Site icon PowerTV

ನಾವು ಭ್ರಷ್ಟಚಾರ ಮಾಡಿಲ್ಲ, ಬಿಜೆಪಿಯವರು ಮಾಡಿದ್ದನ್ನ ರಾಯರೆಡ್ಡಿ ಹೇಳಿದ್ದಾರೆ; ಈಶ್ರರ್​ ಖಂಡ್ರೆ

ಬೀದರ್ : ಕರ್ನಾಟಕ ಭ್ರಷ್ಟಚಾರದಲ್ಲಿ ಭಾರತದಲ್ಲಿ ನಂಬರ್​ ಒನ್​ ಸ್ಥಾನದಲ್ಲಿದೆ ಎಂಬ ಬಸವರಾಜ್​ ರಾಯರೆಡ್ಡಿಯವರ ಹೇಳಿಕೆ ಕುರಿತು ಸಚಿವ ಈಶ್ವರ್ ಖಂಡ್ರೆ ಸ್ಪಷ್ಟನೆ ನೀಡಿದ್ದು. ಬಿಜೆಪಿ ಸರ್ಕಾರದ ವೇಳೆ ನಮ್ಮ ರಾಜ್ಯ ಭ್ರಷ್ಟಾಚಾರದಲ್ಲಿ ನಂಬರ್​ ಸ್ಥಾನದಲ್ಲಿತ್ತು. ರಾಯರೆಡ್ಡಿಯವರು ಅದನ್ನು ತಲೆಯಲ್ಲಿ ಇಟ್ಟುಕೊಂಡು ಬಾಯಿತಪ್ಪಿ ಹೇಳಿದ್ದಾರೆ ಎಂದು ರಾಯರೆಡ್ಡಿಯವರ ಹೇಳಿಕೆಯನ್ನು ಸಮರ್ಥಿಸಿಕೊಂಡರು.

ಗುತ್ತಿಗೆದಾರರ ಸಂಘದಿಂದ ಬಿಲ್ ಪಾವತಿಸುವಂತೆ ಸರ್ಕಾರಕ್ಕೆ ಪತ್ರ ವಿಚಾರವಾಗಿ ಮಾತನಾಡಿದ ಈಶ್ವರ್​ಖಂಡ್ರೆ .
“ಬಿಜೆಪಿ ಸರ್ಕಾರ ಇದ್ದ ಸಂದರ್ಭದಲ್ಲಿ ಆರ್ಥಿಕ ಅನುಮೋದನೆ ಇಲ್ಲದೆ ಸಾವಿರಾರು ಕೋಟಿ ಟೆಂಡರ್ ಮಾಡಿಸಿದ್ದಾರೆ. ಹಣ ಮೀಸಲಿಡದೇ ಟೆಂಡರ್ ಮಾಡಿಸಿದಕ್ಕೆ ಈ ರೀತಿ ಸಮಸ್ಯೆಯಾಗುತ್ತಿದೆ ಎಂದು ಹೇಳಿದರು.

ಇದನ್ನೂ ಓದಿ :ಅಗತ್ಯ ವಸ್ತುಗಳ ದರ ಏರಿಕೆ; ಬಸ್​ ನಿಲ್ದಾಣದಲ್ಲಿ ಬಿಸಿನೀರು ಕಾಯಿಸಿ ಪ್ರತಿಭಟಿಸಿದ ವಾಟಾಳ್​

ಕೇಂದ್ರ ಸರ್ಕಾರದ ವಿರುದ್ದ ಬಿಜೆಪಿ ಹೋರಾಟ ಮಾಡಬೇಕು..!

ಬಿಜೆಪಿ ಪಕ್ಷ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ಮಾಡಲಿ. ಬೆಲೆ ಏರಿಕೆ ಕೇಂದ್ರ ಸರ್ಕಾರ ಮಾಡಿದ್ದು, ಇದಕ್ಕೆ ಹೊಣೆಗಾರಿಕೆ ಯಾರು..? ಬಿಜೆಪಿಯವರು ಕೇಂದ್ರದ ವಿರುದ್ಧ ಹೋರಾಟ ಮಾಡಲಿ, ನಾವು ಸಹಕಾರ ಮಾಡುತ್ತೇವೆ. ಪೆಟ್ರೋಲ್, ಡಿಸೇಲ್, ಸಿಲಿಂಡರ್ ಬೆಲೆ ಹೆಚ್ಚು ಮಾಡಿದ್ದಾರೆ. ಅವರು ದ್ವೇಷ, ಜಾತಿ, ಧರ್ಮದ ರಾಜಕಾರಣ ಮಾಡುತ್ತಾರೆ.

ನಿರುದ್ಯೋಗದ ಸಮಸ್ಯೆ ಇದೆ ಅದನ್ನ ಬಗೆ ಹರಿಸುವ ಕೆಲಸ ಮಾಡಲ್ಲ. ಇವತ್ತು ಯಾರ್ಯಾರು ಅತಿ ಶ್ರೀಮಂತ ಇರುವ ಅವರ ಸ್ನೇಹಿತರಿಗೆ ಸರ್ಕಾರದ ಆಸ್ತಿ ಮಾರಾಟ ಮಾಡುತ್ತಾರೆ. ದೇಶದ ಆರ್ಥಿಕತೆ ಹಾಳು ಮಾಡುತ್ತಾರೆ ಅದಕ್ಕೆ ಉತ್ತರ ಕೊಡಬೇಕಿಲ್ಲ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದರು.

Exit mobile version