ಬೆಂಗಳೂರು : ಆರ್ಸಿಬಿ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆದ ರೋಚಕ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಗೆದ್ದು ಬೀಗಿದೆ. ಆರ್ಸಿಬಿ ನೀಡಿದ ಸುಲಭ ಮೊತ್ತವನ್ನು ಬೆನ್ನತ್ತಿದ ಡಿಸಿ ತಂಡ ಕೇವಲ 17.5 ಓವರ್ಗಳಲ್ಲಿ ಗುರಿಯನ್ನು ಬೇದಿಸಿತು. ಆದರೆ ಈ ಪಂದ್ಯದ ಕೊನೆಯವರೆಗಿದ್ದು ಪಂದ್ಯ ಗೆಲ್ಲಿಸಿದ ಕನ್ನಡಿಗ ಕೆ.ಎಲ್ ರಾಹುಲ್ ಮೈದಾನದಲ್ಲಿ ವೃತ್ತ ಬರೆಯುವ ಮೂಲಕ ಇದು ನನ್ನ ನೆಲ. ಇಲ್ಲಿರೊದೆಲ್ಲಾ ನನ್ದೆ ಎಂದು ತೋರಿಸಿದ್ದು ವಿಶೇಷವಾಗಿತ್ತು.
ಟಾಸ್ ಸೋತು ಕಣಕ್ಕೆ ಇಳಿದ ಆರ್ಸಿಬಿ ಉತ್ತಮ ಆರಂಭ ಕಂಡಿತು. ಒಂದೇ ಓವರ್ನಲ್ಲಿ ಫಿಲಿಪ್ ಸಾಲ್ಟ್ 30ರನ್ ಚಚ್ಚಿ ದೊಡ್ಡ ಮೊತ್ತ ಕಲೆ ಹಾಕುವ ಸೂಚನೆ ಕೊಟ್ಟರು. 37 ರನ್ ಗಳಿಸಿರುವಾಗ ಸಾಲ್ಟ್ ರನೌಟ್ಗೆ ಬಲಿಯಾದರು. ನಂತರ ಸ್ಕ್ರೀಸ್ನಲ್ಲಿ ಕಚ್ಚಿಕೊಂಡಿದ್ದ ವಿರಾಟ್ ಕೊಹ್ಲಿ ಕೂಡ ದೊಡ್ಡ ಮೊತ್ತವನ್ನು ಕಲೆಹಾಕದೆ 22 ರನ್ಗೆ ಔಟದರು. ನಂತರ ಬಂದ ಎಲ್ಲಾ ಆರ್ಸಿಬಿ ಬ್ಯಾಟ್ಸಮನ್ಗಳು ಪೆವಿಲಿಯನ್ ಪರೇಡ್ ಆರಂಭಿಸಿದರು. ಕೊನೆಯಲ್ಲಿ ಕೆಲ ಕಾಲ ಬಿರುಸಿನ ಬ್ಯಾಟ್ ಬೀಸಿದ ಟಿಮ್ ಡೇವಿಡ್ 37 ರನ್ಗಳಿಸಿ ತಂಡಕ್ಕೆ ಆಸರೆಯಾದರು. ಕೊನೆಯಲ್ಲಿ ಡೆಲ್ಲಿ ತಂಡಕ್ಕೆ 167 ರನ್ಗಳ ಗುರ ನೀಡಿತು.
ಇದನ್ನೂ ಓದಿ :42ನೇ ವಯಸ್ಸಿನಲ್ಲಿ PUC ಪರೀಕ್ಷೆ ಪಾಸ್ ಮಾಡಿ ಮಾದರಿಯಾದ ಗೃಹಿಣಿ
ಸುಲಭ ಗುರಿಯನ್ನು ಬೆನ್ನತ್ತಿದ ಡೆಲ್ಲಿಗೆ ಆರ್ಸಿಬಿ ಬೌಲರ್ಗಳು ಆರಂಭಿಕ ಆಘಾತ ನೀಡಿದರು. ಕೇವಲ 58ರನ್ಗಳಿಗೆ 4 ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಡೆಲ್ಲಿ ತಂಡಕ್ಕೆ ರಾಹುಲ್ ಆಸರೆಯಾದರು. ಕೇವಲ 53 ಎಸೆತ ಎದುರಿಸಿದ ರಾಹುಲ್ 6 ಸಿಕ್ಸರ್ ಮತ್ತು 7 ಬೌಡರಿ ಸಹಿತ 93ರನ್ಗಳನ್ನು ಕಲೆಹಾಕಿ, ತಂಡವನ್ನು ಗೆಲುವಿನ ದಡಕ್ಕೆ ಸೇರಿಸಿದರು.
ಕೊನೆಯಲ್ಲಿ ಸಿಕ್ಸರ್ ಸಿಡಿಸುವ ಮೂಲಕ ಪಂದ್ಯ ಮುಗಿಸಿದ ರಾಹುಲ್ ಸೆಲಬ್ರೇಷನ್ ಎಲ್ಲರ ಗಮನ ಸೆಳೆಯಿತು. ಮೈದಾನದಲ್ಲಿ ಬ್ಯಾಟ್ ಮೂಲಕ ವೃತ್ತ ಬರೆಯುವ ಮೂಲಕ ಇದು ನನ್ನ ಟೆರಿಟೆರಿ ಎಂದು, ನಾನು ಇಲ್ಲಿಯವನು, ಬೆಂಗಳೂರು ನನ್ನ ಹೃದಯದಲ್ಲಿದೆ ಎಂದು ಸನ್ನೆ ಮಾಡಿ ತೋರಿಸಿದರು.
ಇದನ್ನೂ ಓದಿ : ಮರಗೆಲಸಕ್ಕೆ ಬಂದಿದ್ದ ಇಬ್ಬರು ಯುವಕರು ವಿದ್ಯುತ್ ತಂತಿ ತಗುಲಿ ಸಾ*ವು
ರಾಹುಲ್ನ ಈ ಸೆಲಬ್ರೇಷನ್ಗೆ ಕನ್ನಡಿಗರು ಫಿದಾ ಆಗಿದ್ದು. ಆರ್ಸಿಬಿ ಮ್ಯಾನೆಜ್ಮೆಂಟ್ ವಿರುದ್ದ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ. ಅನೇಕ ವರ್ಷಗಳಿಂದ ರಾಹುಲ್ನನ್ನು ಬೆಂಗಳೂರು ತಂಡ ಖರೀದಿಸಬೇಕು ಎಂದು ಜನರು ಇಚ್ಚೇಯನ್ನು ವ್ಯಕ್ತಪಡಿಸುತ್ತಿದೆ. ಆದರೆ ಆರ್ಸಿಬಿ ಮ್ಯಾನೆಜ್ಮೆಂಟ್ ಮಾತ್ರ ಇವರನ್ನು ಖರೀದಿಸುವ ಗೋಜಿಗೆ ಹೋಗಿಲ್ಲ. ಜೊತೆಗೆ ಮಾಜಿ ಆರ್ಸಿಬಿ ಆಟಗಾರ ಅನಿಲ್ ಕುಂಬ್ಳೆ ಕೂಡ ಬೆಂಗಳೂರು ತಂಡದಲ್ಲಿ ಕನ್ನಡಿಗರಿಗೆ ಅವಕಾಶ ನೀಡುವುದಿಲ್ಲ ಎಂದು ತಣ್ಣಗೆ ತಮ್ಮ ಅಸಮಧಾನ ಹೊರಹಾಕಿದ್ದರು.
