ಬೆಂಗಳೂರು: ಭೋವಿ ನಿಗಮ ಹಗರಣ ಸಂಬಂಧ ವಕೀಲೆ ಜೀವಾ ಆತ್ಮಹತ್ಯೆ ಪ್ರಕರಣದ ತನಿಖೆ ನಡೆಸಿದ್ದ ಎಸ್ಐಟಿ ಅಧಿಕಾರಿಗಳು ಹೈಕೋರ್ಟ್ಗೆ ಅಂತಿಮ ವರದಿ ಸಲ್ಲಿಸಿದ್ದು. ಒಟ್ಟು 2300 ಪುಟಗಳ ಅಂತಿಮ ವರದಯನ್ನು ಸಲ್ಲಿಸಿದ್ದಾರೆ. ಐಪಿಎಸ್ ಅಧಿಕಾರಿಗಳಾದ ವಿನಾಯಕ್ ವರ್ಮಾ, ಅಕ್ಷಯ್ ಮಚೀಂದ್ರ, ನಿಶಾ ಜೇಮ್ಸ್ ನೇತೃತ್ವದ ವಿಶೇಷ ತನಿಖಾ ತಂಡದಿಂದ ವರದಿ ಸಲ್ಲಿಕೆ ಮಾಡಲಾಗಿದೆ.
ಇದನ್ನೂ ಓದಿ :ಸಿದ್ದರಾಮಯ್ಯ ರಾಜ್ಯ ರಾಜಕೀಯ ಇತಿಹಾಸದಲ್ಲಿ ಒಬ್ಬ ಖಳನಾಯಕ ಆಗ್ತಾರೆ ; ವಿ. ಸೋಮಣ್ಣ
ಹೈಕೋರ್ಟ್ಗೆ ಸಲ್ಲಿಸಿರುವ ಅಂತಿಮ ವರದಯಲ್ಲಿ ಮೃತ ಜೀವಾ ಡೆತ್ನೋಟ್ನಲ್ಲಿದ್ದ ಬಹುತೇಕ ಆರೋಪಗಳು ಸಾಭೀತಾಗಿದ್ದು. ಡಿವೈಎಸ್‌ಪಿ ಕನಕಲಕ್ಷ್ಮಿ ಅವರು ಕಿರುಕುಳ ನೀಡಿರುವುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ ಅಲ್ಲದೇ ವಿಧಿವಿಜ್ಞಾನ ಪ್ರಯೋಗಾಲಯ ವರದಿಗಳು, ಮರಣೋತ್ತರ ಪರೀಕ್ಷಾ ವರದಿ, ಡೆತ್‌ನೋಟ್ ಫಾರೆನ್ಸಿಕ್ ರಿಪೋರ್ಟ್‌ಗಳನ್ನು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಏನಿದು ಪ್ರಕರಣ ?
ಭೋವಿ ನಿಗಮದಲ್ಲಿ ಒಟ್ಟು 34 ಕೋಟಿ ಹಣದ ಅಕ್ರಮ ವರ್ಗಾವಣೆಯಾಗಿದ್ದು. ಅದರಲ್ಲಿ ಮೃತ ಜೀವಾ ಮಾಲೀಕತ್ವದ ಸಂಸ್ಥೆ ಅನ್ನಿಕಾ ಎಂಟರ್‌ಪ್ರೆಸಸ್‌ಗೆ 7.16 ಕೋಟಿ ರೂ ಮತ್ತು ಅವರ ಸಹೋದರಿ ಹೆಸರಲ್ಲಿರುವ ಹರ್ನಿತಾ ಕ್ರಿಯೇಷನ್ಸ್‌ಗೆ 3.79 ಕೋಟಿ ರೂ. ವರ್ಗಾವಣೆ ಆಗಿತ್ತು. ಇನ್ನೂಳಿದ ಹಣ ಬೇರೆಯವರ ಪಾಲಗಿತ್ತು.
ಇದನ್ನೂ ಓದಿ :ನಿದ್ರೆಯಲ್ಲಿದ್ದ ಬಾಲಕಿಗೆ ಹಾವು ಕಡಿತ; ಮಲಗಿದ್ದಲ್ಲೆ ಚಿರನಿದ್ರೆಗೆ ಜಾರಿಗೆ ಬಾಲಕಿ
ಈ ಅಕ್ರಮದ ಬಗ್ಗೆ ತನಿಖೆ ನಡೆಸಲು ಗೃಹ ಇಲಾಖೆ ಡಿವೈಎಸ್‌ಪಿ ಕನಕ ಲಕ್ಷ್ಮಿ ಅವರ ನೇತೃತ್ವದಲ್ಲಿ ಆಂತರಿಕ ತನಿಖೆ ನಡೆಸಿದ್ದು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೋಟಿಸ್ ಕೊಡದೇ ತಮ್ಮನ್ನ ವಿಚಾರಣೆಗೆ ಕರೆದು ದೈಹಿಕ ಹಾಗೂ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಜೀವಾ ಆರೋಪಿಸಿ ಬನಶಂಕರಿಯಲ್ಲಿರುವ ತಮ್ಮ ಮನೆಯಲ್ಲಿ ಜೀವಾ ಆತ್ಮಹತ್ಯೆಗೆ ಶರಣಾಗಿದ್ದರು.



Pinco-da idman və kazino bir yerdədir. Hər gün yeni kampaniyalar üçün bax pinco azerbaijan. Pinco online kazino tam lisenziyalıdır.
Pinco kazino bonusları daim artırılır.