Site icon PowerTV

ವಾರಣಾಸಿ ಗ್ಯಾಂಗ್ ರೇಪ್: ಏರ್‌ಪೋರ್ಟಲ್ಲೇ ಪೊಲೀಸರಿಂದ ಮಾಹಿತಿ ಪಡೆದ ಪ್ರಧಾನಿ ಮೋದಿ

ಲಕ್ನೋ : ಪ್ರಧಾನಿ ನರೇಂದ್ರ ಮೋದಿ ಅಭಿವೃದ್ದಿ ಯೋಜನೆಗಳಿಗೆ ಚಾಲನೆ ನೀಡಲು ವಾರಣಾಸಿಗೆ ಭೇಟಿ ನೀಡಿದ್ದು. ಈ ವೇಳೆ ವಾರಣಾಸಿಯಲ್ಲಿ ಇತ್ತೀಚೆಗೆ ನಡೆದ ಗ್ಯಾಂಗ್​ರೇಪ್​ ಪ್ರಕರಣದ ಕುರಿತು ಏರ್​ಪೋರ್ಟ್​ನಲ್ಲೇ ಪೊಲೀಸರಿಂದ ಮಾಹಿತಿ ಪಡೆದರು.

ಕಳೆದ ಏಪ್ರೀಲ್ 6ರಂದು ವಾರಣಾಸಿಯಲ್ಲಿ ಗ್ಯಾಂಗ್​ರೇಪ್​ ಪ್ರಕರಣವೊಂದು ದಾಖಲಾಗಿತ್ತು. 19 ವರ್ಷದ ಯುವತಿಯನ್ನ ಅಪಹರಿಸಿ 23 ಮಂದಿ 1 ವಾರಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿದ್ದರು. ಈ ಘಟನೆ ಸಂಬಂಧ ವಾರಣಾಸಿಯ ಪೊಲೀಸ್ ಆಯುಕ್ತರು , ವಿಭಾಗೀಯ ಆಯುಕ್ತರು ಮತ್ತು ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರಿಂದ ವಾರಣಾಸಿ ಏರ್‌ಪೋರ್ಟ್‌ನಲ್ಲೇ ಪ್ರಧಾನಿ ಮೋದಿ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೇ ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮಕ್ಕೆ ಸೂಚನೆ ನೀಡಿದ್ದಾರೆ ಮತ್ತು ಇಂತಹ ಘಟನೆಗಳು ಮರುಕಳಿಸದಂತೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ :4 ಸಾವಿರ ಜನರಿಗೆ ಕಂಟಕವಾಗಲಿದೆಯಾ ಪ್ರಮೋದ ದೇವಿ ಪತ್ರ: ಊರಿಗೆ ಊರನ್ನೇ ಕಳೆದುಕೊಳ್ಳುವ ಭೀತಿ

ಈಗಾಗಲೇ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಲಾಲ್‌ಪುರ ಪಾಂಡೆಪುರ ಪೊಲೀಸರು ಈವರೆಗೆ 9 ಮಂದಿಯನ್ನು ಬಂಧಿಸಿದ್ದು, ಉಳಿದ ಆರೋಪಿಗಳಿಗಾಗಿ ಶೋಧ ನಡೆಸುತ್ತಿದ್ದಾರೆ. ಲಾಲ್‌ಪುರ ಪಾಂಡೆಪುರ ಪೊಲೀಸ್ ಠಾಣೆಯಲ್ಲಿ ಸಂಬಂಧಿತ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

ಏನಿದು ಘಟನೆ?

ಉತ್ತರ ವಾರಣಾಸಿಯ ಲಾಲ್‌ಪುರ್‌ ಪ್ರದೇಶದ ನಿವಾಸಿಯಾಗಿದ್ದ ಸಂತ್ತಸ್ತ ಯುವತಿ ಕಳೆದ ಮಾರ್ಚ್‌ 29ರಂದು ತನ್ನ ಸ್ನೇಹಿತರನ್ನ ಭೇಟಿಯಾಗಲು ಮನೆಯಿಂದ ಹೊರಟಿದ್ದಳು. ಇದೇ ರೀತಿ ಆಗಾಗ್ಗೆ ತನ್ನ ಸ್ನೇಹಿತರನ್ನ ಭೇಟಿಯಾಗಿ ಯಾವುದೇ ತೊಂದರೆ ಇಲ್ಲದೇ ಮನೆಗೆ ಬರುತ್ತಿದ್ದಳು. ಆದರೆ ಮಾ.29 ಮನೆಗೆ ಮರಳಲು ಸಾಧ್ಯವಾಗಲಿಲ್ಲ. ಕೊನೆಗೆ ಊರೆಲ್ಲ ಹುಡುಕಾಡಿದರೂ ಸಿಗದಿದ್ದ ಕಾರಣ ಪೋಷಕರು ಏಪ್ರಿಲ್ 4ರಂದು ಪೊಲೀಸರಿಗೆ ದೂರು ನೀಡಿದ್ದರು. ಇದನ್ನೂ ಓದಿ :ಅಣ್ಣಮ್ಮ ದೇವಿಯ ಹರಕೆ ತೀರಿಸಿದ ನಟ ದರ್ಶನ್​ ಪತ್ನಿ ವಿಜಯಲಕ್ಷ್ಮೀ

ದೂರು ನೀಡಿದ ಅದೇ ದಿನ ಯುವತಿಯನ್ನು ಕಿಡ್ನ್ಯಾಪ್‌ ಮಾಡಿದ್ದ ಕಾಮುಕರು ಆಕೆಗೆ ಡ್ರಗ್ಸ್‌ ನೀಡಿ ಕಳುಹಿಸಿದ್ದರು. ಬಳಿಕ ತನ್ನ ಸ್ನೇಹಿತೆಯನ್ನು ಭೇಟಿಯಾದ ಸಂತ್ರಸ್ತೆ ಮೆನೆಗೆ ಬಂದು ಪೋಷಕರ ಬಳಿ ತನಗಾದ ಅನ್ಯಾಯದ ಬಗ್ಗೆ ತಿಳಿಸಿದ್ದಳು. ಬಳಿಕ ಪೋಷಕರು ಪೊಲೀಸರಿಗೆ ಏಪ್ರಿಲ್‌ 6ರಂದು ದೂರು ನೀಡಿದ್ದರು. ದೂರಿನಲ್ಲಿ ತನ್ನ ಮೇಲೆ ಒಂದು ವಾರಗಳ ಕಾಲ 23 ಜನ ಅತ್ಯಾಚಾರ ಎಸಗಿದ್ದಾರೆಂದು ಸಂತ್ರಸ್ತೆ ಹೇಳಿಕೊಂಡಿದ್ದಳು.

Exit mobile version