Site icon PowerTV

ತವರು ಮನೆಗೆ ಹೋಗಿದ್ದ ಹೆಂಡತಿಯನ್ನು ಮನೆಗೆ ಕರೆದ ಗಂಡನಿಗೆ ಚಾಕು ಇರಿತ

ಕಲಬುರಗಿ : ಜಗಳವಾಡಿಕೊಂಡು ತವರು ಮನೆಗೆ ಹೋಗಿದ್ದ ಹೆಂಡತಿಯನ್ನು ವಾಪಾಸ್​ ಮನೆಗೆ ಬರುವಂತೆ ಕರೆದಿದ್ದಕ್ಕೆ ಕರೆಳಿದ ಮಹಿಳೆಯ ಸಹೋದರರು ಬಾಮೈದನಿಗೆ ಚಾಕು ಹಾಕಿರುವ ಘಟನೆ ಕಲಬುರಗಿಯಲ್ಲಿ ನಡೆದಿದ್ದು. ಬ್ರಹ್ಮಪುರ ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕಲಬುರಗಿ ನಗರದ ಗಾಜಿಪುರ ಬಡಾವಣೆಯ ನಿವಾಸಿಯಾದ ಆನಂದ್ ಕಳೆದ ಎರಡು ವರ್ಷದ ಹಿಂದೆ ಇದೇ ಸ್ನೇಹ ಎಂಬ ಹುಡುಗಿಯನ್ನ ಪ್ರೀತಿಸಿ ಮದುವೆಯಾಗಿದ್ದನು.  ಮದುವೆಯಾದ ಬಳಿಕ ಗಂಡ-ಹೆಂಡತಿ ಇಬ್ಬರು ಅನ್ಯೂನ್ಯವಾಗಿ ಜೀವನ ಸಾಗಿಸುತ್ತಿದ್ದರು. ಆದರೆ ಕಳೆದ ಕೆಲ ತಿಂಗಳಿನಿಂದ ಸಣ್ಣ ಪುಟ್ಟ ವಿಚಾರಕ್ಕೆಲ್ಲಾ ಗಂಡ ಹೆಂಡತಿಯ ಮಧ್ಯೆ ಗಲಾಟೆ ಆಗ್ತಿತ್ತು. ಗಲಾಟೆ ನಡೆದಾಗಲೆಲ್ಲಾ ಸ್ನೇಹ ಮುನಿಸಿಕೊಂಡು ತವರು ಮನೆಗೆ ಹೋಗುತ್ತಿದ್ದಳು. ನಂತರ ಕೆಲ ದಿನಗಳ ನಂತರ ವಾಪಾಸಾಗುತ್ತಿದ್ದರು.

ಇದನ್ನೂ ಓದಿ :ತಮಿಳುನಾಡು ಬಿಜೆಪಿಗೆ ನೂತನ ಸಾರಥಿಯಾಗಿ ನೈನರ್​ ನಾಗೇಂದ್ರನ್ ಅವಿರೋಧ ಆಯ್ಕೆ

ಆದರೆ ಕಳೆದ ತಿಂಗಳು ಗಂಡ-ಹೆಂಡತಿಯ ನಡುವೆ ಜೋರಾಗಿ ಗಲಾಟೆಯಾಗಿದ್ದು. ಸ್ನೇಹ ಮನೆಯನ್ನು ಬಿಟ್ಟು ತವರು ಮನೆ ಸೇರಿದ್ದಳು. ಆದರೆ ಸ್ನೇಹಳ ಗಂಡ ಆನಂದ್​ ಸಹೋದರನ ಮದುವೆ ಇದೆ, ವಾಪಸು ಮನೆಗೆ ಬಾ ಎಂದು ಹೆಂಡತಿಯನ್ನು ಕರೆದಿದ್ದನು. ಇದರಿಂದ ಕೆರಳಿದ್ದ ಸ್ನೇಹ ಸಹೋದರರು ಚಾಕುವಿನಿಂದ ಇರಿದು ಆನಂದ್​ನ ಕೊಲೆ ಮಾಡಲು ಯತ್ನಿಸಿದ್ದಾರೆ.

ಗಂಭೀರವಾಗಿ ಗಾಯಗೊಂಡ ಆನಂದ್ ಜಿಮ್ಸ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ಮಾಡುತ್ತಿದ್ದು, ಘಟನೆ ಸಂಬಂಧ ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ‌‌. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಚಾಕು ಇರಿದು ತಲೆ ಮರೆಸಿಕೊಂಡಿರುವ ಟೋನಿ ಮತ್ತು ಆತನ ಸ್ನೇಹಿತರಿಗಾಗಿ ಹುಡುಕಾಟ ಆರಂಭಿಸಿದ್ದಾರೆ.

Exit mobile version