ್ನು ತೋಳನಾಯಿ ಕರೆಯಲಾಗಿದ್ದು. ಇದನ್ನು 50 ಕೋಟಿ ಕೊಟ್ಟು ಖರೀದಿಸಿರುವುದಾಗಿ ಹೇಳಿದ್ದನು.

ಸತೀಶ್​ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಇಡಿ (ED) ಅಧಿಕಾರಿಗಳು ಇಂದು ಮನೆ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ನಾಯಿಯ ಬೆಲೆ 50 ಕೋಟಿ ಅನ್ನೋದು ಸುಳ್ಳು ಎಂಬುದು ಗೊತ್ತಾಗಿದೆ. ಸದ್ಯ ಸ್ಥಳದಲ್ಲೇ ಬೀಡು ಬಿಟ್ಟಿರುವ ಅಧಿಕಾರಿಗಳು ದಾಖಲೆಗಳ ಪರಿಶೀಲನೆ ಮುಂದುವರಿಸಿದ್ದಾರೆ ಎಂದು ತಿಳಿದು ಬಂದಿದೆ.

Exit mobile version