ಅಗ್ನಿಸಾಕ್ಷಿ ಹಾಗೂ ಸೀತಾರಾಮ ಧಾರಾವಾಹಿ ನಟಿ ವೈಷ್ಣವಿ ಗೌಡ ಸದ್ದಿಲ್ಲದೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ವೈಷ್ಣವಿ ಗೌಡ ಅವರು ಅಕಾಯ್ ಎನ್ನುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು. ಇದೀಗ ಇವರಿಬ್ಬರ ನಿಶ್ಚಿತಾರ್ಥದ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಚಂದನವನದ ಕಿರುತೆರೆಯ ಬಹುಬೇಡಿಕೆಯ ನಟಿಯಾಗಿದ್ದ ವೈಷ್ಣವಿ ಅವರ ಮದುವೆಯ ವಿವಾಹ ಅನೇಕ ಸಂದರ್ಭಗಳಲ್ಲಿ ಕೇಳಿ ಬರುತ್ತಲೆ ಇತ್ತು. ಇದೀಗ ಈ ಎಲ್ಲಾ ಪ್ರಶ್ನೆಗಳಿಗೆ ನಟಿ ವೈಷ್ಣವಿ ಉತ್ತರ ನೀಡಿದ್ದು. ಅಕಾಯ್ ಎಂಬುವವರ ಜೊತೆ ನಿಶ್ಚಿತಾರ್ಥವಾಗಿದ್ದಾರೆ. ಅಕಾಯ್ ಬೇರೆ ರಾಜ್ಯದವರಾಗಿದ್ದು. ಏರ್ಪೋರ್ಸ್ನಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.
ಇದನ್ನೂ ಓದಿ :ಕೇವಲ 26ರನ್ ಗಳಿಸಿದರು ಪಂದ್ಯಶ್ರೇಷ್ಟ ಪ್ರಶಸ್ತಿ ಪಡೆದ ಧೋನಿ
ಕುಟುಂಬಸ್ಥರ ಸಮ್ಮುಖದಲ್ಲಿ ವೈಷ್ಣವಿ ಗೌಡ, ಅಕಾಯ್ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಬೆಳಿಗ್ಗೆ ವೈಷ್ಣವಿ ಗೌಡ ಅವರು ಸಾಂಪ್ರದಾಯಿಕವಾಗಿ ಎಂಗೇಜ್ ಆಗಿದ್ದು, ಸಂಜೆ ಬರ್ತ್‌ಡೇ ಪಾರ್ಟಿ ಇತ್ತು ಎನ್ನಲಾಗಿದೆ. ವೈಷ್ಣವಿ ಗೌಡ ಅವರು ‘ಬಿಗ್ ಬಾಸ್’ನಲ್ಲಿ ಸ್ಪರ್ಧಿಸಿದ್ದ ಸಂದರ್ಭದಲ್ಲಿ ತಮಗೆ ಮದುವೆ ಬಗ್ಗೆ ಇರುವ ಕನಸುಗಳ ಬಗ್ಗೆ ಹೇಳಿಕೊಂಡಿದ್ದರು. ಮದುವೆನ ಹೀಗೆ ಆಗ್ತೀನಿ, ಹಾಗೆ ಆಗ್ತೀನಿ ಎಂದೆಲ್ಲ ವಿವರಿಸಿದ್ದರು. ಅವರಿಗೆ ಸಾಕಷ್ಟು ಮದುವೆ ಆಫರ್ಗಳು ಬಂದರೂ ಅದನ್ನು ಒಪ್ಪಿಲ್ಲ ಎಂದಿದ್ದರು. ಈಗ ವೈಷ್ಣವಿ ಗೌಡ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದೆ.
