Site icon PowerTV

ತಹವೂರ್​ ರಾಣನ ಪೌರತ್ವ ರದ್ದುಗೊಳಿಸಿದ್ದೇವೆ, ಆತ ನಮ್ಮ ಪ್ರಜೆಯಲ್ಲ: ಪಾಕಿಸ್ತಾನ ವಿದೇಶಾಂಗ ಇಲಾಖೆ

ಇಸ್ಲಾಮಾಬಾದ್‌: ಮುಂಬೈ ದಾಳಿಯ ಉಗ್ರ ತಹವ್ವೂರ್ ರಾಣಾನನ್ನು ಅಮೇರಿಕಾದಿಂದ ಭಾರತಕ್ಕೆ ಕರೆತಂದಿದ್ದು. ಇದರ ಬೆನ್ನಲ್ಲೇ ಪಾಕಿಸ್ತಾನ ಹೇಳಿಕೆ ಬಿಡುಗಡೆ ಮಾಡಿದ್ದು. ಉಗ್ರ ತಹವೂರ್​ ರಾಣ ತನ್ನ ಪ್ರಜೆಯಲ್ಲ, ಆತ ಕೆನಡಾದ ಪ್ರಜೆ ಎಂದು ಸ್ಪಷ್ಟಿಕರಿಸಿದೆ.

ಮುಂಬೈ ದಾಳಿಯ ಮಾಸ್ಟರ್​ ಮೈಂಡ್​ ತಹವೂರ್​ ರಾಣನನ್ನು ಅಮೆರಿಕಾದಿಂದ ಭಾರತಕ್ಕೆ ಕರೆತರಲಾಗಿದೆ. ಇದರ ಬೆನ್ನಲ್ಲೆ ಪಾಕಿಸ್ತಾನ ವಿದೇಶಾಂಗ ಸಚಿವಾಲಯ ಈ ವಿಷಯದಿಂದ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದು. ರಾಣಾ ಎರಡು ದಶಕಗಳಿಗೂ ಹೆಚ್ಚು ಕಾಲ ತನ್ನ ಪೌರತ್ವವನ್ನು ನವೀಕರಿಸದ ಕಾರಣ ಆತನ ಪೌರತ್ವವನ್ನು ಪಾಕಿಸ್ತಾನ ರದ್ದುಗೊಳಿಸಿದೆ. ಆತ ಪಾಕಿಸ್ತಾನಿ ಪ್ರಜೆಯಲ್ಲ, ಆತ ಕೆನಡಾದ ಪ್ರಜೆ ಎಂದು ಹೇಳಿದೆ.

ಇದನ್ನೂ ಓದಿ :ನಾವು ಭ್ರಷ್ಟಚಾರ ಮಾಡಿಲ್ಲ, ಬಿಜೆಪಿಯವರು ಮಾಡಿದ್ದನ್ನ ರಾಯರೆಡ್ಡಿ ಹೇಳಿದ್ದಾರೆ; ಈಶ್ರರ್​ ಖಂಡ್ರೆ

ಗುಪ್ತಚರ ವರದಿಗಳ ಪ್ರಕಾರ, ರಾಣಾ ಪಾಕಿಸ್ತಾನದ ಐಎಸ್‌ಐ ಜೊತೆ ಆಳವಾದ ಸಂಪರ್ಕ ಹೊಂದಿದ್ದ ಮತ್ತು ಪಾಕ್‌ ಸೇನೆಗೆ ಬೆಂಬಲ ನೀಡಿದ್ದ. ಮುಂಬೈ ದಾಳಿಯ ಸಂಚು ರೂಪಿಸುವಲ್ಲಿ ಪಾಕಿಸ್ತಾನದ ನೇರ ಪಾತ್ರದ ಬಗ್ಗೆ ರಾಣಾ ಬಹಿರಂಗ ಪಡಿಸುವ ಸಾಧ್ಯತೆಯಿದೆ.

Exit mobile version