Site icon PowerTV

ಉರ್ದು ಒಂದು ಧರ್ಮಕ್ಕೆ ಸಂಬಂಧಿಸಿದ ಭಾಷೆಯಲ್ಲ, ಅದು ಭಾರತದ ಭಾಷೆ; ಸುಪ್ರೀಂಕೋರ್ಟ್

ನವದೆಹಲಿ : ಉರ್ದು ಭಾಷೆ ವಿಚಾರದ ಕುರಿತು ಭಾರತೀಯ ಸರ್ವೋಚ್ಚ ನ್ಯಾಯಾಲಯ ಐತಿಹಾಸಿಕ ತೀರ್ಪು ನೀಡಿದ್ದು. ಉರ್ದು ಭಾಷೆ ಭಾರತದಲ್ಲಿ ಜನ್ಮತಾಳಿದ್ದು. ಇದನ್ನು ಯಾವುದೇ ಧರ್ಮದೊಂದಿದೆ ಸಂಬಂಧಿಸುವುದು ಎನ್ನುವುದು ತಪ್ಪು ಎಂದು ಸುಪ್ರೀಂಕೋರ್ಟ್​ ಐತಿಹಾಸಿಕ ತೀರ್ಪು ನೀಡಿದೆ.

ಮಹಾರಾಷ್ಟ್ರದ ಅಕೋಲಾ ಜಿಲ್ಲೆಯ ಪಾತೂರ್ ಪುರಸಭೆಯ ಸೂಚನಾ ಫಲಕದಲ್ಲಿ ಉರ್ದು ಭಾಷೆಯ ಬಳಕೆಯನ್ನು ಎತ್ತಿಹಿಡಿದ ಕೋರ್ಟ್, ಭಾಷೆಯು ಧರ್ಮವನ್ನು ಪ್ರತಿನಿಧಿಸುವುದಿಲ್ಲ, ಬದಲಿಗೆ ಸಂಸ್ಕೃತಿಯ ಭಾಗವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ. ನ್ಯಾ. ಸುಧಾಂಶು ಧುಲಿಯಾ ಮತ್ತು ಕೆ. ವಿನೋದ್ ಚಂದ್ರನ್ ಅವರನ್ನೊಳಗೊಂಡ ಪೀಠವು ಈ ಐತಿಹಾಸಿಕ ತೀರ್ಪು ನೀಡಿದೆ.

ಇದನ್ನೂ ಓದಿ :ಯೂಟ್ಯೂಬರ್ ಜೊತೆ ಅಕ್ರಮ ಸಂಬಂಧ; ಪ್ರಶ್ನಿಸಿದ ಪತಿಯನ್ನೇ ಕೊಂದ ಪತ್ನಿ

ಪಾತೂರ್​ ಪುರಸಭೆಯ ಮಾಜಿ ಕೌನ್ಸಿಲರ್​ ವರ್ಷಾತಾಯಿ ಸಂಜಯ್​ ಬಗಾಡೆ ಅವರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದ್ದು. 2021ರಲ್ಲಿ ಬಾಂಬೆ ಹೈಕೋರ್ಟ್ ನೀಡಿದ ತೀರ್ಪನ್ನು ಎತ್ತಿ ಹಿಡಿದಿದೆ. ತೀರ್ಪಿನಲ್ಲಿ “ಉರ್ದು ಭಾರತದಲ್ಲಿ ಜನ್ಮತಾಳಿದ ಭಾಷೆಯಾಗಿದ್ದು, ಇದು ಯಾವುದೇ ಧರ್ಮಕ್ಕೆ ಸೀಮಿತವಾಗಿಲ್ಲ. ಭಾಷೆಯನ್ನು ಧರ್ಮದೊಂದಿಗೆ ಗುರುತಿಸುವುದು ನಮ್ಮ ತಪ್ಪು ಊಹೆಗಳು ಮತ್ತು ಕೆಲವೊಮ್ಮೆ ಪೂರ್ವಾಗ್ರಹಗಳಿಂದ ಕೂಡಿದೆ” ಎಂದು ನ್ಯಾಯಾಲಯ ತಿಳಿಸಿದೆ.

ಕೋರ್ಟ್ ಇದೇ ವೇಳೆ ಉರ್ದು ಮತ್ತು ಹಿಂದಿ ಭಾಷೆಗಳ ಐತಿಹಾಸಿಕ ಸಂಬಂಧವನ್ನು ಉಲ್ಲೇಖಿಸಿತು. ಈ ಎರಡೂ ಭಾಷೆಗಳು ಒಂದೇ ಮೂಲದಿಂದ ಬೆಳೆದವು. ಆದರೆ ಕಾಲಾಂತರದಲ್ಲಿ ಧಾರ್ಮಿಕ ಗುರುತುಗಳಿಂದ ಬೇರ್ಪಡಿಸಲ್ಪಟ್ಟವು. ಹಿಂದಿಯನ್ನು ಹಿಂದೂಗಳ ಭಾಷೆ ಮತ್ತು ಉರ್ದುವನ್ನು ಮುಸ್ಲಿಮರ ಭಾಷೆ ಎಂದು ಗುರುತಿಸುವುದು ವಾಸ್ತವದಿಂದ ದೂರವಾದ ದಾರಿ ಎಂದು ಕೋರ್ಟ್ ವಿಷಾದ ವ್ಯಕ್ತಪಡಿಸಿತು.

Exit mobile version