Site icon PowerTV

ಅತ್ತೆ-ಮಾವನ ಕಾಟ ತಾಳಲಾರದೆ ಆತ್ಮಹತ್ಯೆಗೆ ಶರಣಾದ ನವವಿವಾಹಿತೆ

ಗದಗ : ಅತ್ತೆ-ಮಾವನ ಕಾಟ ತಾಳಲಾರದೇ ನವ ವಿವಾಹಿತೆ ನಿಗೂಡವಾಗಿ ಸಾವನ್ನಪ್ಪಿದ್ದು. ಮಹಿಳೆಯ ಸಾವಿನ ಸುತ್ತ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿವೆ. ಗದಗ ಜಿಲ್ಲೆಯ, ಬೆಟಗೇರಿಯ, ಶರಣಬಸವೇಶ್ವರ ನಗರದಲ್ಲಿ ಘಟನೆ ನಡೆದಿದ್ದು. ಮೃತ ಯುವತಿಯನ್ನು 27 ವರ್ಷದ ಪೂಜಾ ಅಮರೇಶ್ ಅಯ್ಯನಗೌಡ ಎಂದು ಗುರುತಿಸಲಾಗಿದೆ.

ನೇಣು ಬಿಗಿದ ಸ್ಥಿತಿಯಲ್ಲಿ ಯುವತಿ ಶವ ಪತ್ತೆಯಾಗಿದೆ. ಆ ಯುವತಿ ಸಾವಿಗೆ ಅವರ ಅತ್ತೆ-ಮಾವ, ಭಾವನ ಕಿರುಕುಳವೇ ಕಾರಣ ಎನ್ನಲಾಗಿದೆ. ಇನ್ನು ಯುವತಿಯ ಕುಟುಂಬಸ್ಥರು ಮಗಳನ್ನು ಕೊಂದು ನೇಣು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ. ಡೆತ್​ನೋಟ್ ಬರೆದಿಟ್ಟು ಪೂಜಾ ಆತ್ಮಹತ್ಯೆ ಮಾಡಿಕೊಂಡಿದ್ದು ಭಾವ ವೀರನಗೌಡ, ಅತ್ತೆ ಶಶಿಕಲಾ ವಿರುದ್ಧ ಕುಟುಂಬಸ್ಥರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ :ನಾವು ಜಾತಿಗಣತಿ ವರದಿಯನ್ನ ಮಂಡನೆ ಮಾಡಿಲ್ಲ: ಸಚಿವ ಪ್ರಿಯಾಂಕ್​ ಖರ್ಗೆ ಸ್ಪಷ್ಟನೆ

ನಾಲ್ಕು ತಿಂಗಳ ಹಿಂದೆಯಷ್ಟೇ ಪೂಜಾ ಹಾಗೂ ಅಮರೇಶ ಮದುವೆಯಾಗಿತ್ತು.  ಪತಿ ಅಮರೇಶ ಹೆಂಡತಿಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದ. ಮೊದಲು ಯಾದಗಿರಿ ಜಿಲ್ಲೆಯಲ್ಲಿ ಕೆಲಸ ಮಾಡ್ತಿದ್ದ. ಅದನ್ನು ಬಿಟ್ಟು ನಿನ್ನೆಯಷ್ಟೇ ಚೆನೈಗೆ ಖಾಸಗಿ ಕಂಪನಿಯೊಂದರ ಕೆಲಸಕ್ಕೆ ತೆರಳಿದ್ದ. ಆದರೆ ಇಂದು ಹೆಂಡತಿ ಪೂಜಾ ಮೃತಪಟ್ಟಿದ್ದಾಳೆ. ಮೃತ ಪೂಜಾಗೆ ನಿತ್ಯ ಕಿರುಕುಳ ನೀಡುತ್ತಿದ್ದು, ಸ್ವಲ್ಪ ಕಪ್ಪು ಬಣ್ಣ ಇರುವುದರಿಂದ ಅತ್ತೆ ಅಪಹಾಸ್ಯ ಮಾಡುತ್ತಿದ್ದಳು. ಯಾವುದೇ ಕೆಲಸ ಮಾಡಿದ್ರು ಸಿಟ್ಟು ಮಾಡುತ್ತಿದ್ದಳು. ವಿಪರೀತವಾದ ಕಿರುಕುಳ ನಮ್ಮ ಮಗಳಿಗೆ ನೀಡುತ್ತಿರುವ ಬಗ್ಗೆ ಆಗಾಗ ಹೇಳಿಕೊಳ್ಳುತ್ತಿದ್ದಳು ಎಂದು ಯುವತಿ ಕುಟುಂಬಸ್ಥರು ಆರೋಪಿಸಿದ್ದಾರೆ.

ಇದನ್ನೂ ಓದಿ :ಅಕ್ರಮ ಹಣ ವರ್ಗಾವಣೆ ಪ್ರಕರಣ; ಸೋನಿಯಾ, ರಾಹುಲ್​ ವಿರುದ್ದ ಚಾರ್ಜಶೀಟ್​ ಸಲ್ಲಿಕೆ

ಪೂಜಾ ಎಮ್​ಎಸ್ಸಿ ಪದವಿರಳಾಗಿದ್ದು, ಪರೀಕ್ಷೆ ಹತ್ತಿರ ಬಂದಿತ್ತು. ಆದರೆ ಸೊಸೆ ಓದುವುದು ಬೇಡ ಎಂದು ಪೂಜಾಳ ಅತ್ತೆ, ಭಾವ ವಿರೋಧ ಮಾಡುತ್ತಿದ್ದರು. ಈ ಕುರಿತಾದ ಎಲ್ಲಾ ವಿಷಯವನ್ನು ಪೂಜಾ ತನ್ನ ತಂದೆ-ತಾಯಿಗೆ ತಿಳಿಸುತ್ತಿದ್ದಳು ಎಂದು ತಿಳಿದು ಬಂದಿದೆ. ಸದ್ಯ ಘಟನಾ ಸ್ಥಳಕ್ಕೆ ಬೆಟಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು. ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

Exit mobile version