Site icon PowerTV

ಅಗತ್ಯ ವಸ್ತುಗಳ ದರ ಏರಿಕೆ; ಬಸ್​ ನಿಲ್ದಾಣದಲ್ಲಿ ಬಿಸಿನೀರು ಕಾಯಿಸಿ ಪ್ರತಿಭಟಿಸಿದ ವಾಟಾಳ್​

ರಾಮನಗರ : ಅಗತ್ಯ ವಸ್ತುಗಳ ದರ ಏರಿಕೆ ಖಂಡಿಸಿ ಕನ್ನಡಪರ ಹೋರಾಟಗಾರ ವಾಟಾಳ್​ ನಾಗರಾಜ್ ವಿಭಿನ್ನವಾಗಿ ಪ್ರತಿಭಟನೆ ನಡೆಸಿದ್ದು. ರಾಮನಗರದ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದಲ್ಲಿ ಸೌದೆ ಒಲೆ ಹಾಕಿ ಬಿಸಿನೀರು ಕಾಯಿಸಲು ಮುಂದಾಗಿದ್ದಾರೆ.

ರಾಮನಗರದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದ ಬಳಿ ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ ವಾಟಾಳ್​ ನಾಗರಾಜ್​. ಕೇಂದ್ರ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿದರು. ಜೊತೆಗೆ ಕೆಎಸ್​ಆರ್​ಟಿಸಿ ಬಸ್​ ನಿಲ್ದಾಣದ ಬಳಿ ಸೌದೆ ಒಲೆ ಹಾಕಿ ಬಿಸಿನೀರು ಕಾಯಿಸಲು ಮುಂದಾದರು. ಈ ವೇಳೆ ಅಡ್ಡ ಬಂದ ಪೊಲೀಸರು ಒಲೆ ಹಚ್ಚಲು ತಡೆ ಒಡ್ಡಿದ್ದು. ವಾಟಾಳ್​ ನಾಗರಾಜ್​ ಸೇರಿದಂತೆ, ಕನ್ನಡಪರ ಹೋರಾಟಗಾರರನ್ನು ಬಂಧಿಸಿದ್ದಾರೆ.

ಇದನ್ನೂ ಓದಿ :17 ವರ್ಷಗಳ ನಂತರ ಉಗ್ರ ಜಂತು ತಹವೂರ್​ ರಾಣಾ ಭಾರತಕ್ಕೆ ಹಸ್ತಾಂತರ

ಈ ವೇಳೆ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ವಾಟಾಳ್ ನಾಗರಾಜ್ ಕಿಡಿ ಕಾರಿದ್ದು.”ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ಅಗತ್ಯ ವಸ್ತುಗಳ ದರ ಏರಿಕೆ ಮಾಡಿವೆ. ಹಾಲು, ವಿದ್ಯುತ್, ಡೀಸೆಲ್, ಸಿಲಿಂಡರ್ ದರಗಳ ದರ ಏರಿಕೆ ಆಗಿದೆ. ಇದೀಗ ಬೆಲೆ ಏರಿಕೆ ವಿರುದ್ಧ ಬಿಜೆಪಿ-ಕಾಂಗ್ರೆಸ್ ಪರಸ್ಪರ ಹೋರಾಟ ಮಾಡ್ತಿವೆ. ಇದು ಭ್ರಷ್ಟಾಚಾರಿಗಳ ವಿರುದ್ಧ ಭ್ರಷ್ಟಾಚಾರಿಗಳೇ ಮಾಡ್ತಿರೋ ಹೋರಾಟ. ಕೂಡಲೇ ರಾಜ್ಯ ಹಾಗೂ ಕೇಂದ್ರ ಸರ್ಕಾರ ಬೆಲೆ ಏರಿಕೆಗಳನ್ನ ಇಳಿಸಬೇಕು. ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟ ಮಾಡುತ್ತೇವೆ ಎಂದು ವಾಟಾಳ್​ ನಾಗರಾಜ್ ಎಚ್ಚರಿಕೆ ನೀಡಿದರು.

Exit mobile version