Site icon PowerTV

ಚೀನಾ ಮೇಲೆ ಶೇ. 245ರಷ್ಟು ಟಾರಿಫ್ ವಿಧಿಸಿದ ಟ್ರಂಪ್​; ಎರಡು ದೇಶದ ಆರ್ಥಿಕತೆಗೆ ಏಟು

ವಾಷಿಂಗ್ಟನ್‌: ಅಮೆರಿಕ-ಚೀನಾ ನಡುವೆ ವಾಣಿಜ್ಯ ಸಮರ ಜೋರಾಗುತ್ತಿದೆ. ಈ ನಡುವೆ ಟ್ರಂಪ್‌ ಆಡಳಿತವು ಚೀನಾದ ಆಮದು ಸರಕುಗಳ ಮೇಲೆ ಶೇ.245 ರಷ್ಟು ಸುಂಕ ವಿಧಿಸಿದೆ. ಮಂಗಳವಾರ ಶ್ವೇತಭವನ ಬಿಡುಗಡೆ ಮಾಡಿದ ಫ್ಯಾಕ್ಟ್‌ ಶೀಟ್‌ ಪ್ರಕಾರ 245% ಸುಂಕ ನಿಗಧಿಪಡಿಸಿರುವುದು ಖಚಿತವಾಗಿದೆ. ಈ ಮೂಲಕ ಚೀನಾ ಪ್ರತಿರೋಧಕ್ಕೆ ಅಮೆರಿಕ ದೊಡ್ಡ ಹೊಡೆತ ಕೊಟ್ಟಿದೆ. ಇದು ಎರಡು ದೇಶದ ಆರ್ಥಿಕತೆಗೆ ದೊಡ್ಡ ಪೆಟ್ಟು ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಟ್ರಂಪ್​ ಆಡಳಿತ ಚುಕ್ಕಾಣಿ ಹಿಡಿದ ಸಮಯದಿಂದ ವಿಶ್ವದ ಆರ್ಥಿಕತೆ ಅಲ್ಲೋಲ ಕಲ್ಲೋಲವಾಗಿದ್ದು. ವಿಶ್ವದ ಅನೇಕ ರಾಷ್ಟ್ರಗಳ ಮೇಲೆ ಟ್ರಂಪ್​ ಟಾರಿಫ್​ ವಿಧಿಸಿದ್ದಾರೆ. ಆದರೆ ಚೀನಾ ಮತ್ತು ಅಮೇರಿಕಾ ನಡುವಿನ ಟಾರಿಫ್​ ವಾರ್​ ಮಿತಿ ಮೀರುತ್ತಿದ್ದು. ಚೀನಾ ಇತ್ತೀಚೆಗೆ ಅಮೇರಿಕಾದಿಂದ ಆಮದು ಆಗುವ ವಸ್ತುಗಳ ಮೇಲೆ 125% ಟಾರಿಫ್​ ವಿಧಿಸಿತ್ತು. ಇದಕ್ಕೆ ಪ್ರತಿಯಾಗಿ ಅಮೇರಿಕಾ ತನ್ನ ವಸ್ತುಗಳಿಗೆ 145% ಟಾರಿಫ್​ ವಿಧಿಸಿದ್ದಾರೆ.

ಇದನ್ನೂ ಓದಿ :ED ದಾಳಿ ಮಾಡಲು ಮೋದಿ ಸಂಚು ರೂಪಿಸಿದ್ದಾರೆ, ರಾಜ್ಯ ಸರ್ಕಾರ ಎಚ್ಚರಿಕೆಯಿಂದ ಇರಬೇಕು: ಖರ್ಗೆ

ಅಲ್ಲದೇ  ಅಮೆರಿಕದ ಬೋಯಿಂಗ್‌ ಕಂಪನಿಯ ವಿಮಾನ ಖರೀದಿ ನಿಲ್ಲಿಸುವಂತೆ ತನ್ನ ದೇಶದ ವಿಮಾನಯಾನ ಸಂಸ್ಥೆಗಳಿಗೆ ಚೀನಾ ಆದೇಶ ನೀಡಿದ್ದು. ಇದಕ್ಕೆ ಪ್ರತೀಕಾರವಾಗಿ ಅಮೆರಿಕ ಚೀನಾದ ಆಮದು ವಸ್ತುಗಳ ಮೇಲಿನ ಸುಂಕವನ್ನು ಬರೋಬ್ಬರಿ 245%ಗೆ ಏರಿಕೆ ಮಾಡಿದೆ. ಅಮೆರಿಕದ ನಿರ್ಧಾರಕ್ಕೆ ಪ್ರತಿಕ್ರಿಯಿಸಿರುವ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್, ಸುಂಕದ ವಿಷಯದಲ್ಲಿ ಚೀನಾ ತನ್ನ ಗಂಭೀರ ನಿಲುವನ್ನು ಪದೇ ಪದೇ ಹೇಳುತ್ತಲೇ ಇದೆ. ಸುಂಕದ ಸಮರವನ್ನು ಮೊದಲು ಪ್ರಾರಂಭಿಸಿದ್ದು ಅಮೆರಿಕ. ಚೀನಾ ತನ್ನ ಕಾನೂನುಬದ್ಧ ಹಕ್ಕುಗಳು, ಹಿತಾಸಕ್ತಿ ಕಾಪಾಡಲು ಅಗತ್ಯ ಪ್ರತಿಕ್ರಮಗಳನ್ನು ತೆಗೆದುಕೊಂಡಿದೆ ಅಷ್ಟೇ ಅಂತ ಹೇಳಿದ್ದಾರೆ.

Exit mobile version