Site icon PowerTV

ಅನೈತಿಕ ಸಂಬಂಧದ ಆರೋಪ; ತಾಲಿಬಾನ್​ಗಳ ರೀತಿ ಮಹಿಳೆಗೆ ಥಳಿಸಿದ ದುಷ್ಕರ್ಮಿಗಳು

ದಾವಣಗೆರೆ : ತಾಲಿಬಾನ್​ ಅಥವಾ ಶರಿಯಾ ಕಾನೂನು ಜಾರಿಯಲ್ಲಿರುವ ದೇಶಗಳಲ್ಲಿ ನಡೆಯುವಂತಹ ಹೀನ ಕೃತ್ಯವೊಂದು ದಾವಣಗೆರೆಯಲ್ಲಿ ನಡೆದಿದ್ದು. ಮಹಿಳೆಯೊಬ್ಬರು ಅನೈತಿಕ ಸಂಬಂಧವನ್ನಿಟ್ಟಿಕೊಂಡಿದ್ದಾರೆ ಎಂದು ಆರೋಪಿಸಿ ಥಳಿಸಿದ್ದಾರೆ.

ದಾವಣಗೆರೆಯ ಜಿಲ್ಲೆಯ, ಚನ್ನಗಿರಿ ತಾಲೂಕಿನ, ತಾವರೆಕೆರೆ ಗ್ರಾಮದಲ್ಲಿ ಅಮಾನವೀಯ ಘಟನೆಯೊಂದು ನಡೆದಿದ್ದು. ಇದೇ ಏಪ್ರಿಲ್​ 9ರಂದು ಆರು ಜನ ದುಷ್ಕರ್ಮಿಗಳು ನಸ್ರೀನ್ ಬಾನು(38) ಹಾಗೂ ಇವಳ ಸಂಬಂಧಿಗಳಾದ ನಸ್ರೀನ್ ಮತ್ತು ಫಯಾಜ್ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆ. ತಾವರೆಕೆರೆಯ ಜಾಮೀಯ ಮಸೀದಿ ಬಳಿ ಅನೈತಿಕ ಸಂಬಂದದ ಆರೋಪದ ಮೇಲೆ ಮಹಿಳೆ ಮತ್ತು ಸಂಬಂಧಕರಿಗೆ ಹಲ್ಲೆ ನಡೆಸಿದ್ದಾರೆ.

ಇದನ್ನೂ ಓದಿ :PSI ಅನ್ನಪೂರ್ಣಗೆ ಕಿತ್ತೂರು ರಾಣಿ ಚೆನ್ನಮ್ಮ ಪ್ರಶಸ್ತಿ ಕೊಡುತ್ತೇನೆ ; ಲಕ್ಷ್ಮೀ ಹೆಬ್ಬಾಳ್ಕರ್

ತಾವರೆಕೆರೆ ಗ್ರಾಮದ ಮಹ್ಮದ್ ನಯಾಜ್ (32), ಮಹ್ಮದ್ ಗೌಸ್ ಪೀರ್ (45), ಚಾಂದ್ ಪೀರ್(35), ಇನಾಯಿತ್ ಉಲ್ಲಾ(51), ದಸ್ತಗೀರ್(24) ಹಾಗೂ ರಸೂಲ್ ಟಿಆರ್ (42) ಹಲ್ಲೆ ನಡೆಸಿದ್ದು. ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಮಹಿಳೆ ಮೇಲೆ ಹಲ್ಲೆ ನಡೆಸುತ್ತಿದ್ದರು. ಅಲ್ಲಿ ನೆರೆದಿದ್ದ ಜನರು ಕೈಕೊಟ್ಟಿಕೊಂಡು ನೋಡುತ್ತಿರುವುದು ವಿಡಿಯೋದಲ್ಲಿ ಕಾಣಬಹುದು. ಘಟನೆ ಸಂಬಂಧ ಚನ್ನಗಿರಿ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Exit mobile version